ರಾಮೇಶ್ವರಂ (ತಮಿಳುನಾಡು):ಬುರೆವಿ ಚಂಡಮಾರುತವು ಕಳೆದ 30 ಗಂಟೆಗಳಿಂದ ಮನ್ನಾರ್ ಕೊಲ್ಲಿಯಲ್ಲಿಯೇ ಸುಳಿದಾಡುತ್ತಿದೆ. ಮುಂದಿನ 12 ಗಂಟೆಗಳಲ್ಲಿ ಸೈಕ್ಲೋನ್ ಅಬ್ಬರ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಆದರೂ, ತಮಿಳುನಾಡು ಮತ್ತು ಕೇರಳದ ಹಲವು ಪ್ರದೇಶಗಳಲ್ಲಿ ಐಎಂಡಿ ಅಲರ್ಟ್ ಘೋಷಿಸಿದೆ.
ಬುರೆವಿ ಚಂಡಮಾರುತದ ಅಬ್ಬರದಿಂದ ರಾಮೇಶ್ವರಂ ಮತ್ತು ಪುದುಚೆರಿಯ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ಪ್ರವಾಹ ಉಂಟಾಗಿದೆ. ಹಾಗಾಗಿ, ಅಲ್ಲಿನ ಜನರು ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಸದ್ಯಕ್ಕೆ ಮನ್ನಾರ್ ಕೊಲ್ಲಿ, ಬಂಗಾಳಕೊಲ್ಲಿ, ತಮಿಳುನಾಡು ದಕ್ಷಿಣ ಕರಾವಳಿ, ಉತ್ತರ ಶ್ರೀಲಂಕಾ, ಕೇರಳದ ದಕ್ಷಿಣ ಕರಾವಳಿ, ಲಕ್ಷದ್ವೀಪಗಳಿಗೆ ಯಾರೂ ಮೀನುಗಾರಿಕೆಗೆ ತೆರಳಬಾರದು ಎಂದು ಐಎಂಡಿ ಸೂಚಿಸಿದೆ.