ಕರ್ನಾಟಕ

karnataka

ETV Bharat / bharat

ಯಾವುದೀ ಪ್ರವಾಹವೂ! 24 ಗಂಟೆಯಲ್ಲಿ ಪ್ರವಾಹಕ್ಕೆ 17, ಸಿಡಿಲಿಗೆ 55 ಸೇರಿ 72 ಜನ ಬಲಿ! - ಸಿಡಿಲಿಗೆ 55

ವರುಣನ ಆರ್ಭಟಕ್ಕೆ ಬಿಹಾರ, ಜಾರ್ಖಂಡ್​ ತತ್ತರಿಸಿದೆ. ಕೇವಲ ಒಂದೇ ದಿನಕ್ಕೆ ಪ್ರವಾಹ ಮತ್ತು ಸಿಡಿಲಿಗೆ 72 ಜನರು ಸಾವನ್ನಪ್ಪಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Jul 25, 2019, 4:47 PM IST

ವಿಪರೀತ ಗುಡುಗು ಸಹಿತ ಮಳೆಗೆ ಬಿಹಾರ ರಾಜ್ಯ ಅಕ್ಷರಶಃ ನಲುಗಿದೆ. ಧಾರಾಕಾರ ಮಳೆಯಿಂದ ಭಾರಿ ಪ್ರವಾಹ ಉಂಟಾಗಿದ್ದು ಒಂದೆಡೆ ಆದ್ರೆ, ಮತ್ತೊಂದೆಡೆ ಗುಡುಗು-ಸಿಡಿಲಿನ ಆರ್ಭಟವೂ ಹೆಚ್ಚಾಗಿದೆ. ಇದ್ರಿಂದಾಗಿ 60ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಯಾವುದೀ ಪ್ರವಾಹವೂ?

ಮಂಗಳವಾರ ಸುರಿದ ಕುಂಭದ್ರೋಣ ಮಳೆಗೆ ಬಿಹಾರದಲ್ಲಿ ಉಂಟಾದ ಪ್ರವಾಹಕ್ಕೆ 17 ಜನ ಮೃತಪಟ್ಟಿದ್ದಾರೆ. ಸಿಡಿಲಿಗೆ 43 ಜನರ ಪ್ರಾಣಪಕ್ಷಿ ಹಾರಿಹೋಗಿದೆ. ಇಲ್ಲಿನ ಜಮುಇ ಜಿಲ್ಲೆಯಲ್ಲೇ 8 ಜನರು ಸಿಡಿಲಿಗೆ ಆಹುತಿಯಾಗಿದ್ದಾರೆ. ಮೃತಪಟ್ಟ ಕುಟುಂಬಳಿಗೆ ಜಿಲ್ಲಾಧಿಕಾರಿ 4 ಲಕ್ಷ ರೂ ಪರಿಹಾರಧನ ಘೋಷಿಸಿದ್ದಾರೆ.

ಜಾರ್ಖಂಡ್‌ನಲ್ಲೂ ಕಷ್ಟನಷ್ಟ:

ಜಾರ್ಖಂಡ್​ನ ಜಮತಾಡ್​ ಜಿಲ್ಲೆಯೊಂದರಲ್ಲಿ 12 ಜನರು ಸಾವನ್ನಪ್ಪಿದ್ದಾರೆ. ಇಲ್ಲಿನ ರಾಮಗಡ್​ನಲ್ಲಿ ಮಕ್ಕಳು ಕ್ರಿಕೆಟ್​ ಆಟವಾಡುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಬಿರುಸಿನಿಂದ ಸಾಗಿದೆ.

ABOUT THE AUTHOR

...view details