ಕರ್ನಾಟಕ

karnataka

ETV Bharat / bharat

ತಪಾಸಣೆಯಾಗದ ಜನರನ್ನು ದೇಶಕ್ಕೆ ಮರಳಿ ಕರೆತರಲು ಸಾಧ್ಯವಿಲ್ಲ: ಎಸ್​ ಜೈಶಂಕರ್ ಸ್ಪಷ್ಟನೆ

"ಕೆಲವು ಪ್ರಕರಣಗಳಲ್ಲಿ ಸೋಂಕಿತರನ್ನು ಕಡ್ಡಾಯವಾಗಿ ಪ್ರತ್ಯೇಕವಾಗಿ ಇಡಬೇಕಾಗುತ್ತದೆ ಮತ್ತು ಕೆಲ ಸಂದರ್ಭಗಳಲ್ಲಿ ವಿವೇಚನೆಯ ಆಧಾರದಲ್ಲಿ ಸಂಪರ್ಕ ತಡೆಯನ್ನು ಹೇರಬೇಕಾಗುತ್ತದೆ. ವಿದೇಶದಿಂದ ಭಾರತಕ್ಕೆ ಹಿಂತಿರುಗುತ್ತಿರುವ ಭಾರತೀಯ ನಾಗರಿಕರಿಗೂ ಅಗತ್ಯಬಿದ್ದರೆ ಪ್ರತ್ಯೇಕ ಚಿಕಿತ್ಸೆ ಅಥವಾ ನೀಡಬೇಕಾಗುತ್ತದೆ" ಎಂದು ಜೈಶಂಕರ್​ ತಿಳಿಸಿದ್ದಾರೆ.

Jaishankar
ಎಸ್​ ಜೈಶಂಕರ್

By

Published : Mar 13, 2020, 12:31 PM IST

ನವದೆಹಲಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಬಹಳ ವಿಸ್ತೃತವಾದ ಟ್ರ್ಯಾಕಿಂಗ್ ವಿಧಾನ ಜಾರಿಯಲ್ಲಿದೆ. ಅಲ್ಲದೇ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ತಪಾಸಣೆಗೊಳಪಡಿಸದ ಜನರನ್ನು ದೇಶಕ್ಕೆ ಮರಳಿ ತರಲು ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಗುರುವಾರ ಹೇಳಿದ್ದಾರೆ.

COVID -19 ಕಾರಣದಿಂದಾಗಿ ಇರಾನ್‌ನಲ್ಲಿ ಸಿಲುಕಿರುವ ಭಾರತೀಯರ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ದೇಶಕ್ಕೆ ಬರುವ ವಿದೇಶಿ ಪ್ರಜೆಗಳ ಮೇಲೆ ಭಾರತ ಯಾವುದೇ ನಿಷೇಧ ಹೇರಿಲ್ಲ. ಆದರೆ ಕೆಲವು ದೇಶಗಳ ಜನರು ಬಂದರೆ, ಅವರನ್ನು ಪ್ರತ್ಯೇಕವಾಗಿಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

"ಕೆಲವು ಪ್ರಕರಣಗಳಲ್ಲಿ ಅಂತವರನ್ನು ಕಡ್ಡಾಯವಾಗಿ ಪ್ರತ್ಯೇಕಿಸಬೇಕಾಗುತ್ತದೆ ಮತ್ತು ಕೆಲ ಸಂದರ್ಭಗಳಲ್ಲಿ ವಿವೇಚನೆಯ ಆಧಾರದಲ್ಲಿ ಸಂಪರ್ಕ ತಡೆಯನ್ನು ಹೇರಬೇಕಾಗುತ್ತದೆ. ವಿದೇಶದಿಂದ ಭಾರತಕ್ಕೆ ಹಿಂತಿರುಗುತ್ತಿರುವ ಭಾರತೀಯ ನಾಗರಿಕರಿಗೂ ಅಗತ್ಯಬಿದ್ದರೆ ಪ್ರತ್ಯೇಕ ಚಿಕಿತ್ಸೆ ಅಥವಾ ನೀಡಬೇಕಾಗುತ್ತದೆ" ಎಂದು ಜೈಶಂಕರ್​ ತಿಳಿಸಿದ್ದಾರೆ.

ವಿದೇಶದಿಂದ ಬರುವವರಲ್ಲಿ ಸೋಂಕು ಪತ್ತೆಹಚ್ಚುವ ಸಮಸ್ಯೆಯ ಬಗ್ಗೆ ಉಲ್ಲೇಖಿಸಿದ ಅವರು, ನಮ್ಮಲ್ಲಿ ಬಹಳ ವಿವರವಾದ ಟ್ರ್ಯಾಕಿಂಗ್ ವ್ಯವಸ್ಥೆ ಇದೆ ಎಂದು ಸರ್ಕಾರದ ಕ್ರಮವನ್ನ ಸಮರ್ಥಿಸಿಕೊಂಡರು.

ಡಿಎಂಕೆ ಸದಸ್ಯ ಟಿ.ಆರ್. ಬಾಲು ಅವರ ಕಳವಳಗಳಿಗೆ ಪ್ರತಿಕ್ರಿಯಿಸಿದ ಅವರು, ಇರಾನ್‌ನಲ್ಲಿರುವ ಯಾವುದೇ ಭಾರತೀಯ ಮೀನುಗಾರರಲ್ಲಿ ಈವರೆಗೆ ಕೊರೊನಾ ಪಾಸಿಟಿವ್​ ಪ್ರಕರಣ ಪತ್ತೆಯಾಗಿಲ್ಲ. ಆದರೆ ಆಹಾರ ಸೇರಿದಂತೆ ಇತರ ವಸ್ತುಗಳನ್ನು ಪಡೆಯುವಲ್ಲಿ ಅವರಿಗೆ ತೊಂದರೆ ಇದೆ ಎಂದು ಹೇಳಿದ್ದಾರೆ. ನಮ್ಮ ರಾಯಭಾರ ಕಚೇರಿಯು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ನಾವು ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದು, ಇತರ ಜನರ ಸದ್ಯದ ಪರಿಸ್ಥಿತಿಯನ್ನು ಪರೀಕ್ಷಿಸಲು ನಾವು ನೋಡಲ್ ಕೇಂದ್ರವನ್ನು ಸ್ಥಾಪಿಸುತ್ತಿದ್ದೇವೆ ಎಂದು ಸಚಿವರು ಇದೇ ವೇಳೆ ಭರವಸೆ ನೀಡಿದರು.

ವಿಮಾನ ನಿಲ್ದಾಣಗಳಲ್ಲಿ ಸಿಲುಕಿರುವ ಜನರಿಗೆ ಸರ್ಕಾರ ಸಹಾಯ ಮಾಡುತ್ತಿದೆ. ನಾವು ಜನರಲ್ಲಿರುವ ಭೀತಿಯನ್ನು ಕಡಿಮೆ ಮಾಡುತ್ತಿದ್ದೇವೆ ಎಂದು ಅವರು ಸದನಕ್ಕೆ ಮತ್ತೆ ಮತ್ತೆ ಸ್ಪಷ್ಟಪಡಿಸಿದರು.

ABOUT THE AUTHOR

...view details