ಕರ್ನಾಟಕ

karnataka

ETV Bharat / bharat

ಜೆಇಇ, ನೀಟ್​ ಪರೀಕ್ಷೆ ಮುಂದೂಡಲು ಕೇಂದ್ರಕ್ಕೆ ಮಮತಾ ಮನವಿ

ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಮುಖ್ಯಮಂತ್ರಿಗಳ ಕೊನೆಯ ವಿಡಿಯೋ ಕಾನ್ಫರೆನ್ಸ್​ನಲ್ಲಿ ಜೆಇಇ ಮತ್ತು ನೀಟ್​ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.

ಕೇಂದ್ರಕ್ಕೆ ಮಮತಾ ಮನವಿ
ಕೇಂದ್ರಕ್ಕೆ ಮಮತಾ ಮನವಿ

By

Published : Aug 24, 2020, 4:15 PM IST

ಕೋಲ್ಕತಾ (ಪಶ್ಚಿಮ ಬಂಗಾಳ): ಕೊರೊನಾ ಹಿನ್ನೆಲೆಯಲ್ಲಿ ಜೆಇಇ ಮತ್ತು ನೀಟ್​ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.

ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಜೆಇಇ ಮತ್ತು ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ನೀಟ್​ ಪರೀಕ್ಷೆಗಳನ್ನು ಬರೆಯಲು ವಿದ್ಯಾರ್ಥಿಗಳು ತಯಾರಾಗಿದ್ದಾರೆ. ಆದರೆ ಕೊರೊನಾ ಹಾವಳಿಯಿಂದ ಸಂಕಷ್ಟ ಎದುರಾಗುತ್ತದೆ ಎಂಬ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಈ ನಿರ್ಧಾರ ಕೈಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಮುಖ್ಯಮಂತ್ರಿಗಳ ಕೊನೆಯ ವಿಡಿಯೋ ಸಂವಾದದಲ್ಲಿ ಬ್ಯಾನರ್ಜಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

"ಮೋದಿ ಅವರೊಂದಿಗಿನ ಕೊನೆಯ ವೀಡಿಯೊ ಸಂವಾದದಲ್ಲಿ, 2020ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ವಿಶ್ವವಿದ್ಯಾನಿಲಯಗಳು/ಕಾಲೇಜುಗಳಲ್ಲಿ ಟರ್ಮಿನಲ್ ಪರೀಕ್ಷೆಗಳನ್ನು ಪೂರ್ಣಗೊಳಿಸುವಂತೆ ಹೊರಡಿಸಿರುವಯುಜಿಸಿ ಮಾರ್ಗಸೂಚಿಗಳ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ. ಕೊರೊನಾದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತದೆ ಎಂದ ದೃಷ್ಟಿಯಿಂದ ಈ ಮನವಿ ಮಾಡಿದ್ದೇನೆ" ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಜೆಇಇ ಪರೀಕ್ಷೆಯು ಸೆಪ್ಟೆಂಬರ್ 1ರಿಂದ 6ರವರೆಗೆ ನಡೆಯಲಿದ್ದು, ಜೆಇಇ (ಅಡ್ವಾನ್ಸ್ಡ್) ಸೆಪ್ಟೆಂಬರ್ 27ರಂದು ನಡೆಯಲಿದೆ. ಇನ್ನು ನೀಟ್ ಪರೀಕ್ಷೆ ಸೆಪ್ಟೆಂಬರ್ 13ರಂದು ನಡೆಯಲಿದೆ.

ABOUT THE AUTHOR

...view details