ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರ ಸರ್ಕಾರಿ ನೌಕರರಿಗೆ ಡ್ರೆಸ್‌ ಕೋಡ್‌ ಜಾರಿ; ಜೀನ್ಸ್, ಟಿ - ಶರ್ಟ್‌ ಧರಿಸುವಂತಿಲ್ಲ

ನೆರೆಯ ಮಹಾರಾಷ್ಟ್ರದಲ್ಲಿ ಸರ್ಕಾರಿ ನೌಕರರಿಗೆ ಹೊಸ ವಸ್ತ್ರ ಸಂಹಿತೆ ಜಾರಿಗೆ ತಂದಿದ್ದು, ಯಾವುದೇ ಸಿಬ್ಬಂದಿ ಕಚೇರಿಗೆ ಹೋಗಬೇಕಾದರೆ ಇನ್ಮುಂದೆ ಜೀನ್ಸ್‌ ಪ್ಯಾಂಟ್​​ ಹಾಗೂ ಟಿ - ಶರ್ಟ್ ಧರಿಸ‌ುವಂತಿಲ್ಲ. ಸರ್ಕಾರ ಹೊರಡಿಸಿರುವ ಸುತ್ತೋಲೆ ಅನ್ವಯವೇ ಉಡುಪುಗಳನ್ನೇ ಧರಿಸಬೇಕಿದೆ.

Dress code for govt employees in Maha: No t-shirt, jeans or slippers
ಮಹಾರಾಷ್ಟ್ರ ಸರ್ಕಾರಿ ನೌಕರರಿಗೆ ಡ್ರೆಸ್‌ ಕೋಡ್‌ ಜಾರಿ; ಜೀನ್ಸ್, ಟಿ-ಶರ್ಟ್‌ ಧರಿಸುವಂತಿಲ್ಲ

By

Published : Dec 11, 2020, 7:17 PM IST

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರಿ ನೌಕರರಿಗೆ ಡ್ರೆಸ್‌ ಕೋಡ್‌ ಜಾರಿಗೆ ಮಾಡಲಾಗುತ್ತಿದ್ದು, ಇನ್ಮುಂದೆ ನೌಕರರು ಜೀನ್ಸ್‌ ಮತ್ತು ಟಿ-ಶರ್ಟ್‌ಗಳನ್ನು ಧರಿಸುವಂತಿಲ್ಲ. ಒತ್ತಡ ರಹಿತ ಉಡುಪು ಧರಿಸಬೇಕು ಎಂದು ಹೇಳಿರುವ ಸಿಎಂ ಉದ್ಧವ್‌ ಠಾಕ್ರೆ ಸರ್ಕಾರ, ಇದಕ್ಕಾಗಿ ಫ್ಲಿಪ್‌ ಫ್ಲಾಪ್‌ ಎಂಬ ವಸ್ತ್ರ ಸಂಹಿತೆ ನೀತಿ ಜಾರಿಗೆ ತಂದಿದೆ.

ಇನ್ನು, ಕೈಮಗ್ಗವನ್ನು ಪ್ರೋತ್ಸಾಹಿಸುವ ಸಲುವಾಗಿ ವಾರದಲ್ಲಿ ಒಂದು ದಿನ ಅಂದರೆ ಪ್ರತಿ ಶುಕ್ರವಾರ ಎಲ್ಲ ಸರ್ಕಾರಿ ನೌಕರರು ಖಾದಿ ವಸ್ತ್ರ ಧರಿಸಬೇಕು ಎಂದು ಹೇಳಿದೆ. ಎಲ್ಲ ಸಿಬ್ಬಂದಿ ಫಾರ್ಮಲ್(ಸಾಂಪ್ರದಾಯಿಕ)‌ ಉಡುಪು ಧರಿಸಬೇಕು ಎಂದು ಡಿಸೆಂಬರ್‌ 8 ರಂದು ಸುತ್ತೋಲೆ ಹೊರಡಿದೆ.

ಹಲವರು ಸರ್ಕಾರಿ ಅಧಿಕಾರಿಗಳು ಅಥವಾ ಸಿಬ್ಬಂದಿ ವಿಶೇಷವಾಗಿ ಅರೆಕಾಲಿಕ ಸಿಬ್ಬಂದಿ ಸೂಕ್ತವಾದ ಉಡುಪು ಧರಿಸುತ್ತಿಲ್ಲ. ಇದರಿಂದ ಸರ್ಕಾರಿ ಸಿಬ್ಬಂದಿಯ ಇಮೇಜ್‌(ರೂಪಕ್ಕೆ ಅಥವಾ ಗೌರವಕ್ಕೆ) ಧಕ್ಕೆಯಾಗುತ್ತಿದೆ. ಸರ್ಕಾರಿ ಸಿಬ್ಬಂದಿ ವರ್ತನೆ ಹಾಗೂ ಅವರು ಧರಿಸುವ ಉಡುಪು ಚೆನ್ನಾಗಿರಬೇಕು ಎಂದು ಜನರು ನಿರೀಕ್ಷೆ ಮಾಡ್ತಾರೆ. ಒಂದು ವೇಳೆ ಸರ್ಕಾರಿ ಸಿಬ್ಬಂದಿ ಸ್ವಚ್ಛವಾಗಿಲ್ಲ ಅಂದ್ರೆ ಅವರ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಒಳ್ಳೆ ಬಟ್ಟೆ ಧರಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಿದೆ.

ಮಹಿಳಾ ಸಿಬ್ಬಂದಿ ಸೀರೆ, ಸಲ್ವಾರ್‌ ಅಥವಾ ಚೂಡೀದಾರ್‌ ಕುರ್ತಾ ಧರಿಸಿದರೆ ದುಪಟ್ಟಾ ಅವಶ್ಯಕತೆ ಇದೆ. ಆದರೆ, ಪುರುಷ ಸಿಬ್ಬಂದಿ ಶರ್ಟ್‌ ಹಾಗೂ ಪ್ಯಾಂಟ್‌ ಧರಿಸಬೇಕು. ಜೊತೆಗೆ ಉಡುಪಿನ ಬಣ್ಣ ಎದ್ದು ಕಾಣುವಂತೆ ಇರಬಾರದು. ಯಾವುದೇ ರೀತಿಯ ಚಿತ್ರ ಅಥವಾ ಎಂಬ್ರೈಡಿಂಗ್‌ ಇರಬಾರದು. ಚಪ್ಪಲಿ ಅಥವಾ ಶೂ ಧರಿಸಬೇಕು ಎಂದು ಹೇಳಿದೆ.

ABOUT THE AUTHOR

...view details