ಕರ್ನಾಟಕ

karnataka

ETV Bharat / bharat

ಅನುಮತಿ ಪಡೆಯದೆ ಬಿಜೆಪಿ ಥೀಮ್ ಸಾಂಗ್ ಪ್ರಸಾರ: ಚುನಾವಣಾ ಆಯೋಗದಿಂದ ಬ್ರೇಕ್ - ಬಾಬುಲ್​ ಸುಪ್ರಿಯೋ

ಬಾಬುಲ್​ ಸುಪ್ರಿಯೋ ಬಿಜೆಪಿಗಾಗಿ ಸಂಯೋಜನೆ ಮಾಡಿದ್ದ ಹಾಡನ್ನು ಬಳಸದಂತೆ ಬಿಜೆಪಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ

ಬಿಜೆಪಿ ಥೀಮ್ ಸಾಂಗ್​ಗೆ ಆಯೋಗ ಬ್ರೇಕ್

By

Published : Apr 7, 2019, 3:11 PM IST

ಕೋಲ್ಕತ್ತಾ:ಲೋಕಸಭಾ ಚುನಾವಣೆ ನಿಮಿತ್ತ ಕೇಂದ್ರ ಸಚಿವ ಬಾಬುಲ್​ ಸುಪ್ರಿಯೋ ಬಿಜೆಪಿಗಾಗಿ ಸಂಯೋಜಸಿದ್ದ ಹಾಡನ್ನು ಎಲ್ಲಿಯೂ ಬಳಸದಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.

ಅಮಿತ್​ ಚಕ್ರವರ್ತಿ ಎಂಬುವರು ಬರೆದಿದ್ದ ಹಾಡಿನಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಇನ್ನಿಲ್ಲ ಎಂಬ ಸಾಲಿತ್ತು. ಈ ಪದವನ್ನು ಸುಪ್ರಿಯೋ ಅವರು ಮೊದಲು ಟ್ವೀಟ್​ ಮಾಡಿದ್ದರು.

ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಸಂಜಯ್ ಬಸು ಅವರು, ಆಯೋಗದ ಪೂರ್ವ ಅನುಮತಿ ಪಡೆದೆಯೇ ಹಾಡು ರಚಿಸಲಾಗಿದೆ. ಅಲ್ಲದೆ, ಎಲ್ಲೆಡೆ ಈ ಹಾಡು ಕೇಳಿಬರುತ್ತಿದೆ. ಆದ ಕಾರಣ ಹಾಡಿನ ಪ್ರಸಾರ ನಿಲ್ಲಿಸುವಂತೆ ಸೂಚಿಸಿದ್ದೇವೆ. ಬಿಜೆಪಿಯ ಸದಸ್ಯರೊಬ್ಬರು ಇದೀಗ ಮನವಿ ಸಲ್ಲಿಸಿದ್ದು, ಈ ಬಗ್ಗೆ ಆಯೋಗಕ್ಕೆ ತಿಳಿಸಿದ್ದೇವೆ. ಮೀಡಿಯಾ ಸರ್ಟಿಫಿಕೇಷನ್​ ಅಂಡ್​ ಮಾನಿಟರಿಂಗ್ ಕಮಿಟಿ (MCMC) ಅನುಮತಿ ಪಡೆಯದಿರುವುದು ನೀತಿ ಸಂಹಿತೆ ಉಲ್ಲಂಘನೆ ಎಂದು ಹೇಳಿದ್ದಾರೆ.

ಹಾಡಿನಲ್ಲಿ ಅಕ್ಷೇಪಾರ್ಹ ಪದ ಬಳಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್​ ದೂರು ದಾಖಲಿಸಿತ್ತು. ಹಾಡಿನ ಸಾಹಿತ್ಯ ನೀಡುವಂತೆ ಕೇಳಿದ್ದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ, ಸಾಲುಗಳನ್ನು ಪರಿಷ್ಕರಿಸಿ ಎಂದು ಸೂಚಿಸಿದ್ದಾರೆ.

ABOUT THE AUTHOR

...view details