ಕರ್ನಾಟಕ

karnataka

ETV Bharat / bharat

ದೆಹಲಿ ಚುನಾವಣೆ: ಹಕ್ಕು ಚಲಾಯಿಸುವಂತೆ ಮನವಿ ಮಾಡಿದ ಕೇಜ್ರಿ, ಮೋದಿ - ಅರವಿಂದ್ ಕೇಜ್ರಿವಾಲ್

ರಾಷ್ಟ್ರ ರಾಜಧಾನಿಯಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತದಾರರಿಗೆ ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿದ್ದಾರೆ.

ಅರವಿಂದ್ ಕೇಜ್ರಿವಾಲ್
Kejriwal

By

Published : Feb 8, 2020, 10:47 AM IST

ನವದೆಹಲಿ: ದೆಹಲಿ ವಿಧಾನಸಭೆಗೆ ಮತದಾನ ಪ್ರಾರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಎಲ್ಲರೂ ತಮ್ಮ ಮತದಾನದ ಹಕ್ಕು ಚಲಾಯಿಸುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕೇಜ್ರಿವಾಲ್, ಎಲ್ಲರೂ ಮತದಾನ ಮಾಡಿ, ವಿಶೇಷವಾಗಿ ಮಹಿಳೆಯರು, ಮನೆಯ ಜವಾಬ್ದಾರಿ ವಹಿಸಿಕೊಂಡಂತೆ ಮನೆಯ ಎಲ್ಲರೂ ಮತದಾನ ಮಾಡುವ ಮೂಲಕ ದೇಶದ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಹಾಗಾಗಿ ಎಲ್ಲಾ ಮಹಿಳೆಯರು ತಮ್ಮ ಕುಟುಂಬದವರೊಂದಿಗೆ ಹೋಗಿ ತಮ್ಮ ಹಕ್ಕನ್ನು ಚಾಲಾಯಿಸಿ. ರಾಜ್ಯದ ಜವಾಬ್ದಾರಿಯೂ ಸಹ ನಿಮ್ಮ ಹೆಗಲ ಮೇಲಿದೆ. ಅದನ್ನು ತಮ್ಮ ಅಮೂಲ್ಯವಾದ ಮತವನ್ನು ಹಾಕುವ ಮೂಲಕ ನಿಭಾಯಿಸಿ ಎಂದು ಮನವಿ ಮಾಡಿದ್ದಾರೆ.

ದೆಹಲಿ ವಿಧಾನಸಭೆಯ 70 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ಈ ಬಾರಿ ಮೂರು ಪಕ್ಷಗಳ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆದು ಪ್ರಸ್ತುತ ಅಧಿಕಾರದಲ್ಲಿರುವ ಎಎಪಿ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿದೆ. ಇತ್ತ ಬಿಜೆಪಿ ಕೂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಜನಪ್ರಿಯತೆಯಿಂದಾಗಿ ಗೆಲುವಿನ ಭರವಸೆ ಹೊಂದಿದೆ.ಮಾಜಿ ಮುಖ್ಯಮಂತ್ರಿ ದಿವಂಗತ ಶೀಲಾ ದೀಕ್ಷಿತ್ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ 15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ​ ಒಂದು ಸ್ಥಾನವನ್ನೂ ಗೆಲ್ಲದೇ ಮುಖಭಂಗಕ್ಕೀಡಾಗಿತ್ತು. ಹೀಗಾಗಿ ದೆಹಲಿಯಲ್ಲಿ ಕಾಂಗ್ರೆಸ್​ಪುನರುಜ್ಜೀವನದ ನಿರೀಕ್ಷೆಯಲ್ಲಿದೆ.ಹೋದ ಚುನಾವಣೆಯಲ್ಲಿ ಎಎಪಿ 67 ಸ್ಥಾನಗಳನ್ನು ಪಡೆದಿತ್ತು. ಬಿಜೆಪಿ ಮೂರು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು.


ಮುಖ್ಯಮಂತ್ರಿ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಬಿಜೆಪಿ ಸುನೀಲ್ ಯಾದವ್ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್​ನಿಂದ ಕೇಜ್ರಿವಾಲ್​ ಪ್ರತಿಸ್ಪರ್ಧಿಯಾಗಿ ರೋಮೇಶ್ ಸಬರ್​ವಾಲ್​ ಸ್ಪರ್ಧಿಸುತ್ತಿದ್ದಾರೆ. ಎಎಪಿಯ ದಿಲೀಪ್ ಪಾಂಡೆ ತಿಮಾರ್ಪುರದಿಂದ, ಕಲ್ಕಾಜಿಯಿಂದ ಅತಿಶಿ, ರಾಜೇಂದರ್ ನಗರದಿಂದ ರಾಘವ್ ಚಾಡ್ಡಾ ಸ್ಪರ್ಧಿಸುತ್ತಿದ್ದಾರೆ.

ಒಟ್ಟು 1.4 ಕೋಟಿ ಜನರು ಈ ಬಾರಿ ಚುನಾವಣೆಯಲ್ಲಿ ಮತದಾನ ಮಾಡುತ್ತಿದ್ದು, ಅದರಲ್ಲಿ 81,05,236 ಪುರುಷ ಮತದಾರರಿದ್ದರೆ, 66,80,277 ಮಹಿಳಾ ಮತದಾರರಿದ್ದಾರೆ. ಇದನ್ನು ಹೊರತುಪಡಿಸಿ 869 ತೃತೀಯ ಲಿಂಗ ಮತದಾರರಿದ್ದಾರೆ. ಸುಮಾರು 2,688 ಸ್ಥಳಗಳಲ್ಲಿ 13,571 ಮತಗಟ್ಟೆಗಳಿವೆ. ಈ ಪೈಕಿ 3,141 ನಿರ್ಣಾಯಕ ಮತದಾನ ಕೇಂದ್ರಗಳಿದ್ದು,144 ಸೂಕ್ಷ್ಮ ಮತದಾನ ಕೇಂದ್ರಗಳಾಗಿವೆ.

ಮತದಾನ ನಡೆಯುವ 70 ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನವನ್ನು ನಡೆಸುವ ಸಲುವಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) 190 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ, 19,000 ಹೋಮ್ ಗಾರ್ಡ್ ,42,000 ದೆಹಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ABOUT THE AUTHOR

...view details