ಕರ್ನಾಟಕ

karnataka

ETV Bharat / bharat

ಅಂಬಾಲದಲ್ಲಿ ಬೃಹತ್​ ರೈತರ ಪಡೆ... ಭಾರಿ ಪೊಲೀಸ್​ ಬಂದೋಬಸ್ತ್​; ಮುಂದುವರಿದ ಜಟಾಪಟಿ - ರೈತರ ಪ್ರತಿಭಟನೆ

ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ‘ದೆಹಲಿ ಚಲೋ’ ಆರಂಭಿಸಿದ್ದಾರೆ. ರೈತರು ಆಗಮಿಸಲಿರುವ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಿ, ದೆಹಲಿ ತಲುಪದಂತೆ ತಡೆಯಲು ಪೊಲೀಸರು ನಿಯೋಜನೆಗೊಂಡಿದ್ದಾರೆ. ಶಂಭು ಗಡಿಯಲ್ಲಿ ಜಮಾಯಿಸಿದ್ದ ರೈತರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

heavy-security-deployment-in-delhi-haryana-border-in-view-of-farmers-protest
ಶಂಭು ಗಡಿಯಲ್ಲಿ ಜಮಾಯಿಸಿದ್ದ ರೈತರನ್ನು ಜಲ ಫಿರಂಗಿ ಮೂಲಕ ಚದುರಿಸಿದ ಪೊಲೀಸರು

By

Published : Nov 26, 2020, 11:40 AM IST

Updated : Nov 26, 2020, 2:18 PM IST

ಅಂಬಾಲಾ / ಹರಿಯಾಣ:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಕೃಷಿ ಮಸೂದೆಗಳ ವಿರುದ್ಧ ರೈತರು ರಸ್ತೆಗಿಳಿದು ಹೋರಾಟ ಆರಂಭಿಸಿದ್ದು, ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇನ್ನು ಶಂಭು ಗಡಿಯಲ್ಲಿ ಒಟ್ಟುಗೂಡಿದ ರೈತರು ಕಲ್ಲು ತೂರಾಟ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ದೆಹಲಿ ಚಲೋ’ ಹೋರಾಟ

ದೆಹಲಿ - ಹರಿಯಾಣ ಹೆದ್ದಾರಿಯಲ್ಲಿ ಸಾವಿರಾರು ರೈತರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಜಲ ಫಿರಂಗಿ ಬಳಸಿ ಶಂಭು ಗಡಿಯಲ್ಲಿ ಜಮಾಯಿಸಿದ್ದ ರೈತರನ್ನು ಚದುರಿಸುವ ಪ್ರಯತ್ನ ಮಾಡಿದ್ದಾರೆ.

ಪೊಲೀಸ್​ ಬಿಗಿ ಭದ್ರತೆ

ರೈತರ 'ದೆಹಲಿ ಚಲೋ' ಕರೆಯನ್ನು ಗಮನದಲ್ಲಿಟ್ಟುಕೊಂಡು ಗಡಿಯಲ್ಲಿ (ದೆಹಲಿ-ಹರಿಯಾಣ ಗಡಿ) ಕೇಂದ್ರ ಭಾರಿ ಭದ್ರತೆ ಕೈಗೊಂಡಿದೆ.

ಕಾರ್ಮಿಕ, ಕೃಷಿ ಮಸೂದೆಗೆ ವಿರೋಧ: ಎಡ ಸಂಘಟನೆಗಳಿಂದ ರೈಲು ತಡೆದು ಪ್ರತಿಭಟನೆ

ಶಂಭು ಗಡಿಯಲ್ಲಿ ಒಟ್ಟುಗೂಡಿದ ರೈತರು ಕಲ್ಲು ತೂರಾಟ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗಡಿಯಲ್ಲಿ ಸೇರಿದ ಗುಂಪನ್ನು ಚದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಸಿಡಿಸುತ್ತಿದ್ದಾರೆ.

ಪ್ರತಿಭಟನೆ ಮುಂದುವರೆಯುತ್ತಿದ್ದು, ಹೆಚ್ಚಿನ ಸಂಖ್ಯೆಯ ರೈತರು ಕರ್ನಾಳ ಕರ್ಣ ಸರೋವರ ಪ್ರದೇಶದ ಬಳಿ ಸೇರುತ್ತಿದ್ದಾರೆ.

ದೆಹಲಿಗೆ ತೆರಳುತ್ತಿದ್ದ ರೈತರನ್ನು ಚದುರಿಸಲು ಪೊಲೀಸರು ಮತ್ತೆ ಜಲ ಫಿರಂಗಿಗಳನ್ನು ಮತ್ತು ಅಶ್ರುವಾಯು ವಿನ ಸಹಾಯ ಪಡೆದಿದ್ದಾರೆ. ಪ್ರತಿಭಟನಾಕಾರರು ಸದೋಪುರ ಗಡಿಯಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಲು ಪ್ರಯತ್ನಿಸಿದ್ದು, ಅದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಆದರೂ ಪಟ್ಟು ಬಿಡದ ರೈತರು ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ.

Last Updated : Nov 26, 2020, 2:18 PM IST

ABOUT THE AUTHOR

...view details