ಕರ್ನಾಟಕ

karnataka

ETV Bharat / bharat

ಶ್ವಾನಗಳಿಗೂ ನಡೀತು ಗಟ್ಟಿಮೇಳ... ಇವರ ದಿಬ್ಬಣ ಹೇಗಿತ್ತು ಗೊತ್ತಾ! - ಹಿಂದು ಸಂಪ್ರದಾಯ

ಉತ್ತರಪ್ರದೇಶದ ಪ್ರಯಾಗ್​ರಾಜ್​ನಲ್ಲಿ ವಿಶೇಷ ಮದುವೆಯೊಂದು ನಡೆಯಿತು. ಈ ಮದುವೆಯಲ್ಲಿ ನೂರಾರು ಜನ ಭಾಗಿಯಾಗಿದ್ದರು. ವಿವಾಹದ ಬಳಿಕ ಭಾರತೀಯ ಶೈಲಿಯ ಭೋಜನ ಉಣ ಬಡಿಸಲಾಯಿತು.

dog

By

Published : Aug 31, 2019, 9:00 PM IST

Updated : Aug 31, 2019, 9:19 PM IST

ಉತ್ತರಪ್ರದೇಶ:ಪ್ರಯಾಗ್​ರಾಜ್​ ವಿಶೇಷ ಮದುವೆಯೊಂದಕ್ಕೆ ಸಾಕ್ಷಿಯಾಯಿತು. ಇಲ್ಲಿ ಶ್ವಾನಗಳ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.

ಈ ವಿಶೇಷ ವಿವಾಹ ಕಾರ್ಯಕ್ರಮದಲ್ಲಿ 500ಕ್ಕೂ ಅಧಿಕ ಅತಿಥಿಗಳು ಭಾಗಿಯಾದರು. ಹಿಂದೂ ಸಂಪ್ರದಾಯದಂತೆ ಮದುವೆಯ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಭಾರತೀಯ ಮದುವೆಯ ಸಂದರ್ಭದಲ್ಲಿ ನುಡಿಸಲಾಗುವ ಹಾಡುಗಳನ್ನು ವಾದ್ಯ ತಂಡದವರು ನುಡಿಸಿದರು. ವರನ ಮೆರವಣಿಯಲ್ಲಿ ಹಲವರು ಭಾಗಿಯಾಗಿದ್ದು ಆಕರ್ಷಣೀಯವಾಗಿತ್ತು.

ವಧು ಹಾಗೂ ವರ ಶ್ವಾನಗಳು ಸಾಂಪ್ರಾದಾಯಿಕ ಉಡುಗೆಯಲ್ಲಿ ಮಿಂಚುತ್ತಿದ್ದವು. ವಧುವಿನ ಬೀಳ್ಕೊಡುಗೆ ಕಾರ್ಯಕ್ರಮವನ್ನು ಕೂಡಾ ಅದ್ಧೂರಿಯಾಗಿ ನಡೆಸಲಾಯಿತು.

ಈ ಮದುವೆಗಾಗಿ ಗ್ರಾಮಸ್ಥರು ನಿಧಿ ಸಂಗ್ರಹ ಮಾಡಿದ್ದರು. ಮದುವೆಯ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ.

Last Updated : Aug 31, 2019, 9:19 PM IST

ABOUT THE AUTHOR

...view details