ಕರ್ನಾಟಕ

karnataka

ETV Bharat / bharat

ವೃತ್ತಿಪರರಿಗೆ ಫುಲ್ ಡಿಮಾಂಡ್... ರಾಜ್ಯಕ್ಕೆ ವಿಮಾನದ ಮೂಲಕ ಬಂದ ಜಾರ್ಖಂಡ್ ಮೂಲದ ಕಾರ್ಮಿಕರು!

ಲಾಕ್​ಡೌನ್​ ಹಿನ್ನೆಲೆಯಲ್ಲಿ ವಿಜಯಪುರದಿಂದ ತಮ್ಮ ರಾಜ್ಯಕ್ಕೆ ತೆರಳಿದ್ದ ಜಾರ್ಖಂಡ್​ ಮೂಲದ ಕಾರ್ಮಿಕರು, ಮಾಲೀಕರ ಕರೆ ಹಿನ್ನೆಲೆಯಲ್ಲಿ ಮತ್ತೆ ವಾಪಸ್ ಆಗಿದ್ದಾರೆ.

Jharkhand workers return to Karnataka
ರಾಜ್ಯಕ್ಕೆ ಜಾರ್ಖಂಡ್ ಮೂಲದ ಕಾರ್ಮಿಕರು ವಾಪಾಸ್

By

Published : Jun 8, 2020, 9:37 PM IST

ರಾಂಚಿ(ಜಾರ್ಖಂಡ್): ಲಾಕ್​ಡೌನ್​ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಮನೆಗೆ ತೆರಳಿದ್ದ ಜಾರ್ಖಂಡ್ ಮೂಲದ​ ಕಾರ್ಮಿಕರು ಮತ್ತೆ ತಮ್ಮ ರಾಜ್ಯದಿಂದ ಕರ್ನಾಟಕಕ್ಕೆ ವಾಪಸ್​ ಆಗಿದ್ದಾರೆ.

ಜಾರ್ಖಂಡ್​ನ 7 ಜನ ಕಾರ್ಮಿಕರು ವಿಜಯಪುರದ ಕ್ರಷರ್​ನಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್​ಡೌನ್​ ನಿಯಮಗಳು ಸಡಿಲವಾಗಿ ಮತ್ತೆ ಕೆಲಸ ಕಾರ್ಯಗಳು ಪ್ರಾರಂಭವಾಗುತ್ತಿದ್ದಂತೆ ವೃತ್ತಿಪರ ಕಾರ್ಮಿಕರಿಗೆ ಕರೆ ಮಾಡಿ ವಿಮಾನದ ವ್ಯವಸ್ಥೆಯನ್ನೂ ಮಾಡಲಾಗಿದೆ.

ರಾಜ್ಯಕ್ಕೆ ಜಾರ್ಖಂಡ್ ಮೂಲದ ಕಾರ್ಮಿಕರು ವಾಪಸ್

ಈ ಬಗ್ಗೆ ಮಾತನಾಡಿರುವ ಕಾರ್ಮಿಕನೋರ್ವ, ಕಳೆದ 2 ತಿಂಗಳಿಂದ ಕೆಲಸವಿಲ್ಲದೆ ಸಾಕಷ್ಟು ಕಷ್ಟವಾಗಿತ್ತು. ಆದರೀಗ ನಾವು ಕಲಿತ ಕೆಲಸ ನಮ್ಮ ಕೈಹಿಡಿದಿದೆ. ಕ್ರಷರ್​ ಮಾಲೀಕರು ನಮಗೆ ಕರೆ ಮಾಡಿ ಕೆಲಸಕ್ಕೆ ಬರುವಂತೆ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ನಾವು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದೇವೆ ಎಂದಿದ್ದಾರೆ.

7 ಜನ ಕಾರ್ಮಿಕರು ರಾಂಚಿ ವಿಮಾನ ನಿಲ್ದಾಣದಿಂದ ಹೈದರಾಬಾದ್​ಗೆ ಪ್ರಯಾಣ ಬೆಳೆಸಿದ್ದು, ಅಲ್ಲಿಂದ ರಸ್ತೆ ಮಾರ್ಗದಲ್ಲಿ ವಿಯಯಪುರ ತಲುಪಿದ್ದಾರೆ. ಲಾಕ್​ಡೌನಿಂದ ಲಕ್ಷಾಂತರ ಜನರು ಕೆಲಸ ಕಳೆದುಕೊಂಡು ಮನೆ ಸೇರುವಂತಾಗಿತ್ತು. ನಿಯಮಗಳಲ್ಲಿ ಕೊಂಚ ಸಡಿಲಿಕೆಯಾದ ನಂತರ ಮತ್ತೆ ಕೆಲಸಕ್ಕೆ ಮರಳುವಂತಾಗಿದೆ.

ABOUT THE AUTHOR

...view details