ನವದೆಹಲಿ: ಇಡಿ ಸಮನ್ಸ್ಗೆ ಹೆದುರುವುದಿಲ್ಲ, ಏನೂ ಆಗಿಲ್ಲ, ಆಗುವುದಿಲ್ಲ. ಎಲ್ಲವನ್ನೂ ಎದುರಿಸುತ್ತೇನೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್, ನಿನ್ನೆಯಿಂದ ಇಡಿ ಅಧಿಕಾರಿಗಳ ವಿಚಾರಣೆ ಎದುರಿಸುತ್ತಿದ್ದಾರೆ.
ನಿನ್ನೆ 6 ಗಂಟೆಗಳ ಕಾಲ ಮಾಜಿ ಸಚಿವ ಡಿಕೆಶಿ ಅವರನ್ನ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇಂದು 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಮತ್ತೊಂದು ಸಮನ್ಸ್ ಜಾರಿ ಮಾಡಲಾಗಿತ್ತು.
ಇಡಿ ವಿಚಾರಣೆಗೆ ಹಾಜರಾಗುವ ಮುನ್ನ ಮಾತನಾಡಿದ ಅವರು, ತಾವು ಕಾನೂನಿಗೆ ತಲೆ ಬಾಗಲಿದ್ದು, ಯಾವುದೇ ವಿಚಾರಣೆಯನ್ನು ಧೈರ್ಯದಿಂದಲೇ ಎದುರಿಸುತ್ತೇನೆ. ಹೆದುರುವ ಪ್ರಶ್ನೆಯೇ ಇಲ್ಲ. ನಾನೇನು ಕಳ್ಳತನ ಮಾಡಿಲ್ಲ. ಏನೂ ನಡೆದೂ ಇಲ್ಲ ಎಂದು ತಮ್ಮ ಎಂದಿನ ಸ್ಟೈಲ್ನಲ್ಲೇ ಡಿಕೆಶಿ ಮಾಧ್ಯಮದವರಿಗೆ ಖಡಕ್ ಉತ್ತರ ನೀಡಿ, ತೆರಳಿದರು.