ಶಿಮ್ಲಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 3.1 ರಿಕ್ಟರ್ ಪ್ರಬಲತೆಯ ಭೂಕಂಪ ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಭೂಕಂಪದಿಂದ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಹಿಮಾಚಲ ಪ್ರದೇಶದಲ್ಲಿ 11 ದಿನದಲ್ಲಿ 8ನೇ ಬಾರಿ ಲಘು ಭೂಕಂಪನ - 3.1 ರಿಕ್ಟರ್ ಪ್ರಬಲತೆ
ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ 3.1 ರಿಕ್ಟರ್ ಪ್ರಬಲತೆಯ ಭೂಕಂಪ ಸಂಭವಿಸಿದೆ. ಜಿಲ್ಲೆಯಲ್ಲಿ ಕಳೆದ 11 ದಿನಗಳಲ್ಲಿ ಸಂಭವಿಸಿದ 8ನೇ ಭೂಕಂಪ ಇದಾಗಿದೆ. ಮಾ.27 ರಿಂದ 30ರ ವರೆಗಿನ ಅವಧಿಯಲ್ಲಿ 3 ರಿಂದ 4.5 ರಿಕ್ಟರ್ ಪ್ರಬಲತೆಯ ಏಳು ಭೂಕಂಪಗಳು ಜಿಲ್ಲೆಯಲ್ಲಿ ಸಂಭವಿಸಿವೆ.
ಸೋಮವಾರ ಬೆಳಗ್ಗೆ 7 ಗಂಟೆ 3 ನಿಮಿಷಕ್ಕೆ ಭೂಕಂಪ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಕೇಂದ್ರ ನಿರ್ದೇಶಕ ಮನಮೋಹನ್ ಸಿಂಗ್ ತಿಳಿಸಿದ್ದಾರೆ. ಚಂಬಾ ಜಿಲ್ಲೆಯಲ್ಲಿ ಕಳೆದ 11 ದಿನಗಳಲ್ಲಿ ಸಂಭವಿಸಿದ 8ನೇ ಭೂಕಂಪ ಇದಾಗಿದೆ.
ಭೂಕಂಪದ ಕೇಂದ್ರವು ಚಂಬಾದ ಈಶಾನ್ಯಕ್ಕೆ 5 ಕಿಮೀ ಆಳದಲ್ಲಿತ್ತು. ಚಂಬಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಘು ಕಂಪನದ ಅನುಭವವಾಗಿದೆ ಎಂದು ಸಿಂಗ್ ಮಾಹಿತಿ ನೀಡಿದರು. ಮಾ.27 ರಿಂದ 30ರ ವರೆಗಿನ ಅವಧಿಯಲ್ಲಿ 3 ರಿಂದ 4.5 ರಿಕ್ಟರ್ ಪ್ರಬಲತೆಯ ಏಳು ಭೂಕಂಪಗಳು ಜಿಲ್ಲೆಯಲ್ಲಿ ಸಂಭವಿಸಿವೆ. ಚಂಬಾ ಜಿಲ್ಲೆ ಸೇರಿದಂತೆ ಹಿಮಾಚಲ ಪ್ರದೇಶದ ಬಹುತೇಕ ಪ್ರದೇಶ ಭೂಕಂಪ ಸೂಕ್ಷ್ಮ ವಲಯವಾಗಿದೆ.