ನವದೆಹಲಿ/ಬೆಂಗಳೂರು:ಸುಪ್ರೀಂಕೋರ್ಟ್ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಸುತ್ತಿದ್ದು, ಅನರ್ಹರ ಪರ ವಕೀಲ ಮುಕುಲ್ ರೋಹ್ಟಗಿ ತಮ್ಮ ವಾದ ಮಂಡಿಸುತ್ತಿದ್ದಾರೆ. ಈಗಾಗಲೇ ಘೋಷಣೆಯಾಗಿರುವ ಉಪಚುನಾವಣೆ ಮುಂದೂಡಿಕೆಗೆ ರೋಹ್ಟಗಿ ಕೋರ್ಟ್ಗೆ ಮನವಿ ಮಾಡಿದ್ದಾರೆ.
ಅನರ್ಹರ ಪರ ಮುಕುಲ್ ರೋಹ್ಟಗಿ ಗಂಟೆಗಳಿಗೂ ಅಧಿಕ ಕಾಲ ವಾದ ಮಂಡನೆ ಮಾಡಿದ್ದು, ಸದ್ಯ ಸುಪ್ರೀಂ ಕೋರ್ಟ್ ಭೋಜನ ವಿರಾಮ ನೀಡಿದೆ. ವಿವಿಧ ನಿದರ್ಶನಗಳನ್ನು ಪ್ರಸ್ತಾಪಿಸುತ್ತಾ ರೋಹ್ಟಗಿ ಅನರ್ಹರ ಪರ ಪ್ರಬಲ ವಾದ ಮಂಡಿಸಿದ್ದಾರೆ. ಇದರ ಜೊತೆಗೆ ಪಕ್ಷೇತರ ಶಾಸಕ ಸುಧಾಕರ್ ಪರ ಸುಂದರಂ ಸದ ವಾದ ಮಂಡಿಸಿದ್ದಾರೆ.
ಅರ್ಜಿಯ ಬಗ್ಗೆ ವಾದ-ಪ್ರತಿವಾದ ಮುಂದುವರೆದಿದ್ದು, ಕೋರ್ಟ್ ತನ್ನ ತೀರ್ಪನ್ನು ಇಂದೇ ನೀಡಲಿದೆಯಾ ಅಥವಾ ನಾಳೆಗೆ ಕಾಯ್ದಿರಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಅನರ್ಹ ಶಾಸಕರ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿದರೆ, ಸ್ಪೀಕರ್ ಪರ ಕಪಿಲ್ ಸಿಬಲ್ ಪ್ರತಿವಾದ ಮಂಡಿಸಲಿದ್ದಾರೆ.
ಈಗಾಗಲೇ 17 ಕ್ಷೇತ್ರಗಳ ಪೈಕಿ ಹದಿನೈದು ಕ್ಷೇತ್ರದ ಚುನಾವಣೆ ಘೋಷಣೆಯಾಗಿದ್ದು, ಸುಪ್ರೀಂಕೋರ್ಟ್ ತೀರ್ಪು ಅನರ್ಹ ಶಾಸಕರ ಪಾಲಿಗೆ ನಿರ್ಣಾಯಕವಾಗಲಿದೆ. ಅನರ್ಹರು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ ಕೋರ್ಟ್ನಲ್ಲಿ ಹೇಳಿದ್ದಾರೆ.