ಕರ್ನಾಟಕ

karnataka

ETV Bharat / bharat

ಹುಷಾರ್‌! ದೊಡ್ಡ ದೊಡ್ಡ ಕಂಪನಿಗಳೇ ಟಾರ್ಗೆಟ್​: ಇ-ಮೇಲ್​ ಹ್ಯಾಕ್‌ ಮಾಡಿ​ ಹಣ ಕದೀತಾರೆ ಈ ವಂಚಕರು! - ಸೈಬರ್​ ಅಪರಾಧ

ಸೈಬರ್ ಹ್ಯಾಕರ್‌ಗಳ ಕೈಯಲ್ಲಿ ಸಿಕ್ಕಿಹಾಕಿಕೊಳ್ಳದಂತೆ ಕಾರ್ಪೊರೇಟ್ ವಲಯದ ಎಲ್ಲಾ ಕಂಪನಿಗಳು, ಇ-ಮೇಲ್ ಸುರಕ್ಷತೆಯ ಬಗ್ಗೆ ವಿಶೇಷ ಗಮನ ಹರಿಸಬೇಕು. ಇ-ಮೇಲ್​ನ ಸೆಕ್ಯೂರಿಟಿ ಸೆಟ್ಟಿಂಗ್​ನಲ್ಲಿ ಹಲವು ಭದ್ರತೆ ಸಂಬಂಧವಾಗಿ ಇರುವ ಆಯ್ಕೆಗಳನ್ನು ನಿಷ್ಕ್ರೀಯಗೊಳಿಸಬಾರದು. ಜೊತೆಗೆ ನಕಲು ಅಥವಾ ಹ್ಯಾಕ್​ ಆಗಬಲ್ಲ ಆ್ಯಂಟಿವೈರಸ್ ​ಅನ್ನು ಕಂಪ್ಯೂಟರ್‌ಹೆ ಇನ್ಸ್ಟಾಲ್​ ಮಾಡಬಾರದು- ಸಚಿನ್ ಶರ್ಮಾ, ಸೈಬರ್ ಸೆಕ್ಯುರಿಟಿ ತಜ್ಞರು

email-forwarders
ಇ-ಮೇಲ್ ಫಾರ್ವರ್ಡರ್

By

Published : Jun 27, 2020, 5:14 PM IST

Updated : Jun 27, 2020, 7:20 PM IST

ಜೈಪುರ:ನೀವು ಕಾರ್ಪೊರೇಟ್ ವಲಯದ ಭಾಗವಾಗಿದ್ದು, ನಿಮ್ಮ ಕಂಪನಿಗೆ ವಿವಿಧ ಪ್ರಮುಖ ಮಾಹಿತಿ, ಸರಕುಪಟ್ಟಿ ಅಥವಾ ಬಿಲ್‌ಗಳನ್ನು ಇ-ಮೇಲ್​ ಮೂಲಕ ಕಳುಹಿಸಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. ತುಂಬಾ ಉಪಯುಕ್ತ ಮಾಹಿತಿ ಇಲ್ಲಿದೆ ಓದಿ...

ದಿನಕ್ಕೊಂದು ತಂತ್ರಗಳನ್ನು ಬಳಸಿ ಸೈಬರ್​ ಅಪರಾಧಿಗಳು ಹಲವು ಜನರು ಹಾಗೂ ಕಂಪನಿಗಳನ್ನು ಬೆತ್ತಲಾಗಿಸುತ್ತಾರೆ. ಕಾರ್ಪೊರೇಟ್ ಸಂಸ್ಥೆಗಳನ್ನೇ ಗುರಿಯಾಗಿಸಲು ಸೈಬರ್ ಹ್ಯಾಕರ್‌ಗಳು ಈಗ ಇ-ಮೇಲ್ ಫಾರ್ವರ್ಡರ್​ ಅನ್ನೋ ಹ್ಯಾಕಿಂಗ್​ ವಿಧಾನವನ್ನು ಅನುಸರಿಸುತ್ತಿದ್ದಾರೆ. ಅದು ಹೇಗೆ? ಹ್ಯಾಕರ್​ಗಳ ತಂತ್ರ ಏನು ಅನ್ನೋದನ್ನು ಈ ಸ್ಟೋರಿಯಲ್ಲಿ ನೋಡಿ.

ಇನ್ಫೋ ಗ್ರಾಫಿಕ್​-1

ಬೆಳಕಿಗೆ ಬಂದ ಪ್ರಕರಣ:

ಇತ್ತೀಚೆಗೆ, ಇ-ಮೇಲ್​ ಫಾರ್ವರ್ಡರ್​ ಮೂಲಕ ಹ್ಯಾಕರ್​ಗಳು ಪ್ರಸಿದ್ಧ ಕಂಪನಿಯೊಂದರ ಇ-ಮೇಲ್ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ಕಂಪನಿಯು, ಬ್ಯಾಂಕ್ ಖಾತೆಗಳ ಮಾಹಿತಿಯೊಂದಿಗೆ ವಿದೇಶದಲ್ಲಿರುವ ಕ್ಲೈಂಟ್‌ಗೆ 38 ಲಕ್ಷ ರೂಪಾಯಿಗಳ ಬಿಲ್​ ಒಂದನ್ನು ಕಳುಹಿಸಲಾಗಿತ್ತು. ಕಂಪನಿಯ ಇ-ಮೇಲ್ ಅನ್ನು ಕ್ಲೈಂಟ್‌ಗೆ ಮೇಲ್ ಮಾಡಿದ ಸ್ವಲ್ಪ ಸಮಯದಲ್ಲೇ ಹ್ಯಾಕರ್​ಗಳು ಅದನ್ನು ಹ್ಯಾಕ್​ ಮಾಡಿದ್ದಾರೆ. ಕ್ಲೈಂಟ್‌ಗೆ ಎರಡನೇ ಮೇಲ್​ ಕಳಿಸಿದ ಹ್ಯಾಕರ್​ಗಳು ಹೊಸ ಬಿಲ್​ ಕಳುಹಿಸಿದ್ದಾರೆ. ಹ್ಯಾಕರ್​ ಕಳುಹಿಸಿದ ಹೊಸ ಮೇಲ್​ನಲ್ಲಿ, ತಮ್ಮದೇ ಬ್ಯಾಂಕ್ ಖಾತೆಯನ್ನು ಸೇರಿಸಿದ್ದಾರೆ. ಅಷ್ಟೇ ಅಲ್ಲ, ಆ ಮೊದಲು ಕಂಪನಿ ಕಳಿಸಿದ್ದ ಮೊದಲ ಖಾತೆಗೆ ಬದಲಾಗಿ ಎರಡನೇ ಇನ್‌ವಾಯ್ಸ್‌ನಲ್ಲಿ ಕಳುಹಿಸಿದ ಬ್ಯಾಂಕ್ ಖಾತೆಗೆ ಹಣ ಪಾವತಿ ಮಾಡುವಂತೆ ಕೇಳಿದ್ದಾರೆ. ಅದೃಷ್ಟವಶಾತ್ ವಿದೇಶದಲ್ಲಿದ್ದ ಕ್ಲೈಂಟ್, ಬ್ಯಾಂಕ್ ಖಾತೆಗೆ ಹಣ ಪಾವತಿ ಮಾಡುವುದಕ್ಕೂ ಮುನ್ನ ಕಂಪನಿಯ ಅಧಿಕಾರಿಗಳನ್ನು ಸಂಪರ್ಕಿಸಿ ಹೊಸ ಬಿಲ್​ ಮತ್ತು ಬ್ಯಾಂಕ್ ಖಾತೆಯ ಬಗ್ಗೆ ವಿಚಾರಿಸಿದ್ದಾನೆ. ಈ ಸಮಯದಲ್ಲಿ ಇ-ಮೇಲ್​ ಹ್ಯಾಕ್​ ಆಗಿರುವುದರ ಬಗ್ಗೆ ಗೊತ್ತಾಗಿದೆ. ಸರಿಯಾದ ಸಮಯದಲ್ಲಿ ಸರಿಯಾದ ಹೆಜ್ಜೆ ಇಟ್ಟ ಕಾರಣದಿಂದಾಗಿ, ಖಾತೆ ಹ್ಯಾಕ್ ಆಗಿದೆ ಎಂದು ತಿಳಿಯಲು ಸಾಧ್ಯವಾಯಿತು.

ಇ-ಮೇಲ್​ ಸೆಟ್ಟಿಂಗ್​

ಸೈಬರ್ ಹ್ಯಾಕರ್‌ಗಳ ಕೈಯಲ್ಲಿ ಸಿಕ್ಕಿಹಾಕಿಕೊಳ್ಳದಂತೆ ಕಾರ್ಪೊರೇಟ್ ವಲಯದ ಎಲ್ಲಾ ಕಂಪನಿಗಳು, ಇ-ಮೇಲ್ ಸುರಕ್ಷತೆಯ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಸೈಬರ್ ಸೆಕ್ಯುರಿಟಿ ತಜ್ಞ ಸಚಿನ್ ಶರ್ಮಾ ಹೇಳುತ್ತಾರೆ. ಇ-ಮೇಲ್​ನ ಸೆಕ್ಯೂರಿಟಿ ಸೆಟ್ಟಿಂಗ್​ನಲ್ಲಿ ಹಲವು ಭದ್ರತೆ ಸಂಬಂಧವಾಗಿ ಇರುವ ಆಯ್ಕೆಗಳನ್ನು ನಿಷ್ಕ್ರಿಯಗೊಳಿಸಬಾರದು. ಜೊತೆಗೆ ನಕಲು ಅಥವಾ ಹ್ಯಾಕ್​ ಆಗಬಲ್ಲ ಆ್ಯಂಟಿವೈರಸ್​ಅನ್ನು ಕಂಪ್ಯೂಟಗೆ ಇನ್ಸ್ಟಾಲ್​ ಮಾಡಬಾರದು ಎಂದು ಸಚಿನ್ ಶರ್ಮಾ ತಿಳಿಸಿದ್ದಾರೆ.

ಸೈಬರ್ ಸೆಕ್ಯುರಿಟಿ ತಜ್ಞ ಸಚಿನ್ ಶರ್ಮಾ
Last Updated : Jun 27, 2020, 7:20 PM IST

ABOUT THE AUTHOR

...view details