ಸಿಲಿಗುರಿ(ಪಶ್ಚಿಮ ಬಂಗಾಳ): ಹೆಣವನ್ನು ಸಮಾಧಿ ಮಾಡುವುದಕ್ಕೆ ತರುವ ಮೊದಲು 1,150 ರೂ. ವೆಚ್ಚವನ್ನು ಪಾವತಿಸಿ ಎಂದು ಇಲ್ಲಿನ ದಬಗ್ರಾಮ್-ಫುಲ್ಬರಿ ಸ್ಮಶಾನ ಅಧಿಕಾರಿಗಳು ನೋಟಿಸ್ ಹೊರಡಿಸಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಮಶಾನಕ್ಕೆ ಶವ ತರುವ ಮುನ್ನ 1,150 ರೂ. ಪಾವತಿಸಿ: ಅಧಿಕಾರಿಗಳ ನೋಟಿಸ್ಗೆ ಗ್ರಾಮಸ್ಥರ ಆಕ್ರೋಶ!
ಶವದ ಅಂತ್ಯಸಂಸ್ಕಾರಕ್ಕೂ ಮೊದಲು ಶವಸಂಸ್ಕಾರ ವೆಚ್ಚವಾಗಿ 1,150 ರೂ. ಪಾವತಿಸುವಂತೆ ಪಶ್ಚಿಮ ಬಂಗಾಳದ ದಬಗ್ರಾಮ್ - ಫುಲ್ಬರಿ ಸ್ಮಶಾನ ಅಧಿಕಾರಿಗಳು ನೋಟಿಸ್ ಹೊರಡಿಸಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿದೆ. ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ನಿತ್ಯ ಹೆಚ್ಚುತ್ತಿದೆ. ಮೃತದೇಹಗಳನ್ನು ಡಾರ್ಜಿಲಿಂಗ್ ಮತ್ತು ಜಲ್ಪೈಗುರಿ ಜಿಲ್ಲೆಗಳ ಕೋವಿಡ್ ಆಸ್ಪತ್ರೆಯ ದಬಗ್ರಾಮ್-ಫುಲ್ಬಾರಿ ಶವಾಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಈ ಸ್ಮಶಾನದಿಂದ ಇತ್ತೀಚೆಗೆ ಅಧಿಸೂಚನೆ ನೀಡಲಾಗಿದ್ದು, ಪ್ರತಿ ಶವಸಂಸ್ಕಾರಕ್ಕೂ ಮೃತರ ಸಂಬಂಧಿಕರು 1,150 ರೂ. ಪಾವತಿಸಬೇಕೆಂದು ಸೂಚಿಸಲಾಗಿದೆ.
ಕೊರೊನಾ ಸೋಂಕಿತರು ಅಥವಾ ಶಂಕಿತರ ಶವದ ಸಂಸ್ಕಾರವನ್ನು ಮೃತರ ಕುಟುಂಬಸ್ಥರು ಮಾಡುವ ಹಾಗಿಲ್ಲ. ಹೀಗಾಗಿ ಸ್ಮಶಾನದಲ್ಲೇ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಇದಕ್ಕೆ ಬೇಕಾದ ವೆಚ್ಚವನ್ನು ಭರಿಸುವ ನಿಟ್ಟಿನಲ್ಲಿ ಈ ಮೊತ್ತವನ್ನು ಮೃತರ ಕುಟುಂಬಸ್ಥರು ಭರಿಸಬೇಕಾಗಿ ಸೂಚನೆ ನೀಡಲಾಗಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.