ಕರ್ನಾಟಕ

karnataka

ETV Bharat / bharat

ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ... 588 ರಸ್ತೆಗಳು ಬಂದ್! - ಹಿಮಾಚಲ ಪ್ರದೇಶದಲ್ಲಿ 588 ರಸ್ತೆ ಬಂದ್

ಹಿಮಾಚಲ ಪ್ರದೇಶದಲ್ಲಿ ಹಿಮಪಾತದ ಪ್ರಮಾಣ ಹೆಚ್ಚಾಗಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಈ ವ್ಯಾಪ್ತಿಯಲ್ಲಿನ 588 ರಸ್ತೆಗಳನ್ನು ಬಂದ್ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

fresh snowfall in Himachal Pradesh,ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ
ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ

By

Published : Jan 9, 2020, 4:41 AM IST

ಶಿಮ್ಲಾ(ಹಿಮಾಚಲ ಪ್ರದೇಶ):ಮಂಗಳವಾರ ರಾತ್ರಿಯಿಂದ ಭಾರಿ ಪ್ರಮಾಣದ ಹಿಮಪಾತ ಆಗುತ್ತಿರುವುದರಿಂದ ವಾಹನ ಸಂಚಾರ ಸ್ಥಬ್ದವಾಗಿದ್ದು, ಜನ ಜೀವನ ಅಸ್ಥವ್ಯಸ್ಥಗೊಂಡಿದೆ.

ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಹಿಮಪಾತ

ಹಿಮಾಚಲ ಪ್ರದೇಶದ ಹಲವೆಡೆ ಭಾರಿ ಪ್ರಮಾಣದ ಹಿಮಪಾತವಾಗುತ್ತಿದ್ದು, ಎಂಟು ಜಿಲ್ಲೆಗಳಲ್ಲಿ ಒಂದರಿಂದ ನಾಲ್ಕು ಅಡಿಯಷ್ಟು ಎತ್ತರದಷ್ಟು ಹಿಮ ಬಿದ್ದಿದೆ ಎಂಬ ಮಾಹಿತಿ ಇದೆ. ರಸ್ತೆಗಳೆಲ್ಲ ಹಿಮಾವೃತವಾಗಿದ್ದು, ಹಲವು ವಾಹನಗಳು ನಿಂತಲ್ಲೆ ನಿಂತಿವೆ. ಹಲವೆಡೆ ಬಸ್​ ಸಂಚಾರ ಸಹ ರದ್ದುಗೊಳಿಸಿದ ಕಾರಣ ಸಾರ್ವಜನಿಕರು ಪರದಾಡುವಂತಾಗಿದೆ.

ರಾಜ್ಯದಾದ್ಯಂತ ಸುಮಾರು 588ಕ್ಕೂ ಹೆಚ್ಚು ರಸ್ತೆಗಳು ಬಂದ್​ ಆಗಿದ್ದು, 2,436 ವಿದ್ಯುತ್ ಲೈನ್​ಗಳ ಸಂಪರ್ಕ ಕಡಿತಗೊಳಿಸಲಾಗಿದೆ. ಇಷ್ಟೆ ಅಲ್ಲದೆ 33 ಕಡೆ ನೀರು ಸರಬರಾಜು ಸಂಪರ್ಕಕ್ಕೂ ಅಡ್ಡಿಯಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ರಸ್ತೆಗಳಲ್ಲಿ ತುಂಬಿರುವ ಹಿಮವನ್ನ ತೆರವುಮಾಡಲು ಸರ್ಕಾರ ಅಲ್ಲಲ್ಲಿ ಜೆಸಿಬಿ ವ್ಯವಸ್ಥೆ ಮಾಡಿದ್ದರೂ ಹಿಮಪಾತದ ಪ್ರಮಾಣ ಹೆಚ್ಚಾಗಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ.

ABOUT THE AUTHOR

...view details