ಕರ್ನಾಟಕ

karnataka

By

Published : Apr 28, 2020, 2:41 PM IST

ETV Bharat / bharat

ನಾಗರಿಕರ ಹಕ್ಕುಗಳ ರಕ್ಷಣೆ, ಜೀವ ಉಳಿಸಲು ನ್ಯಾಯಾಲಯ ಮಧ್ಯಪ್ರವೆಶಿಸಲಿದೆ: ಸಿಜೆಐ

ನಾಗರಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಅವರ ಜೀವ ಉಳಿಸುವಲ್ಲಿ ನ್ಯಾಯಯಾಲಯ ಮಧ್ಯಪ್ರವೆಶಿಸಲು ಯಾವಾಗಲೂ ತಯಾರಾಗಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಹೇಳಿದ್ದಾರೆ.

bobde
bobde

ನವದೆಹಲಿ: ವಿಪತ್ತು ಅಥವಾ ಸಾಂಕ್ರಾಮಿಕ ರೋಗವನ್ನು ಕಾರ್ಯಾಂಗದಿಂದ ಉತ್ತಮವಾಗಿ ನಿಭಾಯಿಸಬಹುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಹೇಳಿದ್ದಾರೆ.

ಕೊರೊನಾ ವೈರಸ್ ಭೀತಿಯನ್ನು ನ್ಯಾಯಾಂಗವು ಹೇಗೆ ನಿಭಾಯಿಸುತ್ತಿದೆ ಎಂಬುದರ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ, ಜನ, ಹಣ ಮತ್ತು ವಸ್ತುಗಳನ್ನು ಹೇಗೆ ನಿಯೋಜಿಸಬೇಕು, ಹೇಗೆ ಆದ್ಯತೆ ನೀಡಬೇಕು ಎಂಬುದನ್ನು ಕಾರ್ಯಾಂಗ ನಿರ್ಧರಿಸುವುದು ಅಗತ್ಯ ಎಂದು ಹೇಳಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಮನವಿಗಳ ವಿಚಾರಣೆ ಮಾಡಲಾಗುತ್ತಿದೆ. ಆದರೆ ಇದು ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸುವಷ್ಟು ಪರಿಪೂರ್ಣವಾಗಿರುವುದಿಲ್ಲ ಎಂದು ಹೇಳಿದರು.

ನಾಗರಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಅವರ ಜೀವ ಉಳಿಸಲು ನ್ಯಾಯಯಾಲಯ ಯಾವತ್ತೂ ಮಧ್ಯಪ್ರವೆಶಿಸಲು ತಯಾರಾಗಿರುತ್ತದೆ. ಆಶ್ರಯ ಮತ್ತು ಆಹಾರ ನೀಡುವಂತೆ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಿದ್ದೇವೆ ಎಂದರು.

"2020ರ ಜನವರಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿದಿನ 205 ಪ್ರಕರಣಗಳು ದಾಖಲಾಗಿದ್ದವು. ಆದರೆ ಏಪ್ರಿಲ್‌ನಲ್ಲಿ ಕೇವಲ 305 ಪ್ರಕರಣಗಳನ್ನು ಮಾತ್ರ ಇ-ಫೈಲಿಂಗ್ ಮೂಲಕ ದಾಖಲಿಸಲಾಗಿದ್ದು, ಅಪರಾಧ ಪ್ರಮಾಣ ಕಡಿಮೆಯಾಗಿದೆ."ಎಂದು ಅವರು ಹೇಳಿದರು.

ABOUT THE AUTHOR

...view details