ಹೊಸದಿಲ್ಲಿ:ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿ ಕುಳಿತವರಿಗಾಗಿ ದೂರದರ್ಶನ ಭರಪೂರ ಮನರಂಜನೆಯನ್ನು ಹೊತ್ತು ತರಲು ಸಜ್ಜಾಗಿದೆ. 80 ಹಾಗೂ 90ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಸೀರಿಯಲ್ಗಳನ್ನು ಈಗ ಮತ್ತೊಮ್ಮೆ ನೋಡುವ ಭಾಗ್ಯ ನಿಮ್ಮದಾಗಿದೆ. ದೂರದರ್ಶನದ ಸುವರ್ಣ ಯುಗವಾಗಿದ್ದ 80ರ ದಶಕದ ಅತಿ ಜನಪ್ರಿಯ ಸೀರಿಯಲ್ಗಳು ಈಗ ಮತ್ತೊಮ್ಮೆ ಪ್ರಸಾರವಾಗುತ್ತಿದ್ದು, ಅಂದಿನ ಮಧುರಾತಿ ಮಧುರ ನೆನಪುಗಳನ್ನು ಮೆಲುಕು ಹಾಕುವ ಅವಕಾಶ ಲಭಿಸಿದೆ.
ದೂರದರ್ಶನದಲ್ಲಿ ಮರುಪ್ರಸಾರ ಕಾಣಲಿರುವ ಜನಪ್ರಿಯ ಕಾರ್ಯಕ್ರಮಗಳ ಪಟ್ಟಿ:
1. ಚಾಣಕ್ಯ: 47 ಎಪಿಸೋಡ್, ನಿರ್ದೇಶನ: ಚಂದ್ರಪ್ರಕಾಶ ದ್ವಿವೇದಿ, ಡಿಡಿ ಭಾರತಿಯಲ್ಲಿ ಏ.1 ರಿಂದ ಮಧ್ಯಾಹ್ನದ ಸ್ಲಾಟ್ನಲ್ಲಿ ಪ್ರಸಾರವಾಗಲಿದೆ.
2. ಉಪನಿಷದ್ ಗಂಗಾ: 52 ಎಪಿಸೋಡ್, ನಿರ್ಮಾಣ: ಚಿನ್ಮಯ ಮಿಷನ್ ಟ್ರಸ್ಟ್, ನಿರ್ದೇಶನ: ಚಂದ್ರಪ್ರಕಾಶ ದ್ವಿವೇದಿ, ಡಿಡಿ ಭಾರತಿಯಲ್ಲಿ ಏ.1 ರಿಂದ ಮಧ್ಯಾಹ್ನದ ಸ್ಲಾಟ್ನಲ್ಲಿ ಪ್ರಸಾರವಾಗಲಿದೆ.
3. ಶಕ್ತಿಮಾನ್: ಮುಕೇಶ್ ಖನ್ನಾ ನಟನೆಯ ಈ ಸೀರಿಯಲ್ ಏ.1 ರಿಂದ ಡಿಡಿ ನ್ಯಾಷನಲ್ನಲ್ಲಿ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ.
4. ಶ್ರೀಮಾನ್ ಶ್ರೀಮತಿ: ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಈ ಸೀರಿಯಲ್ನ ನಿರ್ಮಾಪಕರು ಮಾರ್ಕಂಡ್ ಅಧಿಕಾರಿ. ಡಿಡಿ ನ್ಯಾಷನಲ್ನಲ್ಲಿ ಏ.1 ರಿಂದ ಮಧ್ಯಾಹ್ನ 2 ಕ್ಕೆ ಪ್ರಸಾರವಾಗಲಿದೆ.
5. ಕೃಷ್ಣಾ ಕಲಿ: ಡಿಡಿ ನ್ಯಾಷನಲ್ನಲ್ಲಿ ರಾತ್ರಿ 8.30 ಕ್ಕೆ, ಒಟ್ಟು 18 ಎಪಿಸೋಡ್.
ಈಗಾಗಲೇ ಮಾ.28 ರಿಂದ ಮರುಪ್ರಸಾರ ಆರಂಭವಾಗಿರುವ ಸೀರಿಯಲ್ಗಳು ಇಂತಿವೆ: