ಕರ್ನಾಟಕ

karnataka

By

Published : Jun 2, 2020, 4:16 PM IST

ETV Bharat / bharat

IAVI, Merck ಸಹಯೋಗದಲ್ಲಿ ಕೋವಿಡ್​-19 ಲಸಿಕೆ ಅಭಿವೃದ್ಧಿ..

ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳಾದ IAVI ಮತ್ತು Merck ಸಹಯೋಗದಲ್ಲಿ ಕೋವಿಡ್​-19 ವಿರುದ್ಧ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯ ಜರುಗುತ್ತಿದೆ. ಒಂದು ವೇಳೆ ಅಂಗೀಕರಿಸಲ್ಪಟ್ಟರೆ ಲಸಿಕೆಯನ್ನು ಜಾಗತಿಕವಾಗಿ, ಎಲ್ಲರ ಕೈಗೆಟುಕುವಂತೆ ಮಾಡುವುದು ಅವರ ಮುಖ್ಯ ಉದ್ದೇಶವಾಗಿದೆ.

IAVI, Merck ಸಹಯೋಗದಲ್ಲಿ ಕೋವಿಡ್​-19 ಲಸಿಕೆ ಅಭಿವೃದ್ಧಿ
IAVI, Merck ಸಹಯೋಗದಲ್ಲಿ ಕೋವಿಡ್​-19 ಲಸಿಕೆ ಅಭಿವೃದ್ಧಿ

ಹೈದರಾಬಾದ್: ಚೀನಾದ ವುಹಾನ್ ಪ್ರಾಂತ್ಯದಿಂದ ಹುಟ್ಟಿಕೊಂಡಿದೆ ಎಂದು ಹೇಳಲಾದ ರಕ್ಕಸಿ ಕೊರೊನಾ ವೈರಸ್‌ನ ತಡೆಗಟ್ಟಲು ಎಂಎಸ್​ಡಿ ಎಂದು ಜನಪ್ರಿಯವಾಗಿರುವ ಮೆರ್ಕ್ (ಎನ್​ವೈಎಸ್ಇ: ಎಮ್ಆರ್​ಕೆ) ಜೊತೆಗೆ ಲಾಭರಹಿತ ವೈಜ್ಞಾನಿಕ ಸಂಶೋಧನಾ ಸಂಸ್ಥೆ ಐಎವಿಐ ತನಿಖಾ ಲಸಿಕೆ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದೆ.

SARS-CoV-2 ಲಸಿಕೆಯ ಅಭಿವೃದ್ಧಿ ಮತ್ತು ಜಾಗತಿಕ ಕ್ಲಿನಿಕಲ್ ಮೌಲ್ಯಮಾಪನವನ್ನು ಮುನ್ನಡೆಸಲು ಎರಡೂ ಸಂಸ್ಥೆ ಒಟ್ಟಾಗಿ ಕೆಲಸ ಮಾಡುತ್ತಿವೆ. ಅಂಗೀಕರಿಸಲ್ಪಟ್ಟರೆ ಲಸಿಕೆಯನ್ನು ಜಾಗತಿಕವಾಗಿ, ಎಲ್ಲರ ಕೈಗೆಟುಕುವಂತೆ ಮಾಡುವುದು ಅವರ ಮುಖ್ಯ ಉದ್ದೇಶವಾಗಿದೆ.

ಈ ಲಸಿಕೆ ತಯಾರಿಕೆಗೆ ರಿಕಾಂಬಿನಂಟ್​ ವೆಸಿಕ್ಯುಲರ್ ಸ್ಟೊಮಾಟಿಟಿಸ್ ವೈರಸ್ (ಆರ್​ವಿಎಸ್​ವಿ) ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇದು ಮಾನವರ ಬಳಕೆಗೆ ಅನುಮೋದಿಸಲಾದ ಮೊದಲ ಆರ್‌ವಿಎಸ್‌ವಿ ಲಸಿಕೆಯಾಗಿದೆ.

ಮೆರ್ಕ್ ರಿಸರ್ಚ್ ಲ್ಯಾಬೊರೇಟರೀಸ್​ ಅಧ್ಯಕ್ಷ ಡಾ. ರೋಜರ್ ಎಂ ಪರ್ಲ್ಮುಟರ್, ಕೋವಿಡ್​-19 ವೈಜ್ಞಾನಿಕ, ವೈದ್ಯಕೀಯ ಮತ್ತು ಜಾಗತಿಕ ಆರೋಗ್ಯ ವಲಯಕ್ಕೆ ಒಂದು ದೊಡ್ಡ ಸವಾಲು. ಕೊರೊನಾ ನಿವಾರಿಸುವ ಗುರಿ ಹೊಂದಿರುವ ಸೋಂಕು ನಿರೋಧಕ ಮತ್ತು ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಮೆರ್ಕ್ ಜಗತ್ತಿನಾದ್ಯಂತ ಸಂಸ್ಥೆಗಳೊಂದಿಗೆ ಸಹಕರಿಸುತ್ತಿದೆ. ಕೊರೊನಾ ಸಾಂಕ್ರಾಮಿಕ ರೋಗದ ಪಥವನ್ನು ಮೊಂಡಾಗಿಸುವ ಗುರಿಯೊಂದಿಗೆ, ಆರ್​ವಿಎಸ್​ವಿ ಲಸಿಕೆ ಅಭ್ಯರ್ಥಿಯ ಅಭಿವೃದ್ಧಿಯನ್ನು ವೇಗಗೊಳಿಸಲು ನಮ್ಮ ಸಾಮರ್ಥ್ಯಗಳನ್ನು ಸಂಯೋಜಿಸಲು ಮೆರ್ಕ್ ಮತ್ತು ಐಎವಿಐ ಉತ್ಸುಕರಾಗಿದ್ದಾರೆ ಎಂದರು.

ಐಎವಿಐ ಅಧ್ಯಕ್ಷ ಮತ್ತು ಸಿಇಒ ಡಾ. ಮಾರ್ಕ್ ಫೀನ್ಬರ್ಗ್, ಆರ್​ವಿಎಸ್​ವಿ ಆಧಾರಿತ ಲಸಿಕೆ ತಂತ್ರವು ನೋವೆಲ್​​ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಎದುರಿಸುವ ಭರವಸೆಯ ವಿಧಾನವನ್ನು ಪ್ರತಿನಿಧಿಸುತ್ತದೆ. ನಮ್ಮ ಲಸಿಕೆಯ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಮೆರ್ಕ್ ಜೊತೆಗೆ ವೇಗವರ್ಧಿತ ಅಭಿವೃದ್ಧಿ ಕಾರ್ಯಕ್ರಮವನ್ನು ಜಾರಿಗೆ ತರಲು ಎದುರು ನೋಡುತ್ತೇವೆ. ಈ ಕಷ್ಟಕರ ಜಾಗತಿಕ ಆರೋಗ್ಯ ಸವಾಲನ್ನು ಎದುರಿಸಲು ನಮ್ಮ ಜಂಟಿ ಸಾಮರ್ಥ್ಯಗಳನ್ನು ಪೂರಕ ಮತ್ತು ಸಿನರ್ಜಿಸ್ಟಿಕ್ ರೀತಿ ಬಳಸಿಕೊಳ್ಳಲು ಮೆರ್ಕ್ ಮತ್ತು ಐಎವಿಐ ನಡುವಿನ ಸಹಯೋಗವು ಒಂದು ನವೀನ ಪಾಲುದಾರಿಕೆ ಮಾದರಿ ಮತ್ತು ವಿಧಾನವನ್ನು ಪ್ರತಿನಿಧಿಸುತ್ತದೆ ಎಂದರು.

ABOUT THE AUTHOR

...view details