ಕರ್ನಾಟಕ

karnataka

ETV Bharat / bharat

ನಾನು ಬಾಲ್ಕನಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಿದ್ದೆ: ಕ್ರಿಕೆಟರ್​ ಉತ್ತಪ್ಪ - ರಾಬಿನ್​ ಉತ್ತಪ್ಪ

ಖ್ಯಾತ ಕ್ರಿಕೆಟಿಗ ಕರ್ನಾಟಕದ ರಾಬಿನ್​ ಉತ್ತಪ್ಪ, ರಾಜಸ್ಥಾನ್ ಫೌಂಡೇಶನ್​ನ ಮೈಂಡ್, ಬಾಡಿ ಅಂಡ್ ಸೋಲ್ ಎಂಬ ಕಾರ್ಯಕ್ರಮದ ಎರಡನೇ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ್ದು, ಈ ವೇಳೆ ತಮ್ಮ ಜೀವನದ ಸತ್ಯಾಸತ್ಯತೆಗಳನ್ನು ಬಿಚ್ಚಿಟ್ಟು, ತಮ್ಮ ನೋವಿನ ದಿನದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದರು ಎಂದು ಹೇಳಿದ್ದಾರೆ.

Uthappa
ರಾಬಿನ್​ ಉತ್ತಪ್ಪ

By

Published : Jun 5, 2020, 1:16 AM IST

Updated : Jun 5, 2020, 6:48 AM IST

ನವದೆಹಲಿ: 2006ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತವನ್ನು ಪ್ರತಿನಿಧಿಸುವ ಮೂಲಕ ನಾನು ಕ್ರಿಕೆಟ್​​ ಲೋಕಕ್ಕೆ ಪಾದಾರ್ಪಣೆ ಮಾಡಿ, ಇಲ್ಲಿಯವರೆಗೆ 46 ಏಕದಿನ ಮತ್ತು 13 ಟಿ-20 ಪಂದ್ಯಗಳನ್ನು ಆಡಿದ್ದೇನೆ. 2006ರ ವೇಳೆಗೆ ನನ್ನ ಬಗ್ಗೆ ನನಗೆ ಅಷ್ಟೊಂದು ತಿಳುವಳಿಕೆ ಇರಲಿಲ್ಲ. ಆದರೆ ಈಗ ನನ್ನ ಜೀವನದಲ್ಲಿನ ನಕಾರಾತ್ಮಕ ಸಂದರ್ಭಗಳನ್ನು ಎದುರಿಸುವ ಮೂಲಕ ನಾನೋರ್ವ ಸದೃಢ ಮನುಷ್ಯನಾಗಿದ್ದೇನೆ. ಈ ಹಿಂದೆ ಕಷ್ಟಕರ ಜೀವನವನ್ನು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೆ ಎಂದು ರಾಬಿನ್​ ಉತ್ತಪ್ಪ ಹೇಳಿಕೆ ನೀಡಿದ್ದಾರೆ.

ರಾಬಿನ್​ ಉತ್ತಪ್ಪ

ನನ್ನ ಕ್ರಿಕೆಟ್​​ ಜೀವನಕ್ಕೆ ಪಾದಾರ್ಪಣೆ ಮಾಡಿದಾಗಿನಿಂದಲೂ ಸಾಕಷ್ಟು ನೋವು-ನಲಿವು, ಏಳು-ಬೀಳುಗಳನ್ನ ಕಂಡಿದ್ದೇನೆ. 2006 ರ ಚೊಚ್ಚಲ ಪಂದ್ಯದಲ್ಲಿ ನನ್ನ ಬಗ್ಗೆ ನನಗೆ ಅಷ್ಟೊಂದು ತಿಳಿದಿರಲಿಲ್ಲ ಎಂದು ನನಗೆ ಈಗ ಭಾಸವಾಗುತ್ತಿದೆ. ಇಷ್ಟು ವರ್ಷಗಳಲ್ಲಿ ನನ್ನನ್ನು ನಾನು ಅರಿಯಲು ಸಹಕಾರಿಯಾಗಿದ್ದು, ಕ್ರಿಕೆಟ್​​ ಜಿವನದ ಕಲಿಕೆ ಹಾಗೂ ನನ್ನಲ್ಲಿ ಆದ ಅಭಿವೃದ್ಧಿ ಬೆಳವಣಿಗಗೆಳು ಎಂದು ಉತ್ತಪ್ಪ ರಾಯಲ್ ರಾಜಸ್ಥಾನ್ ಫೌಂಡೇಶನ್​ನ ಮೈಂಡ್, ಬಾಡಿ ಅಂಡ್ ಸೋಲ್ ಎಂಬ ಕಾರ್ಯಕ್ರಮದ ಎರಡನೇ ಅಧಿವೇಶನದಲ್ಲಿ ಹೇಳಿದ್ದಾರೆ.

ಪ್ರಸ್ತುತ ದಿನಮಾನದಲ್ಲಿ ಎಂತಹ ಸನ್ನಿವೇಶಗಳು ಬಂದರೂ ಸಹ ಎದುರಿಸಲು ಸಿದ್ದನಿದ್ದೇನೆ. ಇದಕ್ಕೆ ಕಾರಣ ನನ್ನ ಜೀವನದಲ್ಲಿ ಉಂಟಾದ ಕಹಿ ಘಟನೆಗಳು. ಕೆಲವೊಂದು ಅಘೋರ ಘಟನೆಗಳು ನನ್ನನ್ನು ಧೈರ್ಯಶಾಲಿಯನ್ನಾಗಿ ಮಾಡಿದೆ. 2009 ರಿಂದ 2011ರ ವೇಳೆಗೆ ನಾನು ತೀವ್ರ ಖಿನ್ನೆತೆಗೆ ಒಳಗಾಗಿದ್ದೆ, ನಮ್ಮ ಮನೆಯ ಬಾಲ್ಕನಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇನು ಎಂದು ಉತ್ತಪ್ಪ ತಮ್ಮ ಹಳೆಯ ಕಹಿ ನೆನಪುಗಳನ್ನು ವ್ಯಕ್ತಪಡಿಸಿದ್ದಾರೆ.

ನನ್ನ ಆ ವರ್ಷದ ದಿನಗಳಲ್ಲಿ ಕ್ರಿಕೆಟ್ ಬಗ್ಗೆ ಯೋಚಿಸದಿರುವ ಸಂದರ್ಭಗಳು ಇದ್ದವು, ಕ್ರಿಕೆಟ್​​ ಎಂಬುದು ನನ್ನ ಮನಸ್ಸಿನಲ್ಲಿ ಅತ್ಯಂತ ದೂರದ ವಿಷಯವಾಗಿ ಬಿಟ್ಟಿತ್ತು. ಆ ಸಮಯದಲ್ಲಿ ನನ್ನನ್ನು ಕಾಡಿದ್ದು, ನಾನು ಹೇಗೆ ಬದುಕುಳಿದು ಮುಂದಿನ ದಿನಕ್ಕೆ ಹೋಗುತ್ತೇನೆ, ನನ್ನ ಜೀವನಕ್ಕೆ ಏನಾಗುತ್ತಿದೆ ಮತ್ತು ಯಾವ ದಿಕ್ಕಿನಲ್ಲಿ ನಾನು ಹೋಗುತ್ತಿದ್ದೇನೆ ಎಂಬ ಪ್ರಶ್ನೆಗಳು ನನ್ನನ್ನು ಸದಾಕಾಲ ಕಾಡತೊಡಗಿದ್ದವು.

ಕ್ರಿಕೆಟ್​​ ಬದುಕಿನ ಬಗ್ಗೆ ನನ್ನ ಆಲೋಚನೆಗಳನ್ನು ದೂರವಿರಿಸದರೂ ಸಹ ಕ್ರಿಕೆಟ್​​ ನನ್ನ ಬೆನ್ನು ಬಿಡುತ್ತಿರಲಿಲ್ಲ. ಪಂದ್ಯೇತರ ದಿನಗಳಲ್ಲಿ ಕ್ರಿಕೆಟ್​ ಬಗ್ಗೆಯೇ ಸದಾ ಕಾಲ ಯೋಚಿಸುತ್ತಾ ಕುಳಿತಿದ್ದ ನಾನು, ಇನ್ನು ಸಹಿಸಲು ಸಾಧ್ಯವಿಲ್ಲ ಇದಕ್ಕೆ ಆತ್ಮಹತ್ಯೆ ಒಂದೇ ದಾರಿ ಎಂಬಂತೆ ನನ್ನ ಮನಃ ಹೇಳಿತ್ತಿತ್ತು. ಆ ಘಟನೆಗಳಿಂದ ಹೊರಬಂದು ಯೋಚಿಸಿದ್ದಕ್ಕಾಗಿ ಇಂದಿಗೂ ನಾನು ಜೀವಂತವಾಗಿದ್ದೇನೆ. ನನ್ನ ಜೀವನದ ಕಹಿ ನೆನಪುಗಳು, ಕ್ಲಿಷ್ಟಕರ ಸನ್ನಿವೇಶಗಳ ಮೂಲಕ ಕಲಿತ ಪಾಠಗಳು ನನ್ನ ಜೀವನದ ಹಾದಿಯನ್ನು ಬದಲಿಸಿ ಇನ್ನಷ್ಟು ಬಲಿಷ್ಟನಾಗಲು ಸಹಾಯ ಮಾಡಿದೆ ಎಂದು ಉತ್ತಪ್ಪ ತಮ್ಮ ನೋವನ್ನ ತೋಡಿಕೊಂಡಿದ್ದಾರೆ.

ನಾನು ಈ ದಿನ ಯಶಸ್ವಿಯಾಗಿ ಬದುಕನ್ನು ಸಾಗಿಸಲು ಹಲವಾರು ಕಾರಣಗಳಿವೆ. ಮೊದಲು ನನ್ನ ವ್ಯಕ್ತಿತ್ವದ ಬಗ್ಗೆ ನಾನು ಅರಿವು ಮೂಡಿಸಿಕೊಳ್ಳಲು ಪ್ರಾರಂಭಿಸಿದೆ. ಇದಿರಿಂದಾದ ಪ್ರಯೋಜನಗಳು ನನ್ನನ್ನು ಓರ್ವ ಮನುಷ್ಯನನ್ನಾಗಿ ಮಾಡಿತು. ಅದಲ್ಲದೆ, ಜೀವನದಲ್ಲಿನ ನಕಾರಾತ್ಮಕ ಅನುಭವಗಳು ಜೀವನದ ಮೇಲೆ ನಡೆಸುವ ಪ್ರಯೋಗಗಳಾಗಿ ಬದಲಾಯಿತು ಎಂದಿದ್ದಾರೆ.

ನನ್ನ ಮಟ್ಟಿಗೆ, ನನ್ನ ಎಲ್ಲಾ ಅನುಭವಗಳು ಇಂದು ಓರ್ವ ಸರ್ವಶಕ್ತ ವ್ಯಕ್ತಿಯಾಗಿ ರೂಪಿಸಿಲು ಸಹಕಾರಿಯಾಗಿದೆ ಮತ್ತು ನನ್ನ ನಕಾರಾತ್ಮಕ ಅನುಭವದ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ, ಏಕೆಂದರೆ ಅವು ನನಗೆ ಸಕಾರಾತ್ಮಕವಾಗಿ ಅಭಿವೃದ್ಧಿ ಹೊಂದಲು ಸಹಾಯ ಮಾಡಿದೆ ಎಂದು ರಾಬಿನ್​ ಉತ್ತಪ್ಪ ಹೇಳಿದ್ದಾರೆ.

Last Updated : Jun 5, 2020, 6:48 AM IST

ABOUT THE AUTHOR

...view details