ಕರ್ನಾಟಕ

karnataka

ETV Bharat / bharat

ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸುತ್ತಿರುವ ಅಫ್ರಿದಿ; LoCಗೆ ಭೇಟಿ ನೀಡ್ತಾರಂತೆ ಕ್ರಿಕೆಟಿಗ - ಆರ್ಟಿಕಲ್​ 370 ರದ್ದು

ಜಮ್ಮು-ಕಾಶ್ಮೀರ ವಿಚಾರವಾಗಿ ಪದೇ ಪದೇ ತಗಾದೆ ತೆಗೆಯುವ ಪಾಕ್​​​ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗಕ್ಕೊಳಗಾಗಿದೆ. ಈ ಮಧ್ಯೆ ಇದೇ ವಿಷಯವನ್ನಿಟ್ಟುಕೊಂಡು ಮಾಜಿ ಕ್ರಿಕೆಟಿಗ ಶಾಹಿದ್​​ ಆಫ್ರಿದಿ ಕಡ್ಡಿ ಆಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಶಾಹಿದ್​ ಆಫ್ರಿದಿ

By

Published : Aug 28, 2019, 4:51 PM IST

Updated : Aug 28, 2019, 9:19 PM IST

ಇಸ್ಲಾಮಾಬಾದ್​​:ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಲ್​ರೌಂಡರ್​ ಶಾಹಿದ್​ ಅಫ್ರಿದಿ ಆದಷ್ಟು ಬೇಗ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಲಿದ್ದಾರಂತೆ!

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿರುವ ಕ್ರಿಕೆಟಿಗ, ಪಾಕ್​ ಪ್ರಧಾನಿ ನೀಡಿರುವ ಕರೆಗೆ ಓಗೊಟ್ಟು ನಾನು ಆದಷ್ಟು ಬೇಗ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿದ ನಮ್ಮ ಕಾಶ್ಮೀರದ ಸಹೋದರಿ ಸಹೋದರರಿಗೆ ಧೈರ್ಯ ತುಂಬಲಿದ್ದೇನೆ. ನೀವೆಲ್ಲರೂ ನನಗೆ ಸಾಥ್​ ನೀಡಿ ಎಂದು ಬರೆದುಕೊಂಡಿದ್ದಾರೆ.

ಈಗಾಗಲೇ ಅನೇಕ ಸಲ ಜಮ್ಮು-ಕಾಶ್ಮೀರ ವಿಚಾರವನ್ನಿಟ್ಟುಕೊಂಡು ಭಾರತದ ವಿರುದ್ಧ ಹರಿಹಾಯ್ದಿರುವ ಅಫ್ರಿದಿ, ಇದೀಗ ಮತ್ತೊಮ್ಮೆ ಜಮ್ಮು-ಕಾಶ್ಮೀರದ ವಿಚಾರದಲ್ಲಿ ಅನವಶ್ಯಕ ವಿವಾದ ಸೃಷ್ಟಿಸುತ್ತಿದ್ದಾರೆ.

ಭಾರತ ಸರ್ಕಾರ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿತ್ತು. ಲಡಾಖನ್ನು ವಿಧಾನಸಭೆ ರಹಿತ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ.

Last Updated : Aug 28, 2019, 9:19 PM IST

ABOUT THE AUTHOR

...view details