ಕರ್ನಾಟಕ

karnataka

ETV Bharat / bharat

ವೆಡ್ಡಿಂಗ್​ ಕಾರ್ಡ್​ಗೆ 8 ಲಕ್ಷ, ಮದುವೆಗೆ 100 ಕೋಟಿ ರೂ...! ಗುಪ್ತ ಫ್ಯಾಮಿಯಲ್ಲಿ ಅದ್ಧೂರಿ ವಿವಾಹ - marriage

ಬರೋಬ್ಬರಿ 2 ಕೆಜಿ ಬೆಳ್ಳಿಯಿಂದ ಮಾಡಿರುವ ಈ ಲಗ್ನ ಪತ್ರಿಕೆಯನ್ನು ಪಾಲ್ಗೊಳ್ಳಲಿರುವ ತಮ್ಮ ಆಪ್ತರಿಗೆ ಗುಪ್ತಾ ಫ್ಯಾಮಿಲಿ ನೀಡುತ್ತಿದೆ.  ಒಂದು ಮೂಲದ ಪ್ರಕಾರ ಭಾರತದಲ್ಲಿಈವರೆಗೆ ಮುದ್ರಿತವಾಗಿರುವ ಅತಿ ಹೆಚ್ಚು ಬೆಲೆಯ ವೆಡ್ಡಿಂಗ್​ ಕಾರ್ಡ್​ ಇದೇ ಎನ್ನಲಾಗಿದೆ.

ವೆಡ್ಡಿಂಗ್​ ಕಾರ್ಡ್

By

Published : Jun 17, 2019, 5:52 PM IST

Updated : Jun 17, 2019, 7:43 PM IST

ನವದೆಹಲಿ:ಹಿಮಾಲಯದ ಚಮೋಲಿ ಜಿಲ್ಲೆಯ ಔಲಿಯಲ್ಲಿರುವ ಸ್ಕಿ ರೆಸಾರ್ಟ್​ನಲ್ಲಿ ಸಿರಿವಂತ ಕುಟುಂಬವೊಂದರ ಮದುವೆ ನಡೆಯುತ್ತಿದೆ. ಗುಪ್ತ ಕುಟುಂಬದ ಇಬ್ಬರು ವಾರಸುದಾರರ ಮದುವೆ ಇದಾಗಿದ್ದು ಇದರ ಬಜೆಟ್ ಬರೋಬ್ಬರಿ​ 100 ಕೋಟಿ..!

ಈ ಮದುವೆಯ ವೆಡ್ಡಿಂಗ್​ ಕಾರ್ಡ್​ ಬೆಲೆ ಕೇಳಿದ್ರೆ ಬೆಚ್ಚಿ ಬೀಳೋದು ಪಕ್ಕಾ..! ಬರೋಬ್ಬರಿ 2 ಕೆಜಿ ಬೆಳ್ಳಿಯಿಂದ ಮಾಡಿರುವ ಈ ಲಗ್ನ ಪತ್ರಿಕೆಯನ್ನು ಪಾಲ್ಗೊಳ್ಳಲಿರುವ ತಮ್ಮ ಆಪ್ತರಿಗೆ ಗುಪ್ತಾ ಫ್ಯಾಮಿಲಿ ನೀಡುತ್ತಿದೆ. ಒಂದು ಮೂಲದ ಪ್ರಕಾರ ಭಾರತದಲ್ಲಿಈವರೆಗೆ ಮುದ್ರಿತವಾಗಿರುವ ಅತಿ ಹೆಚ್ಚು ಬೆಲೆಯ ವೆಡ್ಡಿಂಗ್​ ಕಾರ್ಡ್​ ಇದೇ ಎನ್ನಲಾಗಿದೆ.

ಗುಪ್ತ ಫ್ಯಾಮಿಯ ಅದ್ಧೂರಿ ವಿವಾಹ

ಈ ವೆಡ್ಡಿಂಗ್​ ಕಾರ್ಡ್​ ಇರುವ ಕೆಂಪು ಬಣ್ದದ ಬಾಕ್ಸ್​ ತೆರೆದರೆ ಒಳಗಡೆ ಚಂದನೆಯ ಕೆತ್ತನೆ ಮಾಡಿರುವ ಇನ್ನೊಂದು ಬೆಳ್ಳಿಯ ಡಬ್ಬಿ ಇದೆ. ಆ ಬಾಕ್ಸ್​ ತೆರೆದರೆ ಬೆಳ್ಳಿಯ ಕಾರ್ಡ್​ ಮೇಲೆ ಮುದ್ರಿಸಲಾಗಿರುವ ವೆಡ್ಡಿಂಗ್​ ಕಾರ್ಡ್​ ಸಿಗುತ್ತದೆ. ಒಂದು ಕಾರ್ಡ್​ ಹಿಂದಿಯಲ್ಲಿದ್ದರೆ ಇನ್ನೊಂದು ಕಾರ್ಡ್​ ಇಂಗ್ಲಿಷ್​ನಲ್ಲಿದೆ.

ಅದೇ ಬಾಕ್ಸ್​ನ ಇನ್ನೊಂದು ಮೂಲೆಯಲ್ಲಿ ಬಾದಾಮಿ, ಖರ್ಜೂರ, ಗೋಡಂಬಿ ಸೇರಿದಂತೆ ಒಣ ಹಣ್ಣುಗಳಿವೆ. ಜೂನ್​ 18ರಿಂದ ನಾಲ್ಕು ದಿನಗಳ ಕಾಲ ಈ ಮದುವೆ ನಡೆಯಲಿದ್ದು, ಅಜಯ್​ ಗುಪ್ತಾ ಅವರ ಪುತ್ರ ಸೂರ್ಯಕಾಂತ್​ ಹಾಗೂ ಅತುಲ್​ ಗುಪ್ತಾ ಅವರ ಪುತ್ರ ಶಶಾಂಕ್​ ಹಸೆಮಣೆ ಏರುತ್ತಿದ್ದಾರೆ.

ಅಂದಹಾಗೆ 150 ವಿಶೇಷ ಅತಿಥಿಗಳನ್ನು ಕರೆದೊಯ್ಯಲು ಹೆಲಿಕಾಪ್ಟರ್​ಗಳನ್ನು ಬುಕ್​ ಮಾಡಲಾಗಿದ್ದು, ವಿವಾಹಕ್ಕಾಗಿ ಒಂದು ಕೃತಕ ಕೆರೆಯನ್ನೇ ನಿರ್ಮಿಸಲಾಗಿದೆ.

Last Updated : Jun 17, 2019, 7:43 PM IST

ABOUT THE AUTHOR

...view details