ಕರ್ನಾಟಕ

karnataka

ETV Bharat / bharat

ಇನ್ನಷ್ಟು ಮೊದಲೇ ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿಷೇಧಿಸಬೇಕಿತ್ತು: ಛತ್ತೀಸಗಢ ಸಿಎಂ - ತಬ್ಲೀಘಿ ಜಮಾತ್

ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ಮೊದಲೇ ರದ್ದುಗೊಳಿಸಿದ್ದಲ್ಲಿ ವಿದೇಶಿಯರ ಆಗಮನ ತಡೆಯಬಹುದಿತ್ತು ಹಾಗೂ ಕೋವಿಡ್​ ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸಬಹುದಿತ್ತು ಎಂದು ಛತ್ತೀಸಗಢ ಸಿಎಂ ಬಾಘೇಲ್ ಹೇಳಿದ್ದಾರೆ. ಖಾಸಗಿ ಲ್ಯಾಬ್​ಗಳು ನಡೆಸುವ ಕೋವಿಡ್​ ಟೆಸ್ಟ್​ ಖರ್ಚನ್ನು ಕೇಂದ್ರ ಸರಕಾರವೇ ಭರಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.

cm-bhupesh-baghael
cm-bhupesh-baghael

By

Published : Apr 10, 2020, 5:30 PM IST

ಹೊಸದಿಲ್ಲಿ: ಭಾರತದಲ್ಲಿ ಕೋವಿಡ್​-19 ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸರಿಯಾದ ನಿರ್ಧಾರ ಕೈಗೊಳ್ಳಲಿಲ್ಲ. ಇನ್ನಷ್ಟು ಮೊದಲೇ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದ್ದರೆ ಕೊರೊನಾ ವೈರಸ್​ ಇಷ್ಟೊಂದು ಹರಡುತ್ತಿರಲಿಲ್ಲ ಎಂದು ಛತ್ತೀಸಗಢ ಸಿಎಂ ಭೂಪೇಶ ಬಾಘೇಲ್ ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್​ ಮೂಲಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ವೈರಸ್ ಭಾರತದಲ್ಲಿ ಹುಟ್ಟಿದ್ದಲ್ಲ. ಬೇರೆ ದೇಶಗಳಿಂದ ಇದು ಭಾರತಕ್ಕೆ ಬಂದಿದೆ. ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಂಡು ಬೇಗನೇ ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿಷೇಧಿಸಬೇಕಿತ್ತು. ಹಾಗೆಯೇ ಬೇರೆ ದೇಶಗಳಿಂದ ಬಂದ ಎಲ್ಲರನ್ನೂ ಕ್ವಾರಂಟೈನ್​ನಲ್ಲಿರಿಸಿದ್ದರೆ ಇಂದು ದೇಶದ ಕೋವಿಡ್​ ಸ್ಥಿತಿ ಬೇರೆಯಾಗಿರುತ್ತಿತ್ತು ಎಂದು ತಿಳಿಸಿದರು.

ಕೊರೊನಾ ವೈರಸ್ ಬಿಕ್ಕಟ್ಟು ಒಂದು ಜಾತಿ ಅಥವಾ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಹಾಗಂತ ತಬ್ಲೀಘಿ ಜಮಾತ್​ ತಪ್ಪೇ ಮಾಡಿಲ್ಲ ಎಂದು ಹೇಳಲಾರೆ. ಜಮಾತ್​ನಲ್ಲಿ ನೂರಾರು ವಿದೇಶಿಯರು ಪಾಲ್ಗೊಂಡಿದ್ದರು. ಆದರೆ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ಮೊದಲೇ ರದ್ದುಗೊಳಿಸಿದ್ದಲ್ಲಿ ವಿದೇಶಿಯರ ಆಗಮನ ತಡೆಯಬಹುದಿತ್ತು ಹಾಗೂ ಕೋವಿಡ್​ ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸಬಹುದಿತ್ತು ಎಂದು ಬಾಘೇಲ್ ನುಡಿದರು.

ಖಾಸಗಿ ಲ್ಯಾಬ್​ಗಳು ನಡೆಸುವ ಕೋವಿಡ್​ ಟೆಸ್ಟ್​ ಖರ್ಚನ್ನು ಕೇಂದ್ರ ಸರಕಾರ ಭರಿಸುವ ಮೂಲಕ ಟೆಸ್ಟ್​ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುವಂತೆ ನೋಡಿಕೊಳ್ಳಬೇಕೆಂದು ಅವರು ಹೇಳಿದರು.

ABOUT THE AUTHOR

...view details