ಕರ್ನಾಟಕ

karnataka

ETV Bharat / bharat

ಕೈ​ ಶಾಸಕನ ಬೆನ್ನಲ್ಲೇ ಇದೀಗ ಕೌನ್ಸಿಲರ್​ಗೂ ಸೋಂಕು... ಸೆಲ್ಫ್​ ಕ್ವಾರಂಟೈನ್​ಗೆ ಗುಜರಾತ್ ಸಿಎಂ ​ನಿರ್ಧಾರ - Congress MLA had tested positive for Coronavirus

ನಿನ್ನೆ ಸೋಂಕು ತಗುಲಿದ್ದ ಕಾಂಗ್ರೆಸ್ ಶಾಸಕ ಇಮ್ರಾನ್ ಖೇದವಾಲಾ ಅವರನ್ನು ಭೇಟಿಯಾಗಿದ್ದ ಸಿಎಂ ವಿಜಯ್​ ರೂಪಾನಿ, ಒಂದು ವಾರಗಳ ಕಾಲ ಸೆಲ್ಫ್​ ಕ್ವಾರಂಟೈನ್​ ಹೇರಿಕೊಳ್ಳಲು ನಿರ್ಧರಿಸಿದ್ದಾರೆ.

Congress Councillor also tested positive
ಗುಜರಾತ್ ಸಿಎಂ

By

Published : Apr 15, 2020, 3:21 PM IST

ಗುಜರಾತ್: ನಿನ್ನೆಯಷ್ಟೇ ಗುಜರಾತ್​​​ನ ಕಾಂಗ್ರೆಸ್​ ಶಾಸಕರೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದರ ಬೆನ್ಲಲ್ಲೇ ಇದೀಗ ರಾಜ್ಯದ ಕಾಂಗ್ರೆಸ್ ಕೌನ್ಸಿಲರ್ ಒಬ್ಬರಿಗೆ ಸೋಂಕು ತಗುಲಿದೆ.

ಕೌನ್ಸಿಲರ್​ಗೆ ಕೋವಿಡ್​-19 ಇರುವುದು ದೃಢಪಟ್ಟಿರುವುದಾಗಿ ಅಹಮದಾಬಾದ್ ಮಹಾನಗರ ಪಾಲಿಕೆ ಕಮಿಷನರ್ ವಿಜಯ್ ನೆಹ್ರಾ ಮಾಹಿತಿ ನೀಡಿದ್ದಾರೆ.

ಇನ್ನು ನಿನ್ನೆ ಸೋಂಕು ತಗುಲಿದ್ದ ಕಾಂಗ್ರೆಸ್ ಶಾಸಕ ಇಮ್ರಾನ್ ಖೇದವಾಲಾ ಅವರನ್ನು ಭೇಟಿಯಾಗಿದ್ದ ಸಿಎಂ ವಿಜಯ್​ ರೂಪಾನಿ, ಒಂದು ವಾರಗಳ ಕಾಲ ಸೆಲ್ಫ್​ ಕ್ವಾರಂಟೈನ್​ ಹೇರಿಕೊಳ್ಳಲು ನಿರ್ಧರಿಸಿದ್ದಾರೆ. ಆದರೆ ತಪಾಸಣೆ ನಡೆಸಿರುವ ವೈದ್ಯಕೀಯ ತಜ್ಞರು ಸಿಎಂ ರೂಪಾನಿಯವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ, ಅವರು ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

For All Latest Updates

ABOUT THE AUTHOR

...view details