ಕರ್ನಾಟಕ

karnataka

ETV Bharat / bharat

ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ.... ಹಿರಿಯ ವಕೀಲರೇ ಗೈರು..!

ಹಿರಿಯ ವಕೀಲರಾದ ರೋಹ್ಟಗಿ ಹಾಗೂ ಸಿಂಘ್ವಿ ಅನುಪಸ್ಥಿತಿಯಲ್ಲಿ ಆದೇಶ ನೀಡಲು ಸಾಧ್ಯವಿಲ್ಲ ಎಂದಿರುವ ಮುಖ್ಯ ನ್ಯಾಯಮೂರ್ತಿ, ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ದಾರೆ.

By

Published : Jul 24, 2019, 11:47 AM IST

Updated : Jul 24, 2019, 11:55 AM IST

ಅರ್ಜಿ

ನವದೆಹಲಿ: ಸ್ಪೀಕರ್​ ಹಾಗೂ ಸರ್ಕಾರಕ್ಕೆ ಇಂದೇ ವಿಶ್ವಾಸಮತ ಸಾಬೀತು ಮಾಡುವಂತೆ ಕೋರಿ ಸುಪ್ರೀಂಕೋರ್ಟ್​​ಗೆ ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನ ಇಂದು ಸುಪ್ರೀಂಕೋರ್ಟ್​ ಕೈಗೆತ್ತಿಕೊಂಡಿತ್ತು.

ಮಂಗಳವಾರ ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಇಂದಿಗೆ ಮುಂದೂಡಿತ್ತು. ಇಂದು ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಸಿಜೆಐ, ಪಕ್ಷೇತರ ಶಾಸಕರ ಪರ ವಕೀಲ ಮುಕುಲ್​​ ರೋಹ್ಟಗಿ, ಹಾಗೂ ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಇಬ್ಬರು ಹಿರಿಯ ವಕೀಲರಾದ ಮುಕುಲ್​ ರೋಹ್ಟಗಿ ಮತ್ತು ಅಭಿಷೇಕ್​ ಮನು ಸಿಂಘ್ವಿ ಕೋರ್ಟ್​ ಕಲಾಪಕ್ಕೆ ಹಾಜರಾಗಿರಲಿಲ್ಲ.

ಹಿರಿಯ ವಕೀಲರಾದ ರೋಹ್ಟಗಿ ಹಾಗೂ ಸಿಂಘ್ವಿ ಅನುಪಸ್ಥಿತಿಯಲ್ಲಿ ಆದೇಶ ನೀಡಲು ಸಾಧ್ಯವಿಲ್ಲ ಎಂದಿರುವ ಮುಖ್ಯ ನ್ಯಾಯಮೂರ್ತಿ, ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ದಾರೆ.

ಸದನದಲ್ಲಿ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಯಲ್ಲಿ ಸೋತ ಪರಿಣಾಮ ಇಂದಿನ ವಿಚಾರಣೆ ಮಹತ್ವ ಕಳೆದುಕೊಂಡಿತ್ತು. ವಿಪ್​ ಜಾರಿ ಬಗ್ಗೆ ಗೊಂದಲ ಹಾಗೂ ಕಲಾಪದ ವೇಳೆ ರಾಜ್ಯಪಾಲರು ಸೂಚನೆ ನೀಡಬಹುದೇ ಎನ್ನುವ ಕುರಿತಾಗಿ ಎರಡು ಅರ್ಜಿಗಳು ಸುಪ್ರೀಂನಲ್ಲಿ ಸಲ್ಲಿಕೆಯಾಗಿದ್ದು, ಹೀಗಾಗಿ ಮೂರು ಅರ್ಜಿಗಳಿಗೆ ಸಂಬಂಧಿಸಿದಂತೆ ಒಂದೇ ದಿನ ತೀರ್ಪು ನೀಡುವ ಸಾಧ್ಯತೆ ಇದೆ.

Last Updated : Jul 24, 2019, 11:55 AM IST

ABOUT THE AUTHOR

...view details