ನವದೆಹಲಿ: ಕಳೆದ 24 ಗಂಟೆಯಲ್ಲಿ 909 ಜನರಿಗೆ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು,34 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 8356 ಆಗಿದ್ದು, ಇದರಲ್ಲಿ 716 ಮಂದಿ ಗುಣಮುಖರಾಗಿರುವ ಕಾರಣ ಸಧ್ಯ ಆಸ್ಪತ್ರೆಗಳಲ್ಲಿ 7367 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ದೇಶದಲ್ಲಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಮುಂದಿನ 15 ದಿನಗಳ ಕಾಲ ಲಾಕ್ಡೌನ್ ವಿಸ್ತರಣೆ ಮಾಡಿ ಎಲ್ಲ ರಾಜ್ಯಗಳು ಆದೇಶ ಹೊರಹಾಕುತ್ತಿವೆ. ಈಗಾಗಲೇ ಪಂಜಾಬ್,ಒಡಿಶಾ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳು ಈ ನಿರ್ಧಾರ ಹೊರಹಾಕಿವೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 1761 ಕೇಸ್ಗಳಿದ್ದು, 127 ಸಾವು ಸಂಭವಿಸಿವೆ. ದೆಹಲಿಯಲ್ಲಿ 1069 ಸೋಂಕಿತರಲ್ಲಿ 19 ಸಾವು, ತಮಿಳುನಾಡಿನಲ್ಲಿ 969 ಮಂದಿಗೆ ಸೋಂಕು 12 ಸಾವು, ರಾಜಸ್ಥಾನದಲ್ಲಿ 700 ಸೋಂಕಿತರಲ್ಲಿ 3 ಸಾವು, ಉತ್ತರಪ್ರದೇಶದಲ್ಲಿ 452 ಸೋಂಕಿತರಲ್ಲಿ 45 ಮಂದಿ ಡಿಸ್ಚಾರ್ಜ್ ಆಗಿದ್ದು 5 ಸಾವು ಸಂಭವಿಸಿವೆ.
ಉಳಿದಂತೆ ಮಧ್ಯಪ್ರದೇಶದ 532, ತೆಲಂಗಾಣ 504, ಗುಜರಾತ್ 432, ಆಂಧ್ರಪ್ರದೇಶ 381, ಕೇರಳ 364 ಕೇಸ್ ಕಂಡು ಬಂದಿದ್ದು, ಕರ್ನಾಟಕದಲ್ಲಿ 214 ಜನರಲ್ಲಿ ಕೇಸ್ ಕಾಣಿಸಿಕೊಂಡಿವೆ.
ಚೀನಾದ ವುಹಾನ್ನಲ್ಲಿ ಮೊದಲು ಪತ್ತೆಯಾಗಿದ್ದ ಕೊರೊನಾ ವೈರಸ್ ವಿಶ್ವಾದ್ಯಂತ 1 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ. ಹೀಗಾಗಿ ಜನರು ಮತ್ತಷ್ಟು ಆಂತಕಕ್ಕೊಳಗಾಗಿದ್ದಾರೆ.