ಕರ್ನಾಟಕ

karnataka

ETV Bharat / bharat

ಗೃಹ ಇಲಾಖೆಗೆ ದೆಹಲಿ ಹಿಂಸಾಚಾರದ ಶೀಘ್ರವೇ ಪೊಲೀಸ್​ ವರದಿ : ರಿಪೋರ್ಟ್​ನಲ್ಲೇನಿದೆ?

ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮುಂದಿನ ವಾರ ಸಂಪೂರ್ಣ ವರದಿಯನ್ನ ದೆಹಲಿ ಪೊಲೀಸರು ಗೃಹ ಇಲಾಖೆಗೆ ಒಪ್ಪಿಸುವ ಸಾಧ್ಯತೆ ಇದೆ.

Delhi police to submit full report to Home Ministry over Delhi violence
ದೆಹಲಿ ಪೊಲೀಸರು

By

Published : Mar 13, 2020, 9:24 AM IST

ನವದೆಹಲಿ: ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಳೆದ ವಾರ ಸಂಸತ್​ನ ಉಭಯ ಸದನಗಳಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದ್ದು, ಹಲವರ ಅಮಾನತಿಗೂ ಕಾರಣವಾಗಿತ್ತು.

ಇದೀಗ ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜಧಾನಿ ಪೊಲೀಸರು ಸಂಪೂರ್ಣ ವರದಿ ತಯಾರಿಸುತ್ತಿದ್ದು, ಮುಂದಿನ ವಾರ ಸಂಪೂರ್ಣ ವರದಿಯನ್ನ ಗೃಹ ಇಲಾಖೆಗೆ ಒಪ್ಪಿಸುವ ಸಾಧ್ಯತೆ ಇದೆ. ಈಗಾಗಲೇ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಿಎಫ್​ಐನ ದೆಹಲಿ ಮುಖ್ಯಸ್ಥ ಪ್ರರ್ವೇಜ್​ ಅಹಮ್ಮದ್​, ಕಾರ್ಯದರ್ಶಿ ಮೊಹಮ್ಮದ್​ ಇಲಿಯಾಸ್​​​ ಎಂಬುವವರನ್ನ ಬಂಧಿಸಿ ಜೈಲಿಗೆ ಅಟ್ಟಿದೆ. ಈ ಇಬ್ಬರು ಹಿಂಸಾಚಾರಕ್ಕೆ ಅನುದಾನ ಒದಗಿಸಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.

ವಿಶೇಷ ಎಂದರೆ ಎಸ್​ಡಿಪಿಐ ಪಕ್ಷದಿಂದ ಇಲಿಯಾಸ್​ 2020 ರ ದೆಹಲಿ ವಿಧಾನಸಭೆ ಚುನಾವಣೆಗೆ ಕಾರ್ವಾಲ್​ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ. ಇನ್ನು ಬೇಹುಗಾರಿಕಾ ಅಧಿಕಾರಿ ಅಂಕಿತ್​ ಶರ್ಮಾ ಹತ್ಯೆ ಮಾಡಿದ ಆರೋಪಿ ಸಲ್ಮಾನ್​ ಅಲಿಯಾಸ್​​​ ನನ್ಹೆ ಅವನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಹಿಂಸಾಚಾರದ ಹಿಂದಿರುವವರ ಬಗ್ಗೆ ಮಾಹಿತಿ ಕಲೆ ಹಾಕಿದೆ.

ಇನ್ನೊಂದೆಡೆ ಸಂಸತ್​ನಲ್ಲಿ ಹೇಳಿಕೆ ನೀಡಿರುವ ಗೃಹ ಸಚಿವ ಅಮಿತ್​ ಶಾ ಹಿಂಸಾಚಾರಕ್ಕೆ ಕಾರಣ ಯಾರು ಎಂಬ ಬಗ್ಗೆ ಪೊಲೀಸರಿಗೆ ಸಾಕ್ಷ್ಯ ಸಿಕ್ಕಿದ್ದು, ತಪ್ಪಿತಸ್ಥರನ್ನ ಯಾವುದೇ ಕಾರಣಕ್ಕೂ ಸುಮ್ಮನೇ ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ.

ABOUT THE AUTHOR

...view details