ಕರ್ನಾಟಕ

karnataka

ETV Bharat / bharat

ಮುಂಗಡ ಬುಕಿಂಗ್ ಮುಂದುವರಿಸಿದ ಖಾಸಗಿ ವಿಮಾನಯಾನ ಸಂಸ್ಥೆಗಳು! - ಇಂಡಿಗೊ, ವಿಸ್ಟಾರಾ ಮತ್ತು ಸ್ಪೈಸ್ ಜೆಟ್

ಸರ್ಕಾರದ ಆದೇಶದ ನಂತರವೇ ಬುಕಿಂಗ್ ತೆರೆಯುವಂತೆ ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಿದ್ದರೂ, ಖಾಸಗಿ ವಿಮಾನಯಾನ ಸಂಸ್ಥೆಗಳು ಮುಂಗಡ ಕಾಯ್ದಿರಿಸುವಿಕೆಯನ್ನು ನಿಲ್ಲಿಸಲಿಲ್ಲ.

airlines
ವಿಮಾನಯಾನ

By

Published : Apr 20, 2020, 11:02 AM IST

ನವದೆಹಲಿ: ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಆದೇಶದ ನಂತರವೇ ಬುಕಿಂಗ್ ತೆರೆಯುವಂತೆ ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಿದ್ದರೂ, ಖಾಸಗಿ ವಿಮಾನಯಾನ ಸಂಸ್ಥೆಗಳು ಮೇ 4ರಿಂದ ಮುಂಗಡ ಕಾಯ್ದಿರಿಸುವಿಕೆಯನ್ನು ಇನ್ನೂ ನಿಲ್ಲಿಸಲಿಲ್ಲ.

ಇಂಡಿಗೊ, ವಿಸ್ತಾರಾ ಮತ್ತು ಸ್ಪೈಸ್ ಜೆಟ್ ವೆಬ್‌ಸೈಟ್‌ಗಳು ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾದಂತಹ ನಗರಗಳಿಗಗೆ ವಿಮಾನಯಾನ ಸೇವೆಯ ಟಿಕೆಟ್ ಬುಕಿಂಗ್ ತೆರೆದಿವೆ.

ಕೆಲ ಆಯ್ದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಮೇ 4 ಮತ್ತು ಜೂನ್ 1ರಿಂದ ಬುಕಿಂಗ್ ತೆರೆಯುವುದಾಗಿ ಏರ್ ಇಂಡಿಯಾ ಶನಿವಾರ ಪ್ರಕಟಿಸಿತ್ತು. ಆದರೆ ಮುಂಗಡ ಬುಕಿಂಗ್ ಮುಚ್ಚವಂತೆ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ವಿಮಾನಯಾನ ಸಂಸ್ಥೆಗಳಿಗೆ ತಿಳಿಸಿದ ಕೂಡಲೇ, ಬುಕಿಂಗ್ ತೆಗೆದುಕೊಳ್ಳುವುದನ್ನು ಏರ್ ಇಂಡಿಯಾ ನಿಲ್ಲಿಸಿದೆ.

ABOUT THE AUTHOR

...view details