ಲೇಹ್ (ಲಡಾಖ್): ಲಡಾಖ್ನಲ್ಲಿ ಇಂದು ಮುಂಜಾನೆ 4:44ರ ಸುಮಾರಿಗೆ 3.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಲಡಾಖ್ನಲ್ಲಿ 3.6 ತೀವ್ರತೆಯ ಭೂಕಂಪ - ಲಡಾಖ್ನಲ್ಲಿ ಭೂಕಂಪ
ಲಡಾಖ್ನಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಲಡಾಖ್ನಲ್ಲಿ 3.6 ತೀವ್ರತೆಯ ಭೂಕಂಪ
ಕಾರ್ಗಿಲ್‌ನಿಂದ 110 ಕಿಲೋ ಮೀಟರ್ ವಾಯುವ್ಯ ದಿಕ್ಕಿಗೆ 10 ಕಿಲೋ ಮೀಟರ್ ಭೂಮಿಯ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ತಿಳಿಸಿದೆ.
ಇಲ್ಲಿಯವರೆಗೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ ಎಂದು ತಿಳಿಸಿದೆ. ಇದಕ್ಕೂ ಮೊದಲು ಅಕ್ಟೋಬರ್ 8ರಂದು ಲಡಾಖ್ನ ಕಾರ್ಗಿಲ್ನಲ್ಲಿ 4.2ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು. ಅಂದು ಕೂಡ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿರಲಿಲ್ಲ.