ಕರ್ನಾಟಕ

karnataka

ETV Bharat / bharat

ಮೊಟ್ಟೆ, ಚಿಕನ್ ಮಾಂಸಹಾರ ಅಲ್ಲವಂತೆ: ಚಿಂತನೆಗಚ್ಚಿದೆ ಆಯುರ್ವೇದಿಕ್​ ಚಿಕನ್​

ಮೊಟ್ಟೆ ಮತ್ತು ಚಿಕನ್​ ಇವೆರಡೂ ಮಾಂಸಹಾರವಲ್ಲ ಸಸ್ಯಹಾರ,ಇವುಗಳ ಮುಕ್ತ ಸೇವನೆಗೆ ಅನುವು ಮಾಡಿಕೊಡಬೇಕು ಎಂದು ಸಂಸದ ಸಂಜಯ್​ ರಾವತ್​ ಒತ್ತಾಯಿಸಿದ್ದಾರೆ.

By

Published : Jul 17, 2019, 9:16 AM IST

Updated : Jul 17, 2019, 9:22 AM IST

ಮೊಟ್ಟೆ ಮತ್ತು ಚಿಕನ್ ಮಾಂಸಹಾರವಲ್ಲ..!

ನವದೆಹಲಿ:ಮೊಟ್ಟೆ ಮತ್ತು ಚಿಕನ್​ ಇವೆರಡೂ ಮಾಂಸಹಾರಗಳೆಂಬುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಸಂಗತಿ. ಆದರೆ ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್​ ರಾವತ್​ ಚಿಕನ್​ ಹಾಗೂ ಮೊಟ್ಟೆಯನ್ನ ಸಸ್ಯಹಾರ ಎಂದಿದ್ದಾರೆ.

ಸಂಸತ್ತಿನಲ್ಲಿ ನಡೆದ ಚರ್ಚೆ ವೇಳೆ ಚಿಕನ್​ ಅನ್ನು ಆಯುರ್ವೇದಿಕ್​ ಚಿಕನ್​ ಎಂದು ಕರೆದಿದ್ದಲ್ಲದೇ ಅದು ಸಸ್ಯಾಹಾರಿ ವರ್ಗಕ್ಕೆ ಸೇರಿದೆ ಎಂದು ಘೋಷಿಸಿ ಅದರ ಸೇವನೆಗೆ ಅನುವು ಮಾಡಬೇಕೆಂದು ಆಯುಷ್​ ಸಚಿವಾಲಯಕ್ಕೆ ಸದನದಲ್ಲಿ ಮನವಿ ಮಾಡಿದ್ದಾರೆ.

ಮೊಟ್ಟೆ ಮತ್ತು ಚಿಕನ್ ಮಾಂಸಹಾರವಲ್ಲ..!

ಇವರ ಈ ಹೇಳಿಕೆಯಿಂದ ಸದಸನದ ಉಳಿದ ಸಂಸದರು ತಬ್ಬಿಬ್ಬಾಗಿದ್ದಾರೆ. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ರಾವತ್​ ಆಯುರ್ವೇದಿಕ್​ ಚಿಕನ್​ ಗೆ ಸಂಬಂಧಿಸಿದಂತೆ ತಮಗಾದ ಅನುಭವವೊಂದನ್ನು ಸದನದಲ್ಲಿ ಬಿಚ್ಚಿಟ್ಟಿದ್ದಾರೆ.

ಒಮ್ಮೆ ಅವರು ನಂದೂರ್ಬಾರ್​ ಪ್ರದೇಶದ ಆದಿವಾಸಿಗಳ ಪುಟ್ಟ ಹಾಡಿಯೊಂದಕ್ಕೆ ಭೇಟಿ ನೀಡಿದ್ರಂತೆ ಈ ವೇಳೆ ಅವರಿಗೆ ಊಟ ಬಡಿಸಿದರಂತೆ. ತಟ್ಟೆಯಲ್ಲಿರುವುದು ಏನು ಎಂದು ಅವರು ಆದಿವಾಸಿ ಜನರನ್ನು ಕೇಳಿದಾಗ ಇದು ಆಯುರ್ವೇದಿಕ್​ ಚಿಕನ್​ ಎಂದರಂತೆ. ಆಯುರ್ವೇದ ಆಹಾರವನ್ನು ತಿನ್ನಿಸಿ ಕೋಳಿಗಳನ್ನು ಬೆಳೆಸಿದ್ದೇವೆ. ಹಾಗಾಗಿ ಇದರ ಸೇವನೆಯಿಂದ ರೋಗಗಳು ನಿವಾರಣೆಯಾಗುತ್ತವೆ ಎಂದು ಹಾಡಿ ಜನರು ತಿಳಿಸಿದ್ದಾರೆ.

ಇನ್ನು ಆಯುರ್ವೇದಿಕ್​ ಚಿಕನ್​ ಗೆ ಸಂಬಂಧಿಸಿದಂತೆ ಚೌಧರಿ ಚರಣ್​ ಸಿಂಗ್​ ವಿಶ್ವವಿದ್ಯಾನಿಲಯ ಸಂಶೋಧನೆ ಕೂಡ ನಡೆಸಿದೆ. ಹೀಗಾಗಿ ಪ್ರೋಟಿನ್​ ಯುಕ್ತ ಆಹಾರಕ್ಕೆ ಆಯುರ್ವೇದ ಚಿಕನ್​ ಅನ್ನು ಬೆಂಬಲಿಸುವ ಅಗತ್ಯವಿದೆ ಎಂದು ಸಂಜಯ್​ ರಾವತ್​ ಸದನದಲ್ಲಿ ಒತ್ತಿ ಹೇಳಿದ್ದಾರೆ. ಇದಕ್ಕಾಗಿ ಆಯುಷ್​ ಸಚಿವಾಲಯ ಅತೀ ಹೆಚ್ಚು ಬಜೆಟ್​ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.

Last Updated : Jul 17, 2019, 9:22 AM IST

ABOUT THE AUTHOR

...view details