ಕರ್ನಾಟಕ

karnataka

By

Published : Aug 3, 2019, 1:09 PM IST

ETV Bharat / bharat

ತಲಾಖ್ ಪರಿಷ್ಕೃತ ಕಾಯ್ದೆಯಡಿ ಮೊದಲ ದೂರು: ತಲಾಖ್​ ಅಂದವನ ಮೇಲೆ ಕ್ರಿಮಿನಲ್​ ಕೇಸ್​!

ವಿವಾಹೇತರ ಸಂಬಂಧ ಹೊಂದಿರುವ ವ್ಯಕ್ತಿಯೊಬ್ಬ ಪತ್ನಿಗೆ ವಾಟ್ಸ್​ಆ್ಯಪ್​ ​ ಮೂಲಕ ತಲಾಖ್ ನೀಡಿದ್ದು, ತ್ರಿವಳಿ ತಲಾಖ್ ಕಾಯ್ದೆ ಜಾರಿಯಾದ ಬಳಿಕ ಮೊದಲ ಪ್ರಕರಣವೊಂದು ಮಹಾರಾಷ್ಟ್ರದ ಮುಂಬ್ರ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ

talaq

ಮುಂಬೈ:ತ್ರಿವಳಿ ತಲಾಖ್ ಕಾಯ್ದೆ ಜಾರಿಯಾದ ಬಳಿಕ ಮೊದಲ ಪ್ರಕರಣವೊಂದು ಮಹಾರಾಷ್ಟ್ರದಲ್ಲಿ ದಾಖಲಾಗಿದೆ. ವಾಟ್ಸ್​​ಆ್ಯಪ್​ ಮೂಲಕ ಪತ್ನಿಗೆ ತಲಾಖ್ ಹೇಳಿದ ಪತಿ ವಿರುದ್ಧ ಮಹಾರಾಷ್ಟ್ರದ ಮುಂಬ್ರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರ ಮಾಹಿತಿಯಂತೆ, ವಿವಾಹೇತರ ಸಂಬಂಧ ಹೊಂದಿರುವ ವ್ಯಕ್ತಿಯೊಬ್ಬ ಪತ್ನಿಗೆ ವಾಟ್ಸ್​ಆ್ಯಪ್​​​ ಮೂಲಕ ತಲಾಖ್ ನೀಡಿದ್ದಾನೆ. ಆತನ ಪತ್ನಿ ಥಾಣೆ ಕಮಿಷನರ್​ ಕಚೇರಿ ದೂರು ನೀಡಿದ ಬಳಿಕ, ಪ್ರಕರಣ ದಾಖಲಾಗಿದೆ.

ಎಂಬಿಎ ಪದವೀಧರೆಯಾದ 31 ವರ್ಷ ಮಹಿಳೆ 2015 ಸೆಪ್ಟೆಂಬರ್​ 7ರಂದು 35 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದರು. ಇಬ್ಬರಿಗೂ ಅದು ಎರಡನೇ ಮದುವೆಯಾಗಿತ್ತು. ಮದುವೆಯಾದ ಮೊದಲ ದಿನದಿಂದಲೇ ಪತಿ ಹಾಗೂ ಅತ್ತೆ ಕಿರುಕುಳ ನೀಡುತ್ತಿದ್ದಾರೆ. ಹಣಕ್ಕಾಗಿ ಪತಿ ಬೇಡಿಕೆ ಇಟ್ಟಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.

2017ರಿಂದ ಪತಿ ತೊರೆದು, ತನ್ನ ಕುಟುಂಬದೊಂದಿಗಿದ್ದ ಮಹಿಳೆಗೆ ಆತ ವಿವಾಹೇತರ ಸಂಬಂಧ ಹೊಂದಿದ್ದಾನೆಂದು ಗೊತ್ತಾಗಿದೆ. ಅಂದಿನಿಂದ ಇಬ್ಬರೂ ವಾಟ್ಸ್​​ಆ್ಯಪ್​ ಹಾಗೂ ಫೇಸ್​ಬುಕ್​ನಲ್ಲಿ ಕಿತ್ತಾಡುತ್ತಿದ್ದರು. 2018 ನವೆಂಬರ್​ 30ರಂದು ತೀವ್ರ ವಾಗ್ವಾದ ನಡೆದು ಪತಿ, ತಲಾಖ್ ಎಂದು ಮೂರು ಬಾರಿ ವಾಟ್ಸ್​ಆ್ಯಪ್​ ಸಂದೇಶ ಕಳುಹಿಸಿದ. ಆನಂತರ ಕರೆ ಮಾಡಿದ ಸಹ ತಲಾಖ್ ಹೇಳಿದ್ದಾಗಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇಷ್ಟು ದಿನಗಳ ದೂರವಿದ್ದ ಪತ್ನಿ ಇದೀಗ ಪತಿ ವರ್ತನೆ ವಿರುದ್ಧ ದೂರು ನೀಡಿದ್ದಾರೆ. ಪರಿಷ್ಕೃತ ಕಾಯ್ದೆ ಅನ್ವಯ ದೂರು ದಾಖಲಿಸಿಕೊಂಡು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details