ಕರ್ನಾಟಕ

karnataka

ETV Bharat / bharat

ಮನಿ ಲಾಂಡರಿಂಗ್ ಪ್ರಕರಣ.. 207 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇಡಿ ವಶಕ್ಕೆ.. - ಹಣ ವಂಚನೆ ಪ್ರಕರಣ

ಖಾಸಗಿ ಕಂಪನಿಯ ನಿರ್ದೇಶಕರು ಮತ್ತು ಮಧುರೈ, ರಾಮನಾಥಪುರಂ ಮತ್ತು ಚೆನ್ನೈನಲ್ಲಿರುವ ಇತರೆ ಅಧಿಕಾರಿಗಳ ಹೆಸರಿನಲ್ಲಿ ನೋಂದಾಯಿಸಲಾದ 207 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಗತ್ತಿಸಿದೆ..

ED seizes properties worth crores in Tamil Nadu
ED seizes properties worth crores in Tamil Nadu

By

Published : Jan 25, 2021, 7:31 PM IST

ಚೆನ್ನೈ: ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಕಂಪನಿಯೊಂದಕ್ಕೆ ಸೇರಿದ 207 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ವಶಪಡಿಸಿಕೊಂಡಿದೆ.

ಖಾಸಗಿ ಕಂಪನಿಯ ನಿರ್ದೇಶಕರು ಮತ್ತು ಮಧುರೈ, ರಾಮನಾಥಪುರಂ ಮತ್ತು ಚೆನ್ನೈನಲ್ಲಿರುವ ಇತರೆ ಅಧಿಕಾರಿಗಳ ಹೆಸರಿನಲ್ಲಿ ನೋಂದಾಯಿಸಲಾದ 207 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಗತ್ತಿಸಿದೆ.

ಡಿಸ್ಕ್ ಅಸೆಟ್ಸ್ ಲೀಡ್ ಇಂಡಿಯಾ ಲಿಮಿಟೆಡ್ ಕಂಪನಿಗೆ ಸೇರಿದ 207 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದು, ಈ ಕಂಪನಿ ಹೂಡಿಕೆ ಸೋಗಿನಲ್ಲಿ ಸಾರ್ವಜನಿಕರನ್ನು ವಂಚಿಸಿರುವ ಕುರಿತು ಪ್ರಕರಣ ದಾಕಲಾಗಿದೆ ಎಂದು ಇಡಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.

ABOUT THE AUTHOR

...view details