ಕರ್ನಾಟಕ

karnataka

ETV Bharat / bharat

ನಕ್ಸಲರೊಂದಿಗೆ ಗುಂಡಿನ ಚಕಮಕಿ: ಓರ್ವ ಸಿಆರ್​ಪಿಎಫ್​ ಯೋಧ ಹುತಾತ್ಮ - ಬಿಲಾಸ್​ಪುರ

ನಕ್ಸಲರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಸಿಆರ್​ಪಿಎಫ್​ ಯೋಧ ಹುತಾತ್ಮನಾದ ಘಟನೆ ಛತ್ತೀಸ್​ಘಡದಲ್ಲಿ ನಡೆದಿದೆ.

CRPF jawan
ಸಿಆರ್​ಪಿಎಫ್​ ಯೋಧ

By

Published : May 11, 2020, 10:32 PM IST

ನವದೆಹಲಿ:ನಕ್ಸಲರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಸಿಆರ್​ಪಿಎಫ್​ ಯೋಧ ಹುತಾತ್ಮನಾಗಿದ್ದಾನೆ ಎಂದು ಸಿಆರ್​ಪಿಎಫ್​ ಅಧಿಕಾರಿಗಳು ತಿಳಿಸಿದ್ದಾರೆ.

ಛತ್ತೀಸ್​ಘಡದ ಬಿಲಾಸ್​ಪುರದ ಉರಿಪಾಲ್ ಅರಣ್ಯ ಪ್ರದೇಶದಲ್ಲಿ ಈ ಎನ್​ಕೌಂಟರ್ ನಡೆದಿದ್ದು, ಕೇಂದ್ರ ಮೀಸಲು ಪೊಲೀಸ್​ ಪಡೆ ಹಾಗೂ ಜಿಲ್ಲಾ ಮೀಸಲು ಪಡೆ ಸಿಬ್ಬಂದಿ ನಕ್ಸಲರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಿದ್ದರು.

ಸಿಆರ್​ಪಿಎಫ್​ 170ನೇ ಬೆಟಾಲಿಯನ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೇದೆ ಮನ್ನಾ ಕುಮಾರ್ (32) ಈ ವೇಳೆ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಮೃತ ಪೇದೆ ಜಾರ್ಖಂಡ್​​ನ ಸಾಹಿಬ್​ಗಂಜ್​​ ಜಿಲ್ಲೆಗೆ ಸೇರಿದವನೆಂದು ತಿಳಿದು ಬಂದಿದೆ.

ABOUT THE AUTHOR

...view details