ನವದೆಹಲಿ:ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಉದ್ಯೋಗ ಎಂದರೆ ಘನತೆ, ಸರ್ಕಾರ ಇನ್ನೂ ಎಷ್ಟು ಕಾಲ ಅದನ್ನು ಜನರಿಗೆ ನೀಡಲು ನಿರಾಕರಿಸುತ್ತೆ: ರಾಗಾ - ನಿರುದ್ಯೋಗ
ದೊಡ್ಡ ಮಟ್ಟದ ನಿರುದ್ಯೋಗ ಸಮಸ್ಯೆಯಿಂದಾಗಿ ಇಂದು ಯುವಜನತೆ 'ರಾಷ್ಟ್ರೀಯ ನಿರುದ್ಯೋಗ ದಿನ'ವನ್ನು ಆಚರಿಸುವಂತಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ
"ದೊಡ್ಡ ಮಟ್ಟದ ನಿರುದ್ಯೋಗ ಸಮಸ್ಯೆಯಿಂದಾಗಿ ಇಂದು ಯುವಜನತೆ 'ರಾಷ್ಟ್ರೀಯ ನಿರುದ್ಯೋಗ ದಿನ'ವನ್ನು ಆಚರಿಸುವಂತಾಗಿದೆ. ಉದ್ಯೋಗ ಎಂದರೆ ಘನತೆ. ಸರ್ಕಾರ ಇನ್ನೂ ಎಷ್ಟು ಕಾಲ ಅದನ್ನು ಜನರಿಗೆ ನೀಡಲು ನಿರಾಕರಿಸುತ್ತದೆ? " ಎಂದು ರಾಗಾ ಟ್ವೀಟ್ ಮಾಡಿದ್ದಾರೆ.
ಉದ್ಯೋಗ ಕೋರಿ ಸರ್ಕಾರಿ ಪೋರ್ಟಲ್‌ನಲ್ಲಿ ಒಂದು ಕೋಟಿಗೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. ಆದರೆ ಕೇವಲ 1.77 ಲಕ್ಷ ಉದ್ಯೋಗಗಳು ಮಾತ್ರ ಲಭ್ಯವಿವೆ ಎಂದು ಸೂಚಿಸುವ ಮಾಧ್ಯಮದ ವರದಿಯೊಂದನ್ನು ಸಹ ರಾಹುಲ್ ಗಾಂಧಿ ಟ್ಯಾಗ್ ಮಾಡಿದ್ದಾರೆ.