ಪುರಿ(ಒಡಿಶಾ): ಪುರಿ, ಶ್ರೀ ಜಗನ್ನಾಥ ವಿರಾಜಮಾನನಾಗಿರುವ ದೇಶದ ಪವಿತ್ರ ಧಾರ್ಮಿಕ ಕ್ಷೇತ್ರ. ಅನೇಕ ಭಕ್ತರ ಆರಾದ್ಯ ದೈವವಾಗಿರುವ ಶ್ರೀ ಜಗನ್ನಾಥನ ಕ್ಷೇತ್ರ, ದೇಶದ ಪ್ರಮುಖ ತೀರ್ಥಕ್ಷೇತ್ರಗಳಲ್ಲೊಂದು. ಈ ಕ್ಷೇತ್ರವನ್ನು ಪವಿತ್ರ ಸ್ಥಳಗಳಲ್ಲಿ ಪವಿತ್ರ ಎಂದು ಕರೆಯಲಾಗುತ್ತದೆ.
ಪೌರಾಣಿಕ ಹಿನ್ನೆಲೆಯಿರುವ ನೀಲಿ ಪರ್ವತದ ಮೇಲಿರುವ ಈ ಭವ್ಯವಾದ ದೇವಾಲಯಕ್ಕೆ ಪ್ರವೇಶಿಸಲು ನಾಲ್ಕು ಬಾಗಿಲುಗಳಿವೆ. ಈ ಬಾಗಿಲುಗಳ ಐತಿಹಾಸಿಕ ಹಿನ್ನೆಲೆ ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಈ ನಾಲ್ಕು ಬಾಗಿಲುಗಳನ್ನು ಸಿಂಹದ್ವಾರ, ಅಶ್ವದ್ವಾರ, ಹುಲಿದ್ವಾರ ಹಾಗೂ ಗಜ ದ್ವಾರ ಎಂದು ಕರೆಯಲಾಗುತ್ತದೆ. ಈ ದೇಗುಲವನ್ನು ಭೂಮಿ ಮೇಲಿನ ಸ್ವರ್ಗವೆಂದು ಕರೆದರೆ, ಅದರ ಬಾಗಿಲುಗಳನ್ನು ಸದ್ಗುಣ, ಸಂಪತ್ತು, ಆಸೆ(ಬಯಕೆ) ಮತ್ತು ಮೋಕ್ಷದ ಸಂಕೇತ ಎಂದು ಕರೆಯಲಾಗುತ್ತದೆ. ಯಾರು ಯಾವ ಬಾಗಿಲಿನ ಮೂಲಕ ಪ್ರವೇಶಿಸುತ್ತಾರೆ ಎಂಬ ಬಗ್ಗೆ ಅನೇಕ ಐತಿಹಾಸಿಕ ಸತ್ಯಗಳು ಮತ್ತು ಹಲವು ವದಂತಿಗಳಿವೆ. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಪೂರ್ವ ದ್ವಾರ(ಸಿಂಹ ದ್ವಾರ):
ಈ ದ್ವಾರವು ಶ್ರೀ ಜಗನ್ನಾಥ ದೇಗುಲಕ್ಕೆ ಪ್ರವೇಶಿಸಲು ಇರುವ ಮುಖ್ಯ ಬಾಗಿಲು. ಜಗತ್ತಿನಲ್ಲಿ ಸದ್ಗುಣಗಳನ್ನು ಬೋಧಿಸಲು ಸಿಂಹವು ಪರಮಾತ್ಮನ ವಿಶೇಷ ಅವತಾರ ಎಂದು ನಂಬಲಾಗುತ್ತದೆ. ಇದು ದೇವಾಲಯದ ಪೂರ್ವ ದ್ವಾರವಾಗಿದ್ದು, ಸಾಮಾನ್ಯ ಭಕ್ತರು, ನಿಷ್ಠಾವಂತರು ಮತ್ತು ಆದಿಗುರು ಶಂಕರಾಚಾರ್ಯರು ಈ ದ್ವಾರದ ಮೂಲಕ ಪ್ರವೇಶಿಸುತ್ತಾರೆ ಎನ್ನಲಾಗಿದೆ. ಮುಖ್ಯವಾಗಿ ಈ ಬಾಗಿಲನ್ನು ಭಕ್ತಿಯ ಬಾಗಿಲು ಎಂದು ಕರೆಯಲಾಗುತ್ತದೆ.
ದಕ್ಷಿಣ ದ್ವಾರ(ಅಶ್ವದ್ವಾರ):