ಕರ್ನಾಟಕ

karnataka

ETV Bharat / bharat

ಕೇಂದ್ರದಿಂದ ಸಂಸದೀಯ ಸಮಿತಿ ರಚನೆ: ತೇಜಸ್ವಿ, ಪ್ರಜ್ವಲ್, ರಾಘವೇಂದ್ರ ಸೇರಿ ಯಾರೆಲ್ಲ ನೇಮಕ? - ರಾಹುಲ್​ ಗಾಂಧಿ

ಕೇಂದ್ರ ಸರ್ಕಾರವು ನೂತನ ಸಂಸದೀಯ ಸಮಿತಿ ರಚನೆ ಮಾಡಿದೆ. ಸಮಿತಿಗಳಿಗೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ.

ಸಂಸದೀಯ ಸಮಿತಿ

By

Published : Sep 14, 2019, 5:26 AM IST

Updated : Sep 14, 2019, 9:05 AM IST

ನವದೆಹಲಿ:ಕೆಂದ್ರ ಸರ್ಕಾರವು ನೂತನ ಸಂಸದೀಯ ಸಮಿತಿ ರಚನೆ ಮಾಡಿದೆ. ಸಮಿತಿಗಳಿಗೆ ನೂತನ ಅಧ್ಯಕ್ಷರು ಹಾಗೂ ಸದಸ್ಯರ ನೇಮಿಸಲಾಗಿದೆ. ಕಾಂಗ್ರೆಸ್​ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ, ಸಂಸದರಾದ ತೇಜಸ್ವಿ ಸೂರ್ಯ, ಬಿ.ವೈ. ರಾಘವೇಂದ್ರ ಹಾಗೂ ಪ್ರಜ್ವಲ್​ ರೇವಣ್ಣ ಸೇರಿದಂತೆ ಹಲವರು ಸದಸ್ಯತ್ವ ಪಡೆದಿದ್ದಾರೆ.

ಬಿಜೆಪಿ ಸಂಸದ ಜಯಂತ್​ ಸಿನ್ಹಾ ಅವರು ಹಣಕಾಸು ಸಮಿತಿಯ ಅಧ್ಯಕ್ಷರಾಗಿದ್ದು, ಬಿಜೆಪಿ ಎಂಪಿ ಎಸ್​ಎಸ್​ ಅಹ್ಲುವಾಲಿಯಾ, ಕಾಂಗ್ರೆಸ್​ ಸಂಸದ ಮನೀಶ್​ ತಿವಾರಿ, ಟಿಎಂಸಿ ಸಂಸದ ಪ್ರೊ. ಸೌಗಾತಾ ರಾಯ್​, ಬಿಜೆಡಿ ಸಂಸದ ಪಿನಾಕಿ ಮಿಶ್ರಾ ಹಾಗೂ ಕಾಂಗ್ರೆಸ್​ ಸಂಸದ ದಿಗ್ವಿಜಯ್​ ಸಿಂಗ್​ ಸೇರಿ 31 ಮಂದಿ ಈ ಸಮಿತಿಯ ಸದಸ್ಯರಾಗಿದ್ದಾರೆ.

ರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ಬಿಜೆಪಿ ಸಂಸದ ಜುವಲ್​ ಒರಮ್​ ನೇಮಕವಾಗಿದ್ದು, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ, ಅಭಿಷೇಕ್​ ಮನು ಸಿಂಘ್ವಿ, ಬಿಜೆಪಿಯ ಜುಗಾಲ್​ ಕಿಶೋರ್​ ಶರ್ಮಾ, ಶಿವಸೇನೆಯ ಸಂಜಯ್​ ರಾವತ್​ ಈ ಸಮಿತಿಯ ಸದಸ್ಯರಾಗಿದ್ದಾರೆ.

ತಿರುವನಂತಪುರಂ​ ಕಾಂಗ್ರೆಸ್​ ಸಂಸದ ಶಶಿ ತರೂರ್​ ಮಾಹಿತಿ ತಂತ್ರಜ್ಞಾನ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈ ಸಮಿತಿಯಲ್ಲಿ ಟಿಎಂಸಿಯ ಮಹುವಾ ಮೊಯಿತ್ರಾ, ಕಾಂಗ್ರೆಸ್​ನ ಕಾರ್ತಿ ಚಿದಂಬರಂ ಹಾಗೂ ಬಿಜೆಪಿಯ ಲೊಕೆಟ್​ ಚಟರ್ಜಿ, ಸನ್ನಿ ಡಿಯೋಲ್​ ಹಾಗೂ ತೇಜಸ್ವಿ ಸೂರ್ಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಸಂಸದ ಪಿಪಿ ಚೌದರಿ ಅವರು ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿದ್ದು, ಟಿಎಂಸಿ ಸಂಸದ ಅಭಿಷೇಕ್​​ ಬ್ಯಾನರ್ಜಿ, ಜಯದೇವ್​ ಗಲ್ಲಾ, ಬಿಜೆಪಿ ಸಂಸದೆ ಮೀನಾಕ್ಷಿ ಲೆಖಿ, ಕಾಂಗ್ರೆಸ್​ ಸಂಸದರಾದ ಪ್ರೆನೀತ್​ ಕೌರ್​, ಪಿ ಚಿದಂಬರಂ ಹಾಗೂ ಕಪಿಲ್​ ಸಿಬಲ್​ ಈ ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯರಾಗಿದ್ದಾರೆ.

ರಾಸಾಯನಿಕ ಮತ್ತು ರಸಗೊಬ್ಬರಗಳ ಸಮಿತಿಯ ಅಧ್ಯಕ್ಷರಾಗಿ ಡಿಎಂಕೆ ಅವರ ಕನಿಮೋಳಿ ಅವರನ್ನು ನೇಮಕ ಮಾಡಕಲಾಗಿದೆ. ಶಿವಸೇನೆಯ ಪ್ರತಾಪ್​​ ಜಾಧವ್ ಅವರನ್ನು ಗ್ರಾಮೀಣಾಭಿವೃದ್ಧಿ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ಬಿಜೆಪಿಯ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.

ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಬಿಜೆಪಿಯ ಜಗದಾಂಬಿಕಾ ಪಾಲ್, ಬಿಜೆಪಿಯ ಗೌತಮ್ ಗಂಭೀರ್, ಹೇಮಾ ಮಾಲಿನಿ ಮತ್ತು ಎಂಜೆ ಅಕ್ಬರ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಜಲಸಂಪನ್ಮೂಲ ಸಮಿತಿಯ ಅಧ್ಯಕ್ಷರಾಗಿ ಬಿಜೆಪಿಯ ಸಂಜಯ್ ಜೈಸ್ವಾಲ್, ಹಾಸನ ಜೆಡಿಎಸ್​ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಟಿಎಂಸಿಯ ನುಸ್ರತ್ ಜಹಾನ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ

ವೈಎಸ್​ಆರ್​​ ಸಂಸದ ವಿ. ವಿಜಯಸಾಯಿ ರೆಡ್ಡಿಯವರನ್ನು ವಾಣಿಜ್ಯ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಡಿಎಂಕೆ ಸಂಸದ ಡಿಎಂ ಕಾತಿರ್​ ಆನಂದ್​, ಅಕಾಲಿ ದಳದ ಸಂಸದ ಸುಖ್ಬೀರ್​ ಸಿಂಗ್​ ಬಾದಲ್​ ಹಾಗೂ ಕಾಂಗ್ರೆಸ್​ನ ನಕುಲ್​ ಕೆ. ನಾಥ್​ ಈ ಸಮಿತಿಯಲ್ಲಿದ್ದಾರೆ.

ಕಾಂಗ್ರೆಸ್ ರಾಜ್ಯಸಭಾ ಸಂಸದ ಆನಂದ್ ಶರ್ಮಾ ಅವರು ಗೃಹ ವ್ಯವಹಾರ ಸಮಿತಿಯ ಅಧ್ಯಕ್ಷರಾಗಿದ್ದು, ಕಾಂಗ್ರೆಸ್​ನ ಲೋಕಸಭಾ ನಾಯಕ ಅಧಿರ್​ ರಂಜನ್​ ಚೌದರಿ, ಬಿಜೆಪಿ ಸಂಸದರಾ ದಿಲೀಪ್​ ಘೋಷ್​, ತ್ಸೆರಿಂಗ್ ನಾಮ್ಗ್ಯಲ್ ಹಾಗೂ ಕಿರಿನ್​ ಖೇರ್​ ಈ ಸಮಿತಿಯಲ್ಲಿದ್ದಾರೆ.

Last Updated : Sep 14, 2019, 9:05 AM IST

ABOUT THE AUTHOR

...view details