ನವದೆಹಲಿ: ಮಹಾಮಾರಿ ಕೊರೊನಾ ಪ್ರಪಂಚದಲ್ಲಿ ಲಗ್ಗೆ ಹಾಕಿದಾಗಿನಿಂದಲೂ ಜನರು ಅದರಿಂದ ಹೊರಬರಲು ಹರಸಾಹಸ ನಡೆಸಿದ್ದು, ಹೀಗಾಗಿ ಕೆಲವೊಂದು ದೇಶಗಳು ಸಂಪೂರ್ಣವಾಗಿ ಲಾಕ್ಡೌನ್ ಆಗಿವೆ. ಈ ವೇಳೆ ಜನರು ಬಳಕೆ ಮಾಡುವ ಮಾಸ್ಕ್, ಸ್ಯಾನಿಟೈಸರ್ ಕೊರತೆ ಎದ್ದು ಕಾಣುತ್ತಿದ್ದು, ಇದರ ಮಧ್ಯೆ ಕಾಂಡೋಮ್ ಕೂಡ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿಲ್ಲ.
ಭಾರತ, ಇಂಗ್ಲೆಂಡ್,ಫ್ರಾನ್ಸ್,ಇಟಲಿ, ಇರಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಲಾಕ್ಡೌನ್ ಆದೇಶ ಜಾರಿಯಲ್ಲಿರುವುದು ಹಾಗೂ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿರುವ ಕಾರಣ ಕಾಂಡೋಮ್ಗಳಿಗೆ ಇನ್ನಿಲ್ಲದ ಬೇಡಿಕೆ ಉಂಟಾಗಿದ್ದು, ಮಾರುಕಟ್ಟೆಗಳಲ್ಲಿ ಮಾರಾಟ ಹೆಚ್ಚಾಗಿರುವ ಕಾರಣ ಅವುಗಳ ಕೊರತೆ ಉಂಟಾಗಿದೆ.
ಜಾಗತಿಕವಾಗಿ 100 ಮಿಲಿಯನ್ ಕಾಂಡೋಮ್ಗಳ ಕೊರತೆ ಉಂಟಾಗಿದ್ದು, ಕಳೆದ 10 ದಿನಗಳಿಂದ ಈ ಸಮಸ್ಯೆ ಮಾರುಕಟ್ಟೆಯಲ್ಲಿ ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.
ಕೆಲಸದ ಒತ್ತಡ, ಮನೆಯಲ್ಲಿ ಹೆಚ್ಚಿನ ಸಮಯ ಕಳೆಯಲು ಅಸಾಧ್ಯವಾಗದಂತಹ ಸ್ಥಿತಿ ಈ ಹಿಂದಿನ ಸಮಯದಲ್ಲಿ ನಿರ್ಮಾಣಗೊಂಡಿತ್ತು. ಆದರೆ ಇದೀಗ ಸಂಗಾತಿಗಳು, ಪತ್ನಿ ಜತೆ ಹೆಚ್ಚು ಹೆಚ್ಚು ಸಮಯ ಕಳೆಯುತ್ತಿರುವ ಕಾರಣ ಸೇರುವಿಕೆ ಹೆಚ್ಚಾಗಿದೆ. ಇನ್ನು ಕಾಂಡೋಮ್ ಉತ್ಪಾದನೆ ಮಾಡುವ ಕೆಲವೊಂದು ಕಾರ್ಖಾನೆಗಳು ಬಂದ್ ಆಗಿರುವ ಕಾರಣ ಮಾರುಕಟ್ಟೆಯಲ್ಲಿ ಇವುಗಳ ಕೊರತೆ ಎದು ಕಾಣುತ್ತಿದೆ.
ಮಹಾಮಾರಿ ಕೊರೊನಾದಿಂದಾಗಿ ದೇಶದಲ್ಲಿನ ಜಿಮ್, ಪಾರ್ಕ್, ಸಿನಿಮಾ ಚಿತ್ರಮಂದಿರ ಸೇರಿದಂತೆ ಎಲ್ಲವೂ ಬಂದ್ ಆಗಿವೆ.ಅನೇಕ ಕಾರ್ಪೋರೇಟ್ ಕಂಪನಿ, ಸರ್ಕಾರಿ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಜನರು ಆಹಾರ, ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಇದರ ಜೊತೆಗೆ ಕಾಂಡೋಮ್ ಖರೀದಿ ಮಾಡಲು ಮುಗಿಬಿದ್ದಿದ್ದು, ಕಳೆದ ಒಂದು ವಾರದಲ್ಲಿ ಕಾಂಡೋಮ್ ಮಾರಾಟವು ಶೇ.25 ರಿಂದ ಶೇ.50 ರಷ್ಟು ಏರಿಕೆಯಾಗಿದೆ.