ಚೆನ್ನೈ (ತಮಿಳುನಾಡು): ತಾವು ಹುಟ್ಟಿದ ದಿನವಾದ ಇಂದೇ ಡಿಎಂಕೆ ಶಾಸಕ ಜೆ.ಅನ್ಬಳಗನ್ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಕೊರೊನಾ ಸೋಂಕಿನಿಂದ ಮೃತಪಟ್ಟ ಮೊದಲ ಶಾಸಕರಾಗಿದ್ದಾರೆ.
ಡಿಎಂಕೆ ಪಕ್ಷದ ಚೆನ್ನೈ ಪಶ್ಚಿಮ ಜಿಲ್ಲೆಯ ಕಾರ್ಯದರ್ಶಿಯೂ ಆಗಿದ್ದ ಇವರಿಗೆ 62 ವರ್ಷ ವಯಸ್ಸಾಗಿತ್ತು.

ಜೂನ್ 2ರಂದು ಉಸಿರಾಟದ ತೊಂದರೆಯಿಂದ ಚೆನ್ನೈನ ಕ್ರೋಮ್ಪೇಟ್ನಲ್ಲಿರುವ ಡಾ.ರೇಲಾ ಇನ್ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್ಗೆ ದಾಖಲಾಗಿದ್ದ ಇವರಿಗೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಅವರಲ್ಲಿ ಕೊರೊನಾ ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಮೂರು ಬಾರಿ ಶಾಸಕರಾಗಿದ್ದ ಅನ್ಬಳಗನ್ 2001, 2011 ಹಾಗೂ 2016ರಲ್ಲಿ ಟಿ. ನಗರ್ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿದ್ದರು.