ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಪರಿಹಾರ ನಿಧಿಗೆ 4 ವರ್ಷದ ಬಾಲಕನೋರ್ವ 971 ರೂಪಾಯಿ ದೇಣಿಗೆ ನೀಡಿದ್ದಾನೆ.
ಸೈಕಲ್ ಖರೀದಿಗಾಗಿ ಕೂಡಿಟ್ಟಿದ್ದ ಹಣ ಸಿಎಂ ಪರಿಹಾರ ನಿಧಿಗೆ ನೀಡಿದ 4 ವರ್ಷದ ಪೋರ - ಮಹಾಮಾರಿ ಕೊರೊನಾ
ಮಹಾಮಾರಿ ಕೊರೊನಾ ವಿರುದ್ಧದ ಹೋರಾಟಕ್ಕೆ ನಾಲ್ಕರ ಹರೆಯದ ಪುಟ್ಟ ಪೋರ ಕೈಜೋಡಿಸಿದ್ದಾನೆ.
Andhra Pradesh Boy Donates Rs 971
ಹೇಮಂತ ಎಂಬ ಬಾಲಕ ಹೊಸ ಸೈಕಲ್ ಖರೀದಿ ಮಾಡಬೇಕು ಎಂಬ ಉದ್ದೇಶದಿಂದ ಹಣ ಕೂಡಿಡುತ್ತಿದ್ದ. ಆದರೆ ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಆ ಹಣವನ್ನು ಹಿಂದೆ ಮುಂದೆ ನೋಡದೆ ಕೊಟ್ಟಿದ್ದಾನೆ.
ರಾಜ್ಯ ಸಚಿವ ಪೆರ್ನಿ ವೆಂಕಟ್ರಮಯ್ಯ ಅವರನ್ನು ಭೇಟಿಯಾದ ಬಾಲಕ ಈ ಹಣವನ್ನು ಹಸ್ತಾಂತರಿಸಿದ್ದಾನೆ. ಮಗುವಿನ ನಿರ್ಧಾರಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಆದಷ್ಟು ಬೇಗ ಸೈಕಲ್ ಗಿಫ್ಟ್ ಕೊಡುವ ಭರವಸೆ ಕೊಟ್ಟರು.