ಕರ್ನಾಟಕ

karnataka

ETV Bharat / bharat

ಪಾಕ್​​ನ ಇತಿಹಾಸದಲ್ಲೇ ಮೊದಲ ಪೊಲೀಸ್​ ಅಧಿಕಾರಿಯಾದ ಹಿಂದೂ ಯುವತಿ!

ಪಾಕ್​​ನಲ್ಲಿ ನಡೆದ ಸ್ಮರ್ಧಾತ್ಮಕ ಪರೀಕ್ಷೆಯಲ್ಲಿ ಪಾಸ್​ ಆಗುವ ಮೂಲಕ ಹಿಂದೂ ಮಹಿಳೆಯೋರ್ವಳು ಪೊಲೀಸ್​ ಅಧಿಕಾರಿಯಾಗಿ ನೂತನ ದಾಖಲೆ ನಿರ್ಮಾಣ ಮಾಡಿದ್ದಾಳೆ.

ಪುಷ್ಪಾ ಕೊಲ್ಹಿ

By

Published : Sep 5, 2019, 4:17 AM IST

ಇಸ್ಲಾಮಾಬಾದ್​​:ನೆರೆಯ ಪಾಕಿಸ್ತಾನದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸ್​ ಆಗುವ ಮೂಲಕ ಅಲ್ಲಿನ ಇತಿಹಾಸದಲ್ಲೇ ಇದೇ ಮೊದಲ ಬಾರಿ ಎಂಬ ರೀತಿಯಲ್ಲಿ ಹಿಂದೂ ಯುವತಿಯೋರ್ವಳು ಪೊಲೀಸ್​ ಆಫೀಸರ್​ ಆಗಿ ಆಯ್ಕೆಯಾಗಿದ್ದಾಳೆ.

ಪಾಕ್​ನ ಸಿಂಧ್​ ಪ್ರಾಂತ್ಯದ ಹಿಂದೂ ಯುವತಿಯಾಗಿರುವ ಪುಷ್ಪಾ ಕೊಲ್ಹಿ ಪೊಲೀಸ್​ ಅಧಿಕಾರಿಯಾಗಿ ಈಗಾಗಲೇ ಆಯ್ಕೆಗೊಂಡಿದ್ದು, ಅಧಿಕಾರ ಸಹ ಸ್ವೀಕಾರ ಮಾಡಿದ್ದಾಗಿ ತಿಳಿದು ಬಂದಿದೆ. ಇದೇ ವಿಷಯವಾಗಿ ಈ ಮಾನವ ಹಕ್ಕುಗಳ ಕಾರ್ಯಕರ್ತ ಕಪಿಲ್ ದೇವ್ ತಮ್ಮ ಟ್ವಿಟ್ಟರ್​​ನಲ್ಲಿ ಮಾಹಿತಿ ಖಚಿತ ಪಡಿಸಿದ್ದಾರೆ.

ಸಿಂಧ್‌ ಪ್ರಾಂತ್ಯದಲ್ಲಿ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡಿರುವುದಕ್ಕೆ ಸಿಂಧ್​ ಪ್ರಾಂತ್ಯದಲ್ಲಿ ಹಿಂದೂ ಸಮುದಾಯ ಸಂಭ್ರಮಾಚರಣೆ ಮಾಡಿದೆ. ಇನ್ನು ಪಾಕ್​ನ ಸಿಂಧ್​ ಪ್ರಾಂತ್ಯದಲ್ಲಿ ಹೆಚ್ಚಿನ ಹಿಂದೂಗಳು ವಾಸವಾಗಿದ್ದಾರೆ.

ಈ ಹಿಂದೆ ಪಾಕಿಸ್ತಾನದ ಸಂಸತ್ತಿನ ಮೇಲ್ಮನೆಗೆ ಹಿಂದೂ ದಲಿತ ಸಮುದಾಯದ ಹಿಂದೂ ಮಹಿಳೆ ಕೃಷ್ಣ ಕುಮಾರಿ ಆಯ್ಕೆಯಾಗಿದ್ದರು.

ABOUT THE AUTHOR

...view details