ಕರ್ನಾಟಕ

karnataka

ETV Bharat / bharat

ಹೆಂಡತಿ - ಮಕ್ಕಳನ್ನು ಕೊಲೆ ಮಾಡಿ ತಾನೂ ಶೂಟ್​​​​ ಮಾಡಿಕೊಂಡ ಯೋಧ - CRPF jawan killed himself by killing his wife, daughter and son

ಉತ್ತರ ಪ್ರದೇಶದ ಪ್ರಯಾಗ್​ರಾಜ್​ ಜಿಲ್ಲೆಯ ಥರವಾಯ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸಿಆರ್​ಪಿಎಫ್​ ಯೋಧನೋರ್ವ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

CRPF jawan killed himself
ಹೆಂಡತಿ-ಮಕ್ಕಳನ್ನು ಕೊಲೆಗೈದು ತಾನೂ ಆತ್ಮಹತ್ಯೆಗೆ ಶರಣಾದ ಯೋಧ

By

Published : May 16, 2020, 4:35 PM IST

ಉತ್ತರ ಪ್ರದೇಶ: ಸಿಆರ್​ಪಿಎಫ್​ ಯೋಧನೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪ್ರಯಾಗ್​ರಾಜ್​ ಜಿಲ್ಲೆಯ ಥರವಾಯ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಯೋಧ ವಿನೋದ್​ ಕುಮಾರ್​ ಯಾದವ್​ (40), ಪತ್ನಿ ವಿಮಲಾ ಯಾದವ್​ (36), ಮಗಳು ಸಿಮ್ರನ್​ (11), ಮಗ ಸಂದೀಪ್​ ಯಾದವ್​ (15) ಮೃತರು.

ಹೆಂಡತಿ-ಮಕ್ಕಳನ್ನು ಕೊಲೆಗೈದು ತಾನೂ ಆತ್ಮಹತ್ಯೆಗೆ ಶರಣಾದ ಯೋಧ

ವಿನೋದ್​ ಅವರು ಸಿಒ ಅವರ ಕಾಲು ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ ಮನೆ ಬಾಗಿಲು ತಟ್ಟಿದ್ದಾರೆ. ಎಷ್ಟು ಕರೆದರೂ ಮನೆ ಬಾಗಿಲು ತೆರೆಯದ ಕಾರಣ ಅಕ್ಕ-ಪಕ್ಕದ ಮನೆಯವರು ಸೇರಿ ಮನೆ ಬೀಗ ಒಡೆದು ನೋಡಿದ್ದಾರೆ. ಈ ವೇಳೆ, ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗೆ ನಾಲ್ಕು ಮೃತದೇಹವನ್ನು ರವಾನಿಸಲಾಗಿದ್ದು, ಸ್ಥಳದಲ್ಲಿ ವಿಧಿ ವಿಜ್ಞಾನ ಸಿಬ್ಬಂದಿಗಳೂ ಪರಿಶೀಲನೆ ನಡೆಸಿದ್ದಾರೆ.

ಆತ್ಮಹತ್ಯೆಗೆ ಶರಣಾದ ಯೋಧ

ಘಟನೆ ಸಂಬಂಧ ಮಾತನಾಡಿದ ಎಸ್​ಪಿ ಸತ್ಯಜಿತ್​ ಅನಿರುದ್ಧ್​ ಪಂಕಜ್​, ವಿನೋದ್​ ಕುಮಾರ್​ ಯಾದವ್​ ಅವರು ತಮ್ಮ 224 ಸೆಕ್ಯುರಿಟಿ ಬೆಟಾಲಿಯನ್​ ಮೂಲಕ ಶೂಟ್​ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಪತ್ನಿ ಮತ್ತು ಮಕ್ಕಳನ್ನು ಕೊಲೆ ಮಾಡಿದ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ಘಟನೆಗೆ ಇನ್ನೂ ಕಾರಣ ತಿಳಿದುಬಂದಿಲ್ಲ. ತನಿಖೆ ಮುಂದುವರಿಸಿದ್ದೇವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details