ನವದೆಹಲಿ:ಮಹಾಮಾರಿ ಕೊರೊನಾ ಆರ್ಭಟ ದೇಶದಲ್ಲಿ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಕೆಲ ದಿನಗಳಿಂದ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳು ದಾಖಲಾಗುತ್ತಿದ್ದು, ಇಂದು ಒಂದೇ ದಿನ 14 ಸಾವಿರಕ್ಕೂ ಅಧಿಕ ಕೇಸ್ ಪತ್ತೆಯಾಗಿವೆ.
ದೇಶದಲ್ಲಿ ನಿಲ್ಲದ ಕೊರೊನಾರ್ಭಟ... 4 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ! - ದೇಶದಲ್ಲಿ ಕೋವಿಡ್-19
ದೇಶದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಇಂದು ಒಂದೇ ದಿನ 14 ಸಾವಿರಕ್ಕೂ ಅಧಿಕ ಕೇಸ್ ಪತ್ತೆಯಾಗಿದ್ದು, ಮತ್ತಷ್ಟು ಅತಂಕ ಮೂಡಿಸಿದೆ.
ದೇಶದಲ್ಲಿ ಸದ್ಯ 4,00,412 ಕೋವಿಡ್ ಪ್ರಕರಣಗಳಿದ್ದು, ಇದರಲ್ಲಿ 2,14,206 ಜನರು ಗುಣಮುಖರಾಗಿದ್ದಾರೆ. ಉಳಿದಂತೆ 13,000 ಜನರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿಯಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು, ಪ್ರತಿದಿನ ಸಾವಿರಾರು ಹೊಸ ಕೇಸ್ಗಳು ಪತ್ತೆಯಾಗುತ್ತಿವೆ.
ಮಹಾರಾಷ್ಟ್ರದಲ್ಲಿ ಸದ್ಯ 1.24 ಲಕ್ಷ ಕೋವಿಡ್ ಪ್ರಕರಣಗಳಿದ್ದು, ತಮಿಳುನಾಡಿನಲ್ಲಿ 56,845 ಹಾಗೂ ದೆಹಲಿಯಲ್ಲಿ 53,000 ಕೋವಿಡ್ ಕೇಸ್ಗಳು ದಾಖಲಾಗಿವೆ. ಪ್ರಪಂಚದಾದ್ಯಂತ 86 ಲಕ್ಷ ಜನರಿಗೆ ಕೋವಿಡ್ ಸೋಂಕು ತಗುಲಿದ್ದು, ಇಲ್ಲಿಯವರೆಗೆ 4.5 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳಿದ್ದು, 22 ಲಕ್ಷದ 97 ಸಾವಿರ ಕೇಸ್ಗಳಲ್ಲಿ 1.1 ಲಕ್ಷ ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ. ಉಳಿದಂತೆ ಬ್ರೆಜಿಲ್ 2ನೇ ಸ್ಥಾನದಲ್ಲಿದ್ದು, 10 ಲಕ್ಷಕ್ಕೂ ಅಧಿಕ ಕೇಸ್ಗಳಿವೆ. ಹಾಗೇ ರಷ್ಯಾದಲ್ಲಿ 5 ಲಕ್ಷ ಕೋವಿಡ್ ಕೇಸ್ಗಳಿವೆ.