ಕರ್ನಾಟಕ

karnataka

ETV Bharat / bharat

ವಿಶೇಷ ಅಂಕಣ: ದೆಹಲಿ ವಿಧಾನಸಭೆ ಚುನಾವಣೆ... ಈ ಬಾರಿಯೂ ಮೋಡಿ ಮಾಡುವ ಹುಮ್ಮಸ್ಸಿನಲ್ಲಿ ಎಎಪಿ! - ದೆಹಲಿ ವಿಧಾನಸಭೆ ಚುನಾವಣೆ 2020

2015ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಒಂದು ಸ್ಥಾನದಲ್ಲೂ ಗೆಲ್ಲಲು ಯಶಸ್ವಿಯಾಗಲಿಲ್ಲ. ಗ್ರೌಂಡ್ ರಿಪೋರ್ಟ್‌ ಮತ್ತು ಕೆಲವು ಇತ್ತೀಚಿನ ಅಭಿಪ್ರಾಯಗಳ ಪ್ರಕಾರ ಜನರ ದನಿ ಎಎಪಿ ಪರವಾಗಿಯೇ ಇದೆ. 2019 ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನಗೈದ ಎಎಪಿ ಇದೀಗ ಎಚ್ಚೆತ್ತುಕೊಂಡಂತಿದೆ.

Delhi Assembly Election
ದೆಹಲಿ ವಿಧಾನಸಭೆ ಚುನಾವಣೆ

By

Published : Jan 27, 2020, 12:46 PM IST

ದೆಹಲಿ ವಿಧಾನಸಭೆ ಚುನಾವಣೆಯ ಮಹತ್ವದ ಪ್ರಕ್ರಿಯೆ ಮತದಾನಕ್ಕೆ ಇನ್ನು ಕೆಲವೇ ದಿನಗಳಿವೆ. ಈಗಿನ ಮೂಡ್‌ ನೋಡಿದರೆ ಆಡಳಿತ ಪಕ್ಷ ಆಮ್ ಆದ್ಮಿ ಪಾರ್ಟಿ ಸರಾಗವಾಗಿ ಈ ಬಾರಿಯ ಚುನಾವಣೆಯಲ್ಲಿ ಗೆಲುವಿನ ನಗೆ ಬೀರುವ ಸಂಭವ ಕಾಣಿಸುತ್ತಿದೆ. ಎಎಪಿಗೆ ಬಿಜೆಪಿ ಸ್ಫರ್ಧೆ ಒಡ್ಡುವಂತೆ ಕಾಣುತ್ತಿದ್ದರೂ, ಅದು ಗೆಲುವಿನಿಂದ ಸಾಕಷ್ಟು ದೂರದಲ್ಲೇ ಇರುವಂತಿದೆ. ಹದಿನೈದು ವರ್ಷಗಳವರೆಗೆ (1998-2013) ದೆಹಲಿಯನ್ನು ಆಳಿದ ಕಾಂಗ್ರೆಸ್ ಪಕ್ಷ 2015ರ ವಿಧಾನಸಭೆ ಚುನಾವಣೆಯಲ್ಲಿ ಕಂಡ ಹೀನಾಯ ಸೋಲಿನಿಂದ ಎಚ್ಚೆತ್ತುಕೊಂಡಂತಿಲ್ಲ. 2015ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಒಂದು ಸ್ಥಾನದಲ್ಲೂ ಗೆಲ್ಲಲು ಯಶಸ್ವಿಯಾಗಲಿಲ್ಲ. ಗ್ರೌಂಡ್ ರಿಪೋರ್ಟ್‌ ಮತ್ತು ಕೆಲವು ಇತ್ತೀಚಿನ ಅಭಿಪ್ರಾಯಗಳ ಪ್ರಕಾರ ಜನರ ದನಿ ಎಎಪಿ ಪರವಾಗಿಯೇ ಇದೆ. 2019 ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನಗೈದ ಎಎಪಿ ಇದೀಗ ಎಚ್ಚೆತ್ತುಕೊಂಡಂತಿದೆ.

2019 ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದ ಬಿಜೆಪಿ ಎಲ್ಲ ಏಳು ಸೀಟುಗಳಲ್ಲೂ ಗೆದ್ದಿತ್ತು. ಶೇ.57 ರಷ್ಟು ಮತಗಳನ್ನು ಗಳಿಸಿದ್ದ ಬಿಜೆಪಿ ಖಂಡಿತವಾಗಿಯೂ ಎಎಪಿಗೆ ತೀಕ್ಷ್ಣ ಪೈಪೋಟಿ ನೀಡಲಿದೆ. ಆದರೆ ಗೆಲುವಿನಿಂದ ಇದು ದೂರದಲ್ಲೇ ಇರಲಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಭಾರಿ ಸಂಖ್ಯೆಯಲ್ಲಿ ಬಿಜೆಪಿ ಪರವಾಗಿ ಮತ ನೀಡಿದ್ದರೂ, ಯುವಕರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಎಎಪಿಗೆ ಮತ ನೀಡಲು ನಿರ್ಧರಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರವನ್ನು ಆಯ್ಕೆ ಮಾಡುವಲ್ಲಿನ ಸ್ಪಷ್ಟ ವ್ಯತ್ಯಾಸವನ್ನು ಬಹುತೇಕ ಮತದಾರರು ತಿಳಿದುಕೊಂಡಿದ್ದಾರೆ.

ಎಎಪಿ ತನ್ನ ಪ್ರತಿಸ್ಫರ್ಧಿಗಿಂತ ಒಂದು ಹೆಜ್ಜೆ ಮುಂದಿರುವುದಕ್ಕೆ ಒಂದು ಪ್ರಮುಖ ಕಾರಣವೇನೆಂದರೆ, ಕೇಜ್ರಿವಾಲ್‌ ಸರ್ಕಾರವು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ವಿಶೇಷ ಕೆಲಸಗಳು ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ಜನಪ್ರಿಯತೆಯಾಗಿದೆ. ಎಎಪಿ ಇನ್ನಷ್ಟು ಸಶಕ್ತವಾಗಲು ಕಾರಣವೇನೆಂದರೆ, ಬಿಜೆಪಿಯಲ್ಲಾಗಲೀ ಅಥವಾ ಕಾಂಗ್ರೆಸ್‌ನಲ್ಲಾಗಲೀ ಯಾವ ಪಕ್ಷದಲ್ಲೂ ಅರವಿಂದ ಕೇಜ್ರಿವಾಲ್‌ಗೆ ಸಮೀಪಕ್ಕೂ ಬರುವಷ್ಟು ಜನಪ್ರಿಯತೆಯನ್ನು ಯಾವ ನಾಯಕರೂ ಪಡೆದಿಲ್ಲ.

2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಅಷ್ಟೇನೂ ಉತ್ತಮ ಸಾಧನೆ ಮಾಡದಿದ್ದರೂ, ಎಎಪಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ದೆಹಲಿ ಜನರಿಗೆ ಮೆಚ್ಚಿನ ಸರ್ಕಾರವಾಗಿಯೇ ಉಳಿದುಕೊಂಡಿದೆ. 2013 ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಫರ್ಧಿಸಿದಾಗ ಹೆಚ್ಚಿನ ಸೀಟುಗಳಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಆಗ ಅದು ಕೇವಲ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು ಮತ್ತು ಶೇ. 29.5 ರಷ್ಟು ಮತಗಲನ್ನು ಪಡೆದಿತ್ತು. ಆದರೆ ಒಂದು ವರ್ಷದ ನಂತರ 2015 ರಲ್ಲಿ ನಡೆದ ಚುನಾವಣೆಯಲ್ಲಿ 70 ವಿಧಾನಸಭೆ ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿತು ಮತ್ತು ಶೇ. 54.3 ರಷ್ಟು ಮತಗಳನ್ನು ಪಡೆಯಿತು.

ಬಿಜೆಪಿ ಬಹುತೇಕವಾಗಿ ರಾಷ್ಟ್ರೀಯ ವಿಚಾರಗಳನ್ನು ಮುಖ್ಯವಾಗಿಟ್ಟುಕೊಂಡು ಚುನಾವಣೆಯನ್ನು ಎದುರಿಸಲಿದೆ. ಪೌರತ್ವ ತಿದ್ದುಪಡಿ ಕಾಯ್ದೆ, 370ನೇ ವಿಧಿ ರದ್ದತಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ತ್ರಿವಳಿ ತಲಾಖ್‌ನಂತಹ ವಿಷಯಗಳನ್ನು ಅದು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳಲಿದೆ. ಆದರೆ ಇತ್ತೀಚಿನ ವಿಧಾನಸಭೆ ಚುನಾವಣೆಗಳಲ್ಲಿ ಜನರು ಹೇಗೆ ಮತ ಹಾಕಿದ್ದರೆ ಎಂಬುದನ್ನು ನೋಡಿದರೆ, ದೆಹಲಿಯ ಜನರು ವಿಧಾನಸಭೆ ಚುನಾವಣೆ ವೇಳೆ ನಗರದ ಮಟ್ಟದ ಸ್ಥಳೀಯ ವಿಷಯಗಳಿಗೆ ಪ್ರಾಮುಖ್ಯತೆ ನೀಡಿದ್ದಾರೆ ಮತ್ತು ಸ್ಥಳೀಯ ವಿಷಯಗಳನ್ನು ಗಮನದಲ್ಲಿಟ್ಟುಕೊಂಡೇ ಮತ ನೀಡಲಿದ್ದಾರೆ.

ಈ ಚುನಾವಣೆಯಲ್ಲಿ ಎಎಪಿ ಮಾಡುತ್ತಿರುವ ಅತ್ಯಂತ ಪ್ರಮುಖ ಕಾರ್ಯತಂತ್ರವೆಂದರೆ, ಕಳೆದ ಐದು ವರ್ಷದಲ್ಲಿ ತಮ್ಮ ಸರ್ಕಾರ ಮಾಡಿದ ಕೆಲಸಗಳನ್ನೇ ಪ್ರಚಾರ ಮಾಡುತ್ತಿದೆ. ಜಾರ್ಖಂಡ ಮತ್ತು ಹರಿಯಾಣದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ರಾಜ್ಯ ಮತ್ತು ಸ್ಥಳೀಯ ವಿಷಯಗಳ ಬಗ್ಗೆ ಆದ್ಯತೆ ನೀಡಿಯೇ ಮತ ಹಾಕಿದ್ದಾರೆ. ಬದಲಿಗೆ ರಾಷ್ಟ್ರೀಯ ವಿಷಯಗಳತ್ತ ಅವರು ಹೆಚ್ಚಿನ ಗಮನ ಹರಿಸಲಿಲ್ಲ. ನನ್ನ ಪ್ರಕಾರ ದೆಹಲಿ ಮತದಾರರು ಕೂಡ ಇದೇ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ ಮತ್ತು ದೆಹಲಿ ಆಡಳಿತದ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸುತ್ತಾರೆಯೇ ಹೊರತು, ರಾಷ್ಟ್ರೀಯ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ರಾಜ್ಯದ ವಿಚಾರಗಳಿಗೆ ಆದ್ಯತೆ ನೀಡಿ ಜನರು ಮತ ಹಾಕಿದಾಗ ಎಎಪಿ ತನ್ನ ಪ್ರತಿಸ್ಫರ್ಧಿಗಿಂತ ಮುಂಚೂಣಿಯಲ್ಲೇ ನಿಲ್ಲುತ್ತದೆ. ಯಾಕೆಂದರೆ ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರ ಮಾಡಿದ ಕೆಲಸಗಳ ಬಗ್ಗೆ ಜನರಲ್ಲಿ ಸದಭಿಪ್ರಾಯವೇ ಇದೆ. ದೆಹಲಿ ಸರ್ಕಾರದ ವಿವಿಧ ಸ್ಕೀಮ್‌ಗಳ ಮೂಲಕ ದೆಹಲಿ ಜನರು ಸ್ವೀಕರಿಸಿದ ನೇರ ಲಾಭಗಳು ಈ ಬಾರಿಯ ಮತದಾನವನ್ನು ನಿರ್ಧರಿಸಲಿದೆ ಎಂದು ಒಂದು ಸಮೀಕ್ಷೆಯ ಡೇಟಾ ತಿಳಿಸುತ್ತದೆ. ಇತ್ತೀಚಿನ ವಿಧಾನಸಭೆ ಚುನಾವಣೆಯ ಫಲಿತಾಂಶಗಳ ಪ್ರಕಾರ ರಾಷ್ಟ್ರೀಯ ವಿಷಯಗಳಿಗಿಂತ ಹೆಚ್ಚಾಗಿ ರಾಜ್ಯದ ವಿಚಾರಗಳ ಬಗ್ಗೆಯೇ ಹೆಚ್ಚು ಜನರು ಗಮನ ಹರಿಸುತ್ತಾರೆ. ಸಿಎಸ್‌ಡಿಎಸ್‌ ಮಾಡಿದ ಸಮೀಕ್ಷೆಯ ಪ್ರಕಾರ ರಾಜಧಾನಿಯಲ್ಲಿ ಎಎಪಿ ಮಾಡಿದ ಕೆಲಸದ ಆಧಾರದಲ್ಲಿ ದೆಹಲಿ ಮತದಾರರು ಮತ ಹಾಕುತ್ತಾರೆ. ಬದಲಿಗೆ ಕೇಂದ್ರದಲ್ಲಿ ಮೋದಿ ಸರ್ಕಾರದ ಕೆಲಸಗಳನ್ನು ನೋಡಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕುವುದಿಲ್ಲ. ಪ್ರತಿ ಎರಡರಲ್ಲಿ ಒಂದಕ್ಕಿಂತ ಹೆಚ್ಚು ಅಥವಾ ಶೇ. 55 ರಷ್ಟು ಜನರು ದೆಹಲಿಯಲ್ಲಿ ಎಎಪಿ ಮಾಡಿದ ಕೆಲಸವನ್ನು ನೋಡಿಯೇ ಮತ ಹಾಕುತ್ತೇವೆ ಎಂದಿದ್ದಾರೆ. ಕೇವಲ ಶೇ. 15 ರಷ್ಟು ಜನರು ಕೇಂದ್ರದಲ್ಲಿ ಮೋದಿ ಮಾಡಿದ ಕೆಲಸ ನೋಡಿ ಮತ ಹಾಕುತ್ತೇವೆ ಎಂದಿದ್ದಾರೆ.

ಎಎಪಿ ಸರ್ಕಾರದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆದಾರರು ಸಂತೃಪ್ತಿ ವ್ಯಕ್ತಪಡಿಸಿರುವುದನ್ನು ಸಿಎಸ್‌ಡಿಎಸ್‌ ದೆಹಲಿ ಆಡಳಿತ ಸಮೀಕ್ಷೆಯು ಸೂಚಿಸಿದೆ. ಕೇಂದ್ರ ಸರ್ಕಾರದೊಂದಿಗೆ ಸಂತೃಪ್ತಿಯ ಮಟ್ಟವೂ ಹೆಚ್ಚಾಗುತ್ತಿದೆ. ಆದರೆ ಹರಿಯಾಣ ಮತ್ತು ಜಾರ್ಖಂಡದಲ್ಲಿ ಬಿಜೆಪಿಗೆ ಈ ಸಂತೃಪ್ತಿಯ ಮಟ್ಟವೇ ಮತವಾಗಿ ರೂಪಾಂತರಗೊಂಡಿಲ್ಲ. ಕೇಂದ್ರ ಸರ್ಕಾರದ ಕೆಲಸದ ಬಗ್ಗೆಯೂ ಜನರಿಗೆ ಅತ್ಯಂತ ಸಂತೃಪ್ತಿ ಇದ್ದರೂ, ಮತ ಹಾಕುವ ವಿಚಾರಕ್ಕೆ ಬಂದಾಗ ದೆಹಲಿಯಲ್ಲಿ ಎಎಪಿ ಸರ್ಕಾರವೇ ಜನರಿಗೆ ಮೆಚ್ಚುಗೆಯಾಗಿದೆ ಮತ್ತು ಅವರಿಗೆ ಎಎಪಿಯೇ ಆದ್ಯತೆಯದ್ದಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕಳೆದ ಆರು ತಿಂಗಳುಗಳ ಕೆಲಸದ ಬಗ್ಗೆ ತುಂಬಾ ಸಂತೃಪ್ತಿಯಿದೆ ಎಂದು ಹೇಳಿದ ಐದರಲ್ಲಿ ಎರಡಕ್ಕಿಂತ ಹೆಚ್ಚು ಪ್ರತಿಕ್ರಿಯೆದಾರರು ಎಎಪಿ ಪರ ಒಲವು ಹೊಂದಿರುವುದು ತಿಳಿದುಬಂದಿದೆ.

ಎಎಪಿಗೆ ಅನುಕೂಲವಾಗಿರುವ ಪ್ರಮುಖ ಸಂಗತಿಯೆಂದರೆ, ಎಎಪಿಯಲ್ಲಿ ಆಡಳಿತ ವಿರೋಧಿ ಅಲೆ ಕಂಡುಬಂದಿಲ್ಲ. ಜನರಿಗೆ ಸಾಮಾನ್ಯವಾಗಿ ಎಎಪಿ ಸಾಧನೆಯ ಬಗ್ಗೆ ಸಂತೃಪ್ತಿ ಇದೆ. ಎಎಪಿ ಸರ್ಕಾರದ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಆಡಳಿತ ವಿರೋಧಿ ಅಭಿಪ್ರಾಯಗಳಿಲ್ಲ. ಹರಿಯಾಣದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಅತ್ಯಂತ ಜನಪ್ರಿಯವಾಗಿದ್ದು, 2019 ರ ಲೋಕಸಭೆ ಚುನಾವಣೆಯಲ್ಲಿ ಶೇ. 58 ರಷ್ಟು ಮತವನ್ನು ಪಡೆದಿದ್ದರೂ, ಖಟ್ಟರ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆಯು ಬಿಜೆಪಿ ಸೋಲುವಂತಾಯಿತು. ಇದೇ ರೀತಿ ಜಾರ್ಖಂಡದಲ್ಲಿ, ಬಿಜೆಪಿಯ ಮತದಾರರ ಪಾಲು ಶೇ. 22ಕ್ಕೆ ಕುಸಿದಿದೆ. ಬಿಜೆಪಿ ಮತ್ತು ಎಎಜೆಎಸ್‌ಯು ಒಟ್ಟಾರೆ ಮತದ ಪಾಲು ಶೇ. 55.3 ಆಗಿತ್ತು. ಆದಿವಾಸಿಗಳಲ್ಲಿ ರಘುವರ್ ದಾಸ್‌ ಬಗ್ಗೆ ಜನರಲ್ಲಿ ಅಸಮಾಧಾನ ಇರುವುದೇ ಇದಕ್ಕೆ ಕಾರಣವಾಗಿತ್ತು. ಇದೇ ರೀತಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲೂ ರಾಜ್ಯದೊಳಗಿನ ಆಡಳಿತ ವಿರೋಧಿ ಅಲೆಯು ಮೋದಿ ಜನಪ್ರಿಯತೆಯನ್ನೂ ಮೀರಿ ಮತದಾನದ ವೇಳೆ ಪ್ರಭಾವ ಬೀರಿತ್ತು. ಈ ನಿಟ್ಟಿನಲ್ಲಿ ಎಎಪಿ ಸರ್ಕಾರ ಯಾವುದೇ ಈ ರೀತಿಯ ಯಾವುದೇ ಸಮಸ್ಯೆಯನ್ನು ಎದುರಿಸಿದಂತೆ ಕಂಡುಬರುವುದಿಲ್ಲ.

ಪಕ್ಷಕ್ಕಿಂತ ವ್ಯಕ್ತಿಯ ಜನಪ್ರಿಯತೆಯೇ ಚುನಾವಣೆಗಳಲ್ಲಿ ಹೆಚ್ಚು ಪ್ರಮುಖವಾಗುವ ಈ ಸನ್ನಿವೇಶದಲ್ಲಿ ದೆಹಲಿಯಲ್ಲಿ ಬಿಜೆಪಿಗಿಂತ ಎಎಪಿಯೇ ಮೇಲಿನ ಸ್ಥಾನನದಲ್ಲಿ ನಿಲ್ಲುತ್ತದೆ. ಭಾರಿ ಜನಪ್ರಿಯತೆ ಹೊಂದಿರುವ ಅರವಿಂದ ಕೇಜ್ರಿವಾಲ್‌ ಎದುರು ಅಷ್ಟೇ ಜನಪ್ರಿಯತೆ ಹೊಂದುವ ಅಥವಾ ಅವರ ಜನಪ್ರಿಯತೆಗೆ ಸಮೀಪದಲ್ಲಿ ನಿಲ್ಲುವ ಯಾವ ಪಕ್ಷದ ಅಭ್ಯರ್ಥಿಯೂ ಇಲ್ಲ. ದೆಹಲಿ ಬಿಜೆಪಿಯಲ್ಲಿ ಹಲವು ನಾಯಕರಿದ್ದಾರೆ. ಆದರೆ ಅವರು ಯಾರೂ ಅರವಿಂದ ಕೇಜ್ರಿವಾಲ್‌ ಜನಪ್ರಿಯತೆಯ ಸಮೀಪಕ್ಕೂ ಬರುವಂಥವರಲ್ಲ. ಇಂಥ ಸನ್ನಿವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರು ಮತ್ತು ಜನಪ್ರಿಯತೆಯನ್ನು ಬಳಸಿಕೊಂಡು ಚುನಾವಣೆ ಎದುರಿಸುತ್ತದೆ. ನರೇಂದ್ರ ಮೋದಿ ಈಗಲೂ ದೆಹಲಿ ಜನರಲ್ಲಿ ಜನಪ್ರಿಯರೇ. ಆದರೆ ದೆಹಲಿ ಆಡಳಿತ ಸಮೀಕ್ಷೆಯಲ್ಲಿ ಕಂಡುಬಂದಿದ್ದೇನೆಂದರೆ, ಮೋದಿಯ ಜನಪ್ರಿಯತೆಗಿಂತ ಕೇಜ್ರಿವಾಲ್‌ ಜನಪ್ರಿಯತೆಯು ಶೇ. 10 ರಷ್ಟು ಹೆಚ್ಚಿದೆ. ಹೀಗಾಗಿ, ಕೇಜ್ರಿವಾಲ್‌ ಹಾಗೂ ಮೋದಿ ವಿರುದ್ಧದ ಕದನ ಇದಾದರೂ, ಕೇಜ್ರಿವಾಲ್‌ ದೆಹಲಿಯಲ್ಲಿ ಹೆಚ್ಚು ಜನಪ್ರಿಯರಾಗಿ ಕಾಣುತ್ತಾರೆ.

ಫೆಬ್ರವರಿ 8 ರಂದು ದೆಹಲಿ ಜನರು ಮತ ಹಾಕಲು ಇನ್ನು ಸರಿಸುಮಾರು ಒಂದು ವಾರ ಬಾಕಿ ಇದೆ. ಅಷ್ಟರೊಳಗೆ ಪರಿಸ್ಥಿತಿ ಬದಲಾವಣೆಯೂ ಆಗಬಹುದು. ಆದರೆ ಸ್ಥಳೀಯ ವಿಚಾರಗಳ ಕುರಿತೇ ಎಎಪಿ ಆದ್ಯತೆ ನೀಡಿದರೆ, ದೆಹಲಿಯಲ್ಲಿ ಇನ್ನೊಂದು ಅವಧಿಗೆ ಸರ್ಕಾರವನ್ನು ಸುಲಭವಾಗಿ ಎಎಪಿ ರಚಿಸಬಹುದು.

ದೆಹಲಿ ವಿಧಾನಸಭೆ ಚುನಾವಣೆಯ ಮಹತ್ವದ ಪ್ರಕ್ರಿಯೆ ಮತದಾನಕ್ಕೆ ಇನ್ನು ಕೆಲವೇ ದಿನಗಳಿವೆ. ಪ್ರಸ್ತುತ ಮೂಡ್‌ ನೋಡಿದರೆ ಆಡಳಿತ ಪಕ್ಷ ಆಮ್ ಆದ್ಮಿ ಪಾರ್ಟಿ ಸರಾಗವಾಗಿ ಈ ಬಾರಿಯ ಚುನಾವಣೆಯಲ್ಲಿ ಗೆಲುವಿನ ನಗೆ ಬೀರುವ ಸಂಭವ ಕಾಣಿಸುತ್ತಿದೆ. ಎಎಪಿಗೆ ಬಿಜೆಪಿ ಸ್ಫರ್ಧೆ ಒಡ್ಡುವಂತೆ ಕಾಣುತ್ತಿದ್ದರೂ, ಅದು ಗೆಲುವಿನಿಂದ ಸಾಕಷ್ಟು ದೂರದಲ್ಲೇ ಇರುವಂತಿದೆ. ಹದಿನೈದು ವರ್ಷಗಳವರೆಗೆ (1998-2013) ದೆಹಲಿಯನ್ನು ಆಳಿದ ಕಾಂಗ್ರೆಸ್ ಪಕ್ಷ 2015 ರ ವಿಧಾನಸಭೆ ಚುನಾವಣೆಯಲ್ಲಿ ಕಂಡ ಹೀನಾಯ ಸೋಲಿನಿಂದ ಎಚ್ಚೆತ್ತುಕೊಂಡಂತಿಲ್ಲ. 2015ರ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಒಂದು ಸ್ಥಾನದಲ್ಲೂ ಗೆಲ್ಲಲು ಯಶಸ್ವಿಯಾಗಲಿಲ್ಲ. ಗ್ರೌಂಡ್ ರಿಪೋರ್ಟ್‌ ಮತ್ತು ಕೆಲವು ಇತ್ತೀಚಿನ ಅಭಿಪ್ರಾಯಗಳ ಪ್ರಕಾರ ಜನರ ದನಿ ಎಎಪಿ ಪರವಾಗಿಯೇ ಇದೆ. 2019 ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನಗೈದ ಎಎಪಿ, ಎಚ್ಚೆತ್ತುಕೊಂಡಂತಿದೆ.

2019 ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದ ಬಿಜೆಪಿ ಎಲ್ಲ ಏಳು ಸೀಟುಗಳಲ್ಲೂ ಗೆದ್ದಿತ್ತು. ಶೇ.57 ರಷ್ಟು ಮತಗಳನ್ನು ಗಳಿಸಿದ್ದ ಬಿಜೆಪಿ ಖಂಡಿತವಾಗಿಯೂ ಎಎಪಿಗೆ ತೀಕ್ಷ್ಣ ಪೈಪೋಟಿ ನೀಡಲಿದೆ. ಆದರೆ ಗೆಲುವಿನಿಂದ ಇದು ದೂರದಲ್ಲೇ ಇರಲಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಭಾರಿ ಸಂಖ್ಯೆಯಲ್ಲಿ ಬಿಜೆಪಿ ಪರವಾಗಿ ಮತ ನೀಡಿದ್ದರೂ, ಯುವಕರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಎಎಪಿಗೆ ಮತ ನೀಡಲು ನಿರ್ಧರಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರವನ್ನು ಆಯ್ಕೆ ಮಾಡುವಲ್ಲಿನ ಸ್ಪಷ್ಟ ವ್ಯತ್ಯಾಸವನ್ನು ಬಹುತೇಕ ಮತದಾರರು ತಿಳಿದುಕೊಂಡಿದ್ದಾರೆ.

ಎಎಪಿ ತನ್ನ ಪ್ರತಿಸ್ಫರ್ಧಿಗಿಂತ ಒಂದು ಹೆಜ್ಜೆ ಮುಂದಿರುವುದಕ್ಕೆ ಒಂದು ಪ್ರಮುಖ ಕಾರಣವೇನೆಂದರೆ, ಕೇಜ್ರಿವಾಲ್‌ ಸರ್ಕಾರವು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ವಿಶೇಷ ಕೆಲಸಗಳು ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ಜನಪ್ರಿಯತೆಯಾಗಿದೆ. ಎಎಪಿ ಇನ್ನಷ್ಟು ಸಶಕ್ತವಾಗಲು ಕಾರಣವೇನೆಂದರೆ, ಬಿಜೆಪಿಯಲ್ಲಾಗಲೀ ಅಥವಾ ಕಾಂಗ್ರೆಸ್‌ನಲ್ಲಾಗಲೀ ಯಾವ ಪಕ್ಷದಲ್ಲೂ ಅರವಿಂದ ಕೇಜ್ರಿವಾಲ್‌ಗೆ ಸಮೀಪಕ್ಕೂ ಬರುವಷ್ಟು ಜನಪ್ರಿಯತೆಯನ್ನು ಯಾವ ನಾಯಕರೂ ಪಡೆದಿಲ್ಲ.

2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಅಷ್ಟೇನೂ ಉತ್ತಮ ಸಾಧನೆ ಮಾಡದಿದ್ದರೂ, ಎಎಪಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ದೆಹಲಿ ಜನರಿಗೆ ಮೆಚ್ಚಿನ ಸರ್ಕಾರವಾಗಿಯೇ ಉಳಿದುಕೊಂಡಿದೆ. 2013 ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಫರ್ಧಿಸಿದಾಗ ಹೆಚ್ಚಿನ ಸೀಟುಗಳಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಆಗ ಅದು ಕೇವಲ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು ಮತ್ತು ಶೇ. 29.5 ರಷ್ಟು ಮತಗಲನ್ನು ಪಡೆದಿತ್ತು. ಆದರೆ ಒಂದು ವರ್ಷದ ನಂತರ 2015 ರಲ್ಲಿ ನಡೆದ ಚುನಾವಣೆಯಲ್ಲಿ 70 ವಿಧಾನಸಭೆ ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿತು ಮತ್ತು ಶೇ. 54.3 ರಷ್ಟು ಮತಗಳನ್ನು ಪಡೆಯಿತು.

ಬಿಜೆಪಿ ಬಹುತೇಕವಾಗಿ ರಾಷ್ಟ್ರೀಯ ವಿಚಾರಗಳನ್ನು ಮುಖ್ಯವಾಗಿಟ್ಟುಕೊಂಡು ಚುನಾವಣೆಯನ್ನು ಎದುರಿಸಲಿದೆ. ಪೌರತ್ವ ತಿದ್ದುಪಡಿ ಕಾಯ್ದೆ, 370ನೇ ವಿಧಿ ರದ್ದತಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ತ್ರಿವಳಿ ತಲಾಖ್‌ನಂತಹ ವಿಷಯಗಳನ್ನು ಅದು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳಲಿದೆ. ಆದರೆ ಇತ್ತೀಚಿನ ವಿಧಾನಸಭೆ ಚುನಾವಣೆಗಳಲ್ಲಿ ಜನರು ಹೇಗೆ ಮತ ಹಾಕಿದ್ದರೆ ಎಂಬುದನ್ನು ನೋಡಿದರೆ, ದೆಹಲಿಯ ಜನರು ವಿಧಾನಸಭೆ ಚುನಾವಣೆ ವೇಳೆ ನಗರದ ಮಟ್ಟದ ಸ್ಥಳೀಯ ವಿಷಯಗಳಿಗೆ ಪ್ರಾಮುಖ್ಯತೆ ನೀಡಿದ್ದಾರೆ ಮತ್ತು ಸ್ಥಳೀಯ ವಿಷಯಗಳನ್ನು ಗಮನದಲ್ಲಿಟ್ಟುಕೊಂಡೇ ಮತ ನೀಡಲಿದ್ದಾರೆ.

ಈ ಚುನಾವಣೆಯಲ್ಲಿ ಎಎಪಿ ಮಾಡುತ್ತಿರುವ ಅತ್ಯಂತ ಪ್ರಮುಖ ಕಾರ್ಯತಂತ್ರವೆಂದರೆ, ಕಳೆದ ಐದು ವರ್ಷದಲ್ಲಿ ತಮ್ಮ ಸರ್ಕಾರ ಮಾಡಿದ ಕೆಲಸಗಳನ್ನೇ ಪ್ರಚಾರ ಮಾಡುತ್ತಿದೆ. ಜಾರ್ಖಂಡ ಮತ್ತು ಹರಿಯಾಣದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ರಾಜ್ಯ ಮತ್ತು ಸ್ಥಳೀಯ ವಿಷಯಗಳ ಬಗ್ಗೆ ಆದ್ಯತೆ ನೀಡಿಯೇ ಮತ ಹಾಕಿದ್ದಾರೆ. ಬದಲಿಗೆ ರಾಷ್ಟ್ರೀಯ ವಿಷಯಗಳತ್ತ ಅವರು ಹೆಚ್ಚಿನ ಗಮನ ಹರಿಸಲಿಲ್ಲ. ನನ್ನ ಪ್ರಕಾರ ದೆಹಲಿ ಮತದಾರರು ಕೂಡ ಇದೇ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ ಮತ್ತು ದೆಹಲಿ ಆಡಳಿತದ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸುತ್ತಾರೆಯೇ ಹೊರತು, ರಾಷ್ಟ್ರೀಯ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ರಾಜ್ಯದ ವಿಚಾರಗಳಿಗೆ ಆದ್ಯತೆ ನೀಡಿ ಜನರು ಮತ ಹಾಕಿದಾಗ ಎಎಪಿ ತನ್ನ ಪ್ರತಿಸ್ಫರ್ಧಿಗಿಂತ ಮುಂಚೂಣಿಯಲ್ಲೇ ನಿಲ್ಲುತ್ತದೆ. ಯಾಕೆಂದರೆ ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರ ಮಾಡಿದ ಕೆಲಸಗಳ ಬಗ್ಗೆ ಜನರಲ್ಲಿ ಸದಭಿಪ್ರಾಯವೇ ಇದೆ. ದೆಹಲಿ ಸರ್ಕಾರದ ವಿವಿಧ ಸ್ಕೀಮ್‌ಗಳ ಮೂಲಕ ದೆಹಲಿ ಜನರು ಸ್ವೀಕರಿಸಿದ ನೇರ ಲಾಭಗಳು ಈ ಬಾರಿಯ ಮತದಾನವನ್ನು ನಿರ್ಧರಿಸಲಿದೆ ಎಂದು ಒಂದು ಸಮೀಕ್ಷೆಯ ಡೇಟಾ ತಿಳಿಸುತ್ತದೆ. ಇತ್ತೀಚಿನ ವಿಧಾನಸಭೆ ಚುನಾವಣೆಯ ಫಲಿತಾಂಶಗಳ ಪ್ರಕಾರ ರಾಷ್ಟ್ರೀಯ ವಿಷಯಗಳಿಗಿಂತ ಹೆಚ್ಚಾಗಿ ರಾಜ್ಯದ ವಿಚಾರಗಳ ಬಗ್ಗೆಯೇ ಹೆಚ್ಚು ಜನರು ಗಮನ ಹರಿಸುತ್ತಾರೆ. ಸಿಎಸ್‌ಡಿಎಸ್‌ ಮಾಡಿದ ಸಮೀಕ್ಷೆಯ ಪ್ರಕಾರ ರಾಜಧಾನಿಯಲ್ಲಿ ಎಎಪಿ ಮಾಡಿದ ಕೆಲಸದ ಆಧಾರದಲ್ಲಿ ದೆಹಲಿ ಮತದಾರರು ಮತ ಹಾಕುತ್ತಾರೆ. ಬದಲಿಗೆ ಕೇಂದ್ರದಲ್ಲಿ ಮೋದಿ ಸರ್ಕಾರದ ಕೆಲಸಗಳನ್ನು ನೋಡಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕುವುದಿಲ್ಲ. ಪ್ರತಿ ಎರಡರಲ್ಲಿ ಒಂದಕ್ಕಿಂತ ಹೆಚ್ಚು ಅಥವಾ ಶೇ. 55 ರಷ್ಟು ಜನರು ದೆಹಲಿಯಲ್ಲಿ ಎಎಪಿ ಮಾಡಿದ ಕೆಲಸವನ್ನು ನೋಡಿಯೇ ಮತ ಹಾಕುತ್ತೇವೆ ಎಂದಿದ್ದಾರೆ. ಕೇವಲ ಶೇ. 15 ರಷ್ಟು ಜನರು ಕೇಂದ್ರದಲ್ಲಿ ಮೋದಿ ಮಾಡಿದ ಕೆಲಸ ನೋಡಿ ಮತ ಹಾಕುತ್ತೇವೆ ಎಂದಿದ್ದಾರೆ.

ಎಎಪಿ ಸರ್ಕಾರದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆದಾರರು ಸಂತೃಪ್ತಿ ವ್ಯಕ್ತಪಡಿಸಿರುವುದನ್ನು ಸಿಎಸ್‌ಡಿಎಸ್‌ ದೆಹಲಿ ಆಡಳಿತ ಸಮೀಕ್ಷೆಯು ಸೂಚಿಸಿದೆ. ಕೇಂದ್ರ ಸರ್ಕಾರದೊಂದಿಗೆ ಸಂತೃಪ್ತಿಯ ಮಟ್ಟವೂ ಹೆಚ್ಚಾಗುತ್ತಿದೆ. ಆದರೆ ಹರಿಯಾಣ ಮತ್ತು ಜಾರ್ಖಂಡದಲ್ಲಿ ಬಿಜೆಪಿಗೆ ಈ ಸಂತೃಪ್ತಿಯ ಮಟ್ಟವೇ ಮತವಾಗಿ ರೂಪಾಂತರಗೊಂಡಿಲ್ಲ. ಕೇಂದ್ರ ಸರ್ಕಾರದ ಕೆಲಸದ ಬಗ್ಗೆಯೂ ಜನರಿಗೆ ಅತ್ಯಂತ ಸಂತೃಪ್ತಿ ಇದ್ದರೂ, ಮತ ಹಾಕುವ ವಿಚಾರಕ್ಕೆ ಬಂದಾಗ ದೆಹಲಿಯಲ್ಲಿ ಎಎಪಿ ಸರ್ಕಾರವೇ ಜನರಿಗೆ ಮೆಚ್ಚುಗೆಯಾಗಿದೆ ಮತ್ತು ಅವರಿಗೆ ಎಎಪಿಯೇ ಆದ್ಯತೆಯದ್ದಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕಳೆದ ಆರು ತಿಂಗಳುಗಳ ಕೆಲಸದ ಬಗ್ಗೆ ತುಂಬಾ ಸಂತೃಪ್ತಿಯಿದೆ ಎಂದು ಹೇಳಿದ ಐದರಲ್ಲಿ ಎರಡಕ್ಕಿಂತ ಹೆಚ್ಚು ಪ್ರತಿಕ್ರಿಯೆದಾರರು ಎಎಪಿ ಪರ ಒಲವು ಹೊಂದಿರುವುದು ತಿಳಿದುಬಂದಿದೆ.

ಎಎಪಿಗೆ ಅನುಕೂಲವಾಗಿರುವ ಪ್ರಮುಖ ಸಂಗತಿಯೆಂದರೆ, ಎಎಪಿಯಲ್ಲಿ ಆಡಳಿತ ವಿರೋಧಿ ಅಲೆ ಕಂಡುಬಂದಿಲ್ಲ. ಜನರಿಗೆ ಸಾಮಾನ್ಯವಾಗಿ ಎಎಪಿ ಸಾಧನೆಯ ಬಗ್ಗೆ ಸಂತೃಪ್ತಿ ಇದೆ. ಎಎಪಿ ಸರ್ಕಾರದ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಆಡಳಿತ ವಿರೋಧಿ ಅಭಿಪ್ರಾಯಗಳಿಲ್ಲ. ಹರಿಯಾಣದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಅತ್ಯಂತ ಜನಪ್ರಿಯವಾಗಿದ್ದು, 2019 ರ ಲೋಕಸಭೆ ಚುನಾವಣೆಯಲ್ಲಿ ಶೇ. 58 ರಷ್ಟು ಮತವನ್ನು ಪಡೆದಿದ್ದರೂ, ಖಟ್ಟರ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆಯು ಬಿಜೆಪಿ ಸೋಲುವಂತಾಯಿತು. ಇದೇ ರೀತಿ ಜಾರ್ಖಂಡದಲ್ಲಿ, ಬಿಜೆಪಿಯ ಮತದಾರರ ಪಾಲು ಶೇ. 22ಕ್ಕೆ ಕುಸಿದಿದೆ. ಬಿಜೆಪಿ ಮತ್ತು ಎಎಜೆಎಸ್‌ಯು ಒಟ್ಟಾರೆ ಮತದ ಪಾಲು ಶೇ. 55.3 ಆಗಿತ್ತು. ಆದಿವಾಸಿಗಳಲ್ಲಿ ರಘುವರ್ ದಾಸ್‌ ಬಗ್ಗೆ ಜನರಲ್ಲಿ ಅಸಮಾಧಾನ ಇರುವುದೇ ಇದಕ್ಕೆ ಕಾರಣವಾಗಿತ್ತು. ಇದೇ ರೀತಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲೂ ರಾಜ್ಯದೊಳಗಿನ ಆಡಳಿತ ವಿರೋಧಿ ಅಲೆಯು ಮೋದಿ ಜನಪ್ರಿಯತೆಯನ್ನೂ ಮೀರಿ ಮತದಾನದ ವೇಳೆ ಪ್ರಭಾವ ಬೀರಿತ್ತು. ಈ ನಿಟ್ಟಿನಲ್ಲಿ ಎಎಪಿ ಸರ್ಕಾರ ಯಾವುದೇ ಈ ರೀತಿಯ ಯಾವುದೇ ಸಮಸ್ಯೆಯನ್ನು ಎದುರಿಸಿದಂತೆ ಕಂಡುಬರುವುದಿಲ್ಲ.

ಪಕ್ಷಕ್ಕಿಂತ ವ್ಯಕ್ತಿಯ ಜನಪ್ರಿಯತೆಯೇ ಚುನಾವಣೆಗಳಲ್ಲಿ ಹೆಚ್ಚು ಪ್ರಮುಖವಾಗುವ ಈ ಸನ್ನಿವೇಶದಲ್ಲಿ ದೆಹಲಿಯಲ್ಲಿ ಬಿಜೆಪಿಗಿಂತ ಎಎಪಿಯೇ ಮೇಲಿನ ಸ್ಥಾನನದಲ್ಲಿ ನಿಲ್ಲುತ್ತದೆ. ಭಾರಿ ಜನಪ್ರಿಯತೆ ಹೊಂದಿರುವ ಅರವಿಂದ ಕೇಜ್ರಿವಾಲ್‌ ಎದುರು ಅಷ್ಟೇ ಜನಪ್ರಿಯತೆ ಹೊಂದುವ ಅಥವಾ ಅವರ ಜನಪ್ರಿಯತೆಗೆ ಸಮೀಪದಲ್ಲಿ ನಿಲ್ಲುವ ಯಾವ ಪಕ್ಷದ ಅಭ್ಯರ್ಥಿಯೂ ಇಲ್ಲ. ದೆಹಲಿ ಬಿಜೆಪಿಯಲ್ಲಿ ಹಲವು ನಾಯಕರಿದ್ದಾರೆ. ಆದರೆ ಅವರು ಯಾರೂ ಅರವಿಂದ ಕೇಜ್ರಿವಾಲ್‌ ಜನಪ್ರಿಯತೆಯ ಸಮೀಪಕ್ಕೂ ಬರುವಂಥವರಲ್ಲ. ಇಂಥ ಸನ್ನಿವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರು ಮತ್ತು ಜನಪ್ರಿಯತೆಯನ್ನು ಬಳಸಿಕೊಂಡು ಚುನಾವಣೆ ಎದುರಿಸುತ್ತದೆ. ನರೇಂದ್ರ ಮೋದಿ ಈಗಲೂ ದೆಹಲಿ ಜನರಲ್ಲಿ ಜನಪ್ರಿಯರೇ. ಆದರೆ ದೆಹಲಿ ಆಡಳಿತ ಸಮೀಕ್ಷೆಯಲ್ಲಿ ಕಂಡುಬಂದಿದ್ದೇನೆಂದರೆ, ಮೋದಿಯ ಜನಪ್ರಿಯತೆಗಿಂತ ಕೇಜ್ರಿವಾಲ್‌ ಜನಪ್ರಿಯತೆಯು ಶೇ. 10 ರಷ್ಟು ಹೆಚ್ಚಿದೆ. ಹೀಗಾಗಿ, ಕೇಜ್ರಿವಾಲ್‌ ಹಾಗೂ ಮೋದಿ ವಿರುದ್ಧದ ಕದನ ಇದಾದರೂ, ಕೇಜ್ರಿವಾಲ್‌ ದೆಹಲಿಯಲ್ಲಿ ಹೆಚ್ಚು ಜನಪ್ರಿಯರಾಗಿ ಕಾಣುತ್ತಾರೆ.

ಫೆಬ್ರವರಿ 8 ರಂದು ದೆಹಲಿ ಜನರು ಮತ ಹಾಕಲು ಇನ್ನು ಸರಿಸುಮಾರು ಒಂದು ವಾರ ಬಾಕಿ ಇದೆ. ಅಷ್ಟರೊಳಗೆ ಪರಿಸ್ಥಿತಿ ಬದಲಾವಣೆಯೂ ಆಗಬಹುದು. ಆದರೆ ಸ್ಥಳೀಯ ವಿಚಾರಗಳ ಕುರಿತೇ ಎಎಪಿ ಆದ್ಯತೆ ನೀಡಿದರೆ, ದೆಹಲಿಯಲ್ಲಿ ಇನ್ನೊಂದು ಅವಧಿಗೆ ಸರ್ಕಾರವನ್ನು ಸುಲಭವಾಗಿ ಎಎಪಿ ರಚಿಸಬಹುದು.

ಸಂಜಯ್‌ ಕುಮಾರ್‌

ಪ್ರೊಫೆಸರ್ ಸಾಮಾಜಿಕ ಅಭಿವೃದ್ಧಿ ಅಧ್ಯಯನ ಕೇಂದ್ರ

ABOUT THE AUTHOR

...view details