ಶ್ರೀನಗರ: ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಯ ತಲಾ 140 ಸ್ಥಾನಗಳಂತೆ ಒಟ್ಟು 280 ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶದ ಟ್ರೆಂಡ್ ಹೀಗಿದೆ.
ಜಮ್ಮು ಕಾಶ್ಮೀರ ಡಿಡಿಸಿ ಚುನಾವಣೆ ಫಲಿತಾಂಶ: ಗುಪ್ಕರ್ ಮೈತ್ರಿಗೆ ಮುನ್ನಡೆ - ಕಣಿವೆ ರಾಜ್ಯದಲ್ಲಿ ಕಮಲದ ಕಲರವ
ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯು ಜಮ್ಮು ಕಾಶ್ಮೀರದಲ್ಲಿ 370ನೇ ಸಾಂವಿಧಾನಿಕ ವಿಧಿ ಹಿಂಪಡೆದ ನಂತರ ನಡೆದ ಮೊದಲ ಮಹತ್ವದ ಚುನಾವಣೆಯಾಗಿದೆ.
ಜಮ್ಮು ಕಾಶ್ಮೀರ ಡಿಡಿಸಿ ಚುನಾವಣೆ
ಜಮ್ಮು ವಿಭಾಗದ 140 ಕ್ಷೇತ್ರಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಮೆಹಬೂಬಾ ಮುಫ್ತಿಯವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಸೇರಿದಂತೆ ಪ್ರಾದೇಶಿಕ ಪಕ್ಷಗಳ ಗುಂಪು ಗುಪ್ಕರ್ ಮೈತ್ರಿ 81 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಇನ್ನು 47 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 21 ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದು, 3 ರಲ್ಲಿ ಸ್ವತಂತ್ರರು ಮುಂದಿದ್ದಾರೆ.
Last Updated : Dec 22, 2020, 2:16 PM IST