ಕರ್ನಾಟಕ

karnataka

ETV Bharat / bharat

ಮೂರು ದಿನಗಳ ಹಿಂದೆ ಮೃತ ವ್ಯಕ್ತಿಯ ಕೋವಿಡ್ ಪರೀಕ್ಷೆ ಪಾಸಿಟಿವ್

ಇಂದೋರ್​ನಲ್ಲಿ ಮೂರು ದಿನಗಳ ಹಿಂದೆ ಮೃತಪಟ್ಟ 65 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿತ್ತು ಎಂದು ಪರೀಕ್ಷೆಗಳಿಂದ ತಿಳಿದು ಬಂದಿದೆ. ಮೃತ ವ್ಯಕ್ತಿಯು ಮೊದಲೇ ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಡಯಾಬಿಟೀಸ್ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ಕಲೆಕ್ಟರ್ ಗೋಪಾಲಚಂದ್ರ ಹೇಳಿದ್ದಾರೆ.

Dead man's sample found coronavirus positive
ಮೃತ ವ್ಯಕ್ತಿಯ ಕೋವಿಡ್ ಪರೀಕ್ಷೆ ಪಾಸಿಟಿವ್

By

Published : Apr 1, 2020, 7:23 PM IST

ಇಂದೋರ್​:ಮೂರು ದಿನಗಳ ಹಿಂದೆ ಮೃತಪಟ್ಟ 65 ವರ್ಷ ವ್ಯಕ್ತಿಯ ದೇಹದ ಸ್ಯಾಂಪಲ್​ ಪರೀಕ್ಷೆಗಳಲ್ಲಿ ಆತನಿಗೆ ಕೋವಿಡ್​-19 ಸೋಂಕು ತಗುಲಿದ್ದು ದೃಢಪಟ್ಟಿದೆ. ಇದರೊಂದಿಗೆ ಮಧ್ಯ ಪ್ರದೇಶದಲ್ಲಿ ಕೋವಿಡ್​-19 ನಿಂದ ಮೃತಪಟ್ಟವರ ಸಂಖ್ಯೆ 6 ಕ್ಕೇರಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ವ್ಯಕ್ತಿಯು ಖಾರ್ಗೋನ್​ ಜಿಲ್ಲೆಯ ಧಾರಗಾಂವ ಗ್ರಾಮದ ನಿವಾಸಿಯಾಗಿದ್ದ.

'ಸರ್ಕಾರಿ ಎಂಜಿಎಂ ಮೆಡಿಕಲ್​ ಕಾಲೇಜಿನ ಲ್ಯಾಬ್ ವರದಿಯ ಪ್ರಕಾರ ಮೃತ ವ್ಯಕ್ತಿ ಕೊರೊನಾ ವೈರಸ್​ ಸೋಂಕಿತನಾಗಿದ್ದ. ಚಿಕಿತ್ಸೆ ನಡೆಯುತ್ತಿರುವಾಗಲೇ ಆತ ಇಂದೋರ್​ನ ಎಂವೈ ಆಸ್ಪತ್ರೆಯಲ್ಲಿ ರವಿವಾರ ಮೃತಪಟ್ಟಿದ್ದಾನೆ,' ಎಂದು ಖಾರ್ಗೋನ್ ಕಲೆಕ್ಟರ್ ಗೋಪಾಲಚಂದ್ರ ದಾಡ್ ತಿಳಿಸಿದ್ದಾರೆ.

'ಶ್ವಾಸದ ಸಮಸ್ಯೆಯ ಚಿಕಿತ್ಸೆಗಾಗಿ ವ್ಯಕ್ತಿಯು ಖಾರ್ಗೋನ್​ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. ಆದರೆ ಆತನ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಇಂದೋರ್​ನ ಸರ್ಕಾರಿ ಎಂವೈ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ವ್ಯಕ್ತಿಯು ಮೊದಲೇ ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಡಯಾಬಿಟೀಸ್ ಸಮಸ್ಯೆಯಿಂದ ಬಳಲುತ್ತಿದ್ದ' ಎಂದು ಕಲೆಕ್ಟರ್ ಗೋಪಾಲಚಂದ್ರ ಹೇಳಿದ್ದಾರೆ.

ABOUT THE AUTHOR

...view details