ಕರ್ನಾಟಕ

karnataka

ETV Bharat / bharat

2020ರಲ್ಲಿ ಕೋವಿಡ್-19 ಹೇಗೆ ಜಗತ್ತನ್ನೇ ಆವರಿಸಿದೆ..?

ಕೋವಿಡ್-19ನ ಮೊದಲ ಪ್ರಕರಣವು ಕಳೆದ ವರ್ಷ ಚೀನಾದ ವುಹಾನ್​ನಲ್ಲಿ ವರದಿಯಾಗಿತ್ತು. 2019ರ ಡಿಸೆಂಬರ್ 31ರಂದು ಚೀನಾ ವಿಶ್ವ ಆರೋಗ್ಯ ಸಂಶ್ಥೆಗೆ ಈ ವೈರಸ್ ಕುರಿತು ಮಾಹಿತಿ ನೀಡಿತು. ಒಂದು ವರ್ಷದ ಬಳಿಕ ಇದೀಗ ಸಾಂಕ್ರಾಮಿಕ ರೋಗಕ್ಕೆ ವ್ಯಾಕ್ಸಿನೇಷನ್ ಪ್ರಾರಂಭವಾಗಿದೆ.

how-covid-19-took-over-the-world-in-2020
how-covid-19-took-over-the-world-in-2020

By

Published : Dec 31, 2020, 4:33 PM IST

ಜಗತ್ತಿನಾದ್ಯಂದ ಪ್ರತಿಯೊಂದು ರಾಷ್ಟ್ರವು ಕೊರೊನಾ ಸಂದರ್ಭದಲ್ಲಿ ತನ್ನದೇ ಆದ ಕಥೆ ಹೊಂದಿದೆ. ಪ್ರಪಂಚದಾದ್ಯಂತ ಕೊರೊನಾ ಸಾಂಕ್ರಾಮಿಕದ ಸ್ಥಿತಿ ನೋಡೋಣ.

ಯುನೈಟೆಡ್ ಸ್ಟೇಟ್ಸ್:

ಅಮೆರಿಕದಲ್ಲಿ ಕೊರೊನಾದಿಂದಾಗಿ ಲಕ್ಷಾಂತರ ಸಾವುಗಳು ಸಂಭವಿಸಿದ್ದು, ಹತ್ತಾರು ಮಿಲಿಯನ್ ನಿರುದ್ಯೋಗಿಗಳು ಸೃಷ್ಟಿಯಾಗಿದ್ದಾರೆ. ಡಿಸೆಂಬರ್ ಮಧ್ಯಭಾಗದಲ್ಲಿ, ಪ್ರತಿ 100 ಅಮೆರಿಕನ್ನರಲ್ಲಿ ಐವರು ಕೋವಿಟ್-19 ಸೋಂಕಿಗೆ ಒಳಗಾಗಿದ್ದರು.

ಯು.ಎಸ್ 19 ದಶಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳನ್ನು ದಾಖಲಿಸಿದ್ದು, 330,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ 120,000ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಯು.ಎಸ್ ಪ್ರಪಂಚದಲ್ಲೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಹಾಗೂ ಸಾವುಗಳನ್ನು ವರದಿ ಮಾಡಿದೆ.

ಬ್ರೆಜಿಲ್:

ಸಾಂಕ್ರಾಮಿಕ ರೋಗವು ದೊಡ್ಡ ವಿಷಯವಲ್ಲ ಎಂದು ಹೇಳಿದ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಕ್ವಾರಂಟೈನನ್ನು ಖಂಡಿಸಿದರು. ಲಾಕ್​ರ್ವನ್ ಆರ್ಥಿಕತೆ ಹಾಳು ಮಾಡುತ್ತದೆ ಮತ್ತು ಬಡವರಿಗೆ ಶಿಕ್ಷೆ ನೀಡುತ್ತದೆ ಎಂದು ಹೇಳಿದರು.

ಆದರೆ, ಸೋಂಕು ಹರಡುತ್ತಿದ್ದಂತೆ ಅವರು ಜವಾಬ್ದಾರಿ ತೆಗೆದುಕೊಳ್ಳಲು ನಿರಾಕರಿಸಿದರು. ಬ್ರೆಜಿಲ್​ನಲ್ಲಿ, ಜನವರಿ 3ರಿಂದ ಡಿಸೆಂಬರ್ 30ರವರೆಗೆ, ಕೋವಿಡ್-19ನ 75,04,833 ಪ್ರಕರಣಗಳು 1,91,570 ಸಾವುಗಳು ಸಂಭವಿಸಿವೆ.

ಭಾರತ:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಭಾರತದಲ್ಲಿ ಕನಿಷ್ಠ 10,244,800 ಕೊರೊನಾ ಪ್ರಕರಣಗಳು ದೃಢೀಕರಿಸಲ್ಪಟ್ಟಿವೆ. ಭಾರತದ ಲಾಕ್‌ಡೌನ್ ಅನ್ನು ಅತಿ ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸಲಾಗಿದ್ದು, ಇದನ್ನು ವ್ಯಾಪಕವಾಗಿ ಪಾಲಿಸಲಾಯಿತು.

ಆದರೆ, ಕೊರೊನಾ ವೈರಸ್​ನಿಂದಾಗಿ ಆರ್ಥಿಕತೆಯಲ್ಲಿ ತೀವ್ರ ಕುಸಿತ ಕಂಡಿತು. ಭಾರತದಲ್ಲಿ, 2020ರ ಜನವರಿ 3ರಿಂದ 30ರವರೆಗೆ, 10,244,852 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, 148,439 ಸಾವುಗಳು ಸಂಭವಿಸಿವೆ.

ಚೀನಾ:

ಕಾರ್ಮಿಕರು ಕಾರ್ಖಾನೆಗಳು ಮತ್ತು ಕಚೇರಿಗಳಿಗೆ ಮರಳಿದ್ದು, ವಿದ್ಯಾರ್ಥಿಗಳು ಮತ್ತೆ ತರಗತಿಗೆ ಹೋಗುತ್ತಿದ್ದಾರೆ. ನಗರಗಳಲ್ಲಿ ಮಾಸ್ಕ್ ಧರಿಸುವುದು ಅಗತ್ಯವಿಲ್ಲದಿದ್ದರೂ ಇದು ಒಂದು ಅಭ್ಯಾಸವಾಗಿ ಮಾರ್ಪಟ್ಟಿದೆ. ಕೋವಿಡ್-19 ಮೊದಲ ಬಾರಿಗೆ ಕಾಣಿಸಿಕೊಂಡ ದೇಶವಾದ ಚೀನಾದಲ್ಲಿ ಸಾಮಾನ್ಯ ಜೀವನವು ಪುನಾರಂಭಗೊಂಡಿದೆ. ಚೀನಾದಲ್ಲಿ, 2020ರ ಜನವರಿ 3ರಿಂದ 30 ವರೆಗೆ 4,784 ಸಾವುಗಳೊಂದಿಗೆ 96,592 ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.

ಇರಾನ್:

ಫೆಬ್ರವರಿಯಲ್ಲಿ ಇರಾನ್ ಸಂಸತ್ತಿನ ಚುನಾವಣೆಯನ್ನು ನಡೆಸಿದ್ದರಿಂದ ಇದು ವೈರಸ್ ಹರಡುವಿಕೆಗೆ ಉತ್ತೇಜನ ನೀಡಿದೆ. ಫೇಸ್ ಮಾಸ್ಕ್ ಧರಿಸಲು ಅಧಿಕಾರಿಗಳು ಆದೇಶಿಸಿದ್ದು, ನಂತರ ನಗದು ದಂಡವನ್ನು ಕೇವಲ 500,000 ರಿಯಾಲ್ ಅಥವಾ 1.60 ಡಾಳರ್ ಎಂದು ನಿಗದಿಪಡಿಸಿದರು. ಇರಾನ್‌ನಲ್ಲಿ (ಇಸ್ಲಾಮಿಕ್ ರಿಪಬ್ಲಿಕ್ ಆಫ್), ಜನವರಿ 3ರಿಂದ ಡಿಸೆಂಬರ್ 30ರವರೆಗೆ, 1,212,481 ಪ್ರಕರಣಗಳು ದೃಢಪಟ್ಟಿದ್ದು, 54,946 ಸೋಂಕಿತರು ಮೃತಪಟ್ಟಿದ್ದಾರೆ.

ಜರ್ಮನಿ:

ಮಾರ್ಚ್ ಅಂತ್ಯದಲ್ಲಿ ಅನಿವಾರ್ಯವಲ್ಲದ ಎಲ್ಲ ಅಂಗಡಿಗಳನ್ನು, ಶಾಲೆಗಳು, ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕ್ಲಬ್‌ಗಳನ್ನು ಮುಚ್ಚಿದ ನಂತರ ಮೇ ತಿಂಗಳಲ್ಲಿ ಕ್ರಮೇಣ ಸಾರ್ವಜನಿಕ ಜೀವನವನ್ನು ಪುನರಾರಂಭಿಸಲು ಸಾಧ್ಯವಾಯಿತು. ಗಡಿಗಳು ಮತ್ತೆ ತೆರೆದಿದ್ದು, ಸಾಮಾನ್ಯ ಜೀವನದತ್ತ ಜನ ಸಾಗುತ್ತಿದ್ದಾರೆ. ಜರ್ಮನಿಯಲ್ಲಿ, 2020ರ ಜನವರಿ 3ರಿಂದ 30ರವರೆಗೆ, 1,687,185 ಕೊರೊನಾ ಪ್ರಕರಂಣಗಳು ದೃಢಪಟ್ಟಿದ್ದು, 32,107 ಸಾವುಗಳು ಸಂಭವಿಸಿವೆ.

ಇಟಲಿ:

ಮಾರ್ಚ್​ನಲ್ಲಿ ರಾಷ್ಟ್ರೀಯ ಲಾಕ್​ಡೌನ್ ಜಾರಿಗೆ ತಂದ ಮೊದಲ ಪಾಶ್ಚಿಮಾತ್ಯ ದೇಶ ಇಟಲಿ. ಇದು ವೈರಸ್ ಹರಡುವಿಕೆಯನ್ನು ಯಶಸ್ವಿಯಾಗಿ ಕಡಿಮೆ ಮಾಡಿತು ಮತ್ತು ಬೇಸಿಗೆಯ ಉದ್ದಕ್ಕೂ ದೇಶವನ್ನು ಸಾಮಾನ್ಯ ಸ್ಥಿತಿಗೆ ತಂದಿತು. ಮೇ ತಿಂಗಳಲ್ಲಿ ರೆಸ್ಟೋರೆಂಟ್‌ಗಳು, ಬಾರ್‌ಗಳು, ಅಂಗಡಿಗಳು, ಜಿಮ್‌ಗಳು, ಸಲೂನ್​ಗಳು, ವಸ್ತು ಸಂಗ್ರಹಾಲಯಗಳು, ಸ್ಪಾಗಳು ತೆರೆಯಲ್ಪಟ್ಟವು. ಆದರೆ, ಸೆಪ್ಟೆಂಬರ್‌ನಲ್ಲಿ ಇಟಲಿಗೆ ಎರಡನೇ ಹಂತದ ಕೊರೊನಾ ಅಪ್ಪಳಿಸಿ ತೀವ್ರ ಹಾನಿಯುಂಟುಮಾಡಿತು. ಸೂಕ್ತ ಚಿಕಿತ್ಸೆ ಸಿಗದೇ ಹಲವಾರು ಹಿರಿಯ ನಾಗರಿಕರು ಮೃತಪಟ್ಟರು. ಇಟಲಿಯಲ್ಲಿ, 2020ರ ಜನವರಿ 3ರಿಂದ 30 ರವರೆಗೆ, 2,067,487 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, 73,029 ಸಾವುಗಳು ಸಂಭವಿಸಿವೆ.

ಜಪಾನ್:

ಕೋವಿಡ್-19 ಸಾಂಕ್ರಾಮಿಕವು ಫೆಬ್ರವರಿಯಲ್ಲಿ ಹಡಗಿನ ಮೂಲಕ ಜಪಾನ್‌ಗೆ ಬಂತು. ಐಷಾರಾಮಿ ಕ್ರೂಸ್ ಹಡಗಿನ ಮೂಲಕ ಬಂದ ಜನರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಪ್ರಯಾಣಿಕರಿಗೆ 14 ದಿನಗಳ ಕ್ವಾರಂಟೈನ್ ವಿಧಿಸಲಾಯಿತು. ಹಡಗಿನಲ್ಲಿದ್ದ 3,711 ಜನರಲ್ಲಿ 712 ಜನರು ಸೋಂಕಿಗೆ ಒಳಗಾಗಿದ್ದರು ಮತ್ತು 12 ಮಂದಿ ಸಾವನ್ನಪ್ಪಿದ್ದಾರೆ.

ಜಪಾನ್ ಮಾರ್ಚ್‌ನಿಂದ ಸುಮಾರು 150 ದೇಶಗಳೊಂದಿಗೆ ತನ್ನ ಗಡಿಗಳನ್ನು ಮುಚ್ಚಿದೆ. ಇತ್ತೀಚೆಗೆ ವಿಯೆಟ್ನಾಂ, ದಕ್ಷಿಣ ಕೊರಿಯಾ ಮತ್ತು ಸಿಂಗಾಪುರ ಸೇರಿದಂತೆ ಕಡಿಮೆ ಸೋಂಕಿತ ಏಷ್ಯಾದ ಕೆಲವು ದೇಶಗಳ ನಡುವಿನ ವ್ಯಾಪಾರ ಪ್ರವಾಸಗಳ ನಿಯಮಗಳನ್ನು ಸಡಿಲಗೊಳಿಸಿದೆ. ಪ್ರಕರಣಗಳ ಹೆಚ್ಚಳವು ಮುಂದಿನ ಜುಲೈನಲ್ಲಿ ಒಲಿಂಪಿಕ್ಸ್ ನಡೆಸುವ ಕುರಿತು ಅನುಮಾಣಗಳನ್ನು ಸೃಷ್ಟಿಸಿದೆ. ಜಪಾನ್‌ನಲ್ಲಿ, 2020ರ ಜನವರಿ 3ರಿಂದ 29ರವರೆಗೆ, 223,120 ಪ್ರಕರಣಗಳು ದೃಢಪಟ್ಟಿದ್ದು, 3,306 ಸಾವುಗಳು ಸಂಭವಿಸಿವೆ.

ಆಫ್ರಿಕಾ:

ಆಫ್ರಿಕಾದಲ್ಲಿ ಸುಮಾರು 2.5 ದಶಲಕ್ಷ ಪ್ರಕರಣಗಳು ದಾಖಲಾಗಿವೆ. ಆದರೆ, ಪರೀಕ್ಷೆಗಳು ಕಡಿಮೆಯಾದ ಕಾರಣ ಅಲ್ಲಿನ ಪ್ರಕರಣಗಳ ನಿಜವಾದ ವ್ಯಾಪ್ತಿ ತಿಳಿದಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಪ್ರಕರಣಗಳು ಮತ್ತು 27,000 ಸಾವುಗಳ ಸಂಭವಿಸಿದ್ದು, ವೈರಸ್​ನಿಂದ ಅತಿ ಹೆಚ್ಚು ಪರಿಣಾಮಕ್ಕೆ ಒಳಪಟ್ಟಿದೆ. ಮೇ ತಿಂಗಳ ಒಂದು ಹಂತದಲ್ಲಿ, ಪರೀಕ್ಷಾ ಫಲಿತಾಂಶಗಳಿಗಾಗಿ ಎರಡು ವಾರಗಳು ಕಾಯಬೇಕಾದ ಪರಿಸ್ಥಿತಿ ಇತ್ತು. ಸೋಂಕಿತರ ಸಂಪರ್ಕ ಪತ್ತೆಹಚ್ಚುವುದು ನಿಷ್ಪ್ರಯೋಜಕವಾಗಿದೆ.

ಯುನೈಟೆಡ್ ಕಿಂಗ್​ಡಮ್:

ಯುಕೆಯಲ್ಲಿ ಎರಡು ದಶಲಕ್ಷಕ್ಕೂ ಹೆಚ್ಚು ಜನರಲ್ಲಿ ಇಲ್ಲಿಯವರೆಗೆ ಕೊರೊನಾ ಇರುವುದು ದೃಢಪಟ್ಟಿದೆ. ವಿಶ್ವಾದ್ಯಂತ, ಯು.ಕೆ ಆರನೇ ಅತಿ ಹೆಚ್ಚು ಕೋವಿಡ್-19 ಸಾವುಗಳನ್ನು ಹೊಂದಿದೆ. ದೇಶಾದ್ಯಂತದ ಕೊರೊನಾ ವೈರಸ್ ಪ್ರಕರಣಗಳಿಂದಾಗಿ ರಾಷ್ಟ್ರವ್ಯಾಪಿ ಲಾಕ್ - ಡೌನ್ ಘೋಷಣೆಯಾಗಿತ್ತು. ಇದೀಗ ಯು.ಕೆ.ಯಲ್ಲಿ ರೂಪಾಂತರಿ ಕೊರೊನಾ ವೈರಸ್ ಕಾಟ ಪ್ರಾರಂಭವಾಗಿದೆ. ಯುನೈಟೆಡ್ ಕಿಂಗ್‌ಡಂನಲ್ಲಿ, ಜನವರಿ 3ರಿಂದ ಡಿಸೆಂಬರ್ 30ರವರೆಗೆ, 2,382,869 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, 71,567 ಸೋಂಕಿತರು ಮೃತಪಟ್ಟಿದ್ದಾರೆ.

ಸ್ಪೇನ್:

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಹೆಚ್ಚು ಪ್ರಭಾವಿತವಾದ ದೇಶಗಳಲ್ಲಿ ಸ್ಪೇನ್ ಕೂಡ ಒಂದು. ಮೊದಲ ಪ್ರಕರಣವು ಜನವರಿ 31, 2020ರಂದು ವರದಿಯಾಗಿದ್ದು, ಸ್ಪೇನ್‌ನಲ್ಲಿ 405,000ಕ್ಕೂ ಹೆಚ್ಚು ಪ್ರಕರಣಗಳು ಮತ್ತು 28,000 ಸಾವುಗಳು ಸಂಭವಿಸಿವೆ.

ಕೋವಿಡ್-19 ಬಿಕ್ಕಟ್ಟು ಇತ್ತೀಚಿನ ಸ್ಪ್ಯಾನಿಷ್ ಸರಕು ಮತ್ತು ಸೇವೆಗಳ ವ್ಯಾಪಾರದಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿದೆ. ವೈರಸ್ ಹರಡುವುದನ್ನು ತಡೆಗಟ್ಟಲು ಅಳವಡಿಸಲಾಗಿರುವ ಕ್ರಮಗಳು ವ್ಯಾಪಾರದ ತೀವ್ರ ಕುಸಿತಕ್ಕೆ ಕಾರಣವಾಗಿವೆ. ಸ್ಪೇನ್‌ನಲ್ಲಿ, 2020ರ ಜನವರಿ 3ರಿಂದ 30ರವರೆಗೆ, 1,893,502 ಪ್ರಕರಣಗಳು ದೃಢಪಟ್ಟಿದ್ದು, 50,442 ಸಾವುಗಳು ಸಂಭವಿಸಿವೆ.

ABOUT THE AUTHOR

...view details