ಅಹಮದಾಬಾದ್:ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆ ಜತೆಗೆ ಇಂದು ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆ ಫಲಿತಾಂಶ ಸಹ ಹೊರಬಿದ್ದಿದ್ದು, ಪ್ರಮುಖವಾಗಿ ಪಕ್ಷಾಂತರಿಗಳಿಗೆ ಮತದಾರರು ಸರಿಯಾಗಿ ಉತ್ತರ ಕಲಿಸಿದ್ದಾರೆ.
ಮೋದಿ ತವರಲ್ಲೇ ಕಮಲ ಪಾಳಯಕ್ಕೆ ಮುಖಭಂಗ... ಆರು ಕ್ಷೇತ್ರಗಳಲ್ಲಿ ಮೂರು ಮಾತ್ರ ಗೆದ್ದ ಕಮಲ!
ಗುಜರಾತ್ನ ಆರು ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆ ಫಲಿತಾಂಶ ಇದೀಗ ಹೊರಬಿದ್ದಿದ್ದು, ಆಡಳಿತ ಪಕ್ಷ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.
ಗುಜರಾತ್ನ ಆರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ ಫಲಿತಾಂಶ ಇದೀಗ ಹೊರಬಿದ್ದಿದ್ದು, ಮೋದಿ ತವರಲ್ಲೇ ಭಾರತೀಯ ಜನತಾ ಪಕ್ಷಕ್ಕೆ ಮುಖಭಂಗವಾಗಿರುವುದಂತೂ ಸುಳ್ಳಲ್ಲ.
ಲಭ್ಯವಾಗಿರುವ ಫಲಿತಾಂಶದ ಪ್ರಕಾರ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ದಾಖಲು ಮಾಡಿದರೆ, ಉಳಿದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಪ್ರಮುಖವಾಗಿ ಕಾಂಗ್ರೆಸ್ನಿಂದ ಹೊರಬಂದು ಬಿಜೆಪಿ ಸೇರಿದ್ದ ಅಲ್ಫೇಶ್ ಠಾಕೂರ್ಗೆ ಮತದಾರರು ತಿರುಗೇಟು ನೀಡಿದ್ದು, ಸೋಲಿನ ರುಚಿ ತೋರಿಸಿದ್ದಾರೆ. ರಾಧನಪುರ ಕ್ಷೇತ್ರದಲ್ಲಿ ಸುಮಾರು 3,500ಕ್ಕೂ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ನ ರಘುಬಾಯ್ ದೇಸಾಯಿ ಗೆಲುವು ದಾಖಲಿಸಿದ್ದಾರೆ.