ಚಂಡೀಗಢ:ಕೋಮು ಸೌಹಾರ್ದತೆ ಪ್ರತೀಕವಾಗಿ ಹಿಂದೂ-ಮುಸ್ಲಿಂ ಕುಟುಂಬಗಳು ಕಿಡ್ನಿ ಬದಲಾಯಿಸಿಕೊಂಡಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ.
ಹಿಂದೂ ಯುವಕನಿಗೆ ಮುಸ್ಲಿಂ ಯುವತಿ, ಮುಸ್ಲಿಂ ಯುವತಿಗೆ ಹಿಂದೂ ವ್ಯಕ್ತಿಯಿಂದ ಕಿಡ್ನಿ ದಾನ! - ಚಂಡಿಗಢದಲ್ಲಿ ನಡೆದ ಕಿಡ್ನಿ ದಾನ
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಹಿಂದೂ - ಮುಸ್ಲಿಂ ಕುಟುಂಬದ ಸದಸ್ಯರಿಗೆ ಇದೀಗ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇಲ್ಲಿನ ಶ್ರೀನಗರ ಹಾಗೂ ಯಮುನಾನಗರದ ನಿವಾಸಿಗಳ ನಡುವೆ ಕಿಡ್ನಿ ಬದಲಾಯಿಸಿಕೊಂಡಿರುವ ಘಟನೆ ನಡೆದಿದೆ. ಶ್ರೀನಗರದ ಜುಬೈದಾ ಹಾಗೂ ಯಮುನಾನಗರದ ಅಜಯ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇಬ್ಬರು ಒಂದೇ ಆಸ್ಪತ್ರೆಯಲ್ಲಿ ಕಳೆದ ಕೆಲ ವರ್ಷಗಳಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು.
ಈ ನಡುವೆ ಎರಡು ಕುಟುಂಬ ಸದಸ್ಯರು ಕಿಡ್ನಿ ದಾನ ಮಾಡಲು ಮುಂದಾಗಿದ್ದರು. ಆದರೆ ರಕ್ತ ಹೊಂದಾಣಿಕೆ ಆಗದ ಕಾರಣ, ಎರಡು ಕುಟುಂಬದ ನಡುವೆ ಮಾತುಕತೆ ನಡೆಸಿದ್ದು, ಈ ವೇಳೆ ಹಿಂದೂ ಕುಟುಂಬದವರು ಮುಸ್ಲಿಂ ಕುಟುಂಬದ ಮಹಿಳೆಗೆ ಹಾಗೂ ಹಿಂದೂ ಕುಟುಂಬದವರು ಮುಸ್ಲಿಂ ಕುಟುಂಬದ ವ್ಯಕ್ತಿಗೆ ಕಿಡ್ನಿ ನೀಡಲು ಒಪ್ಪಿಕೊಂಡಿದ್ದು, ಶಸ್ತ್ರಚಿಕಿತ್ಸೆ ಮೂಲಕ ಇಬ್ಬರಿಗೂ ಕಿಡ್ನಿ ಜೋಡಣೆ ಸಹ ಮಾಡಲಾಗಿದೆ.