ನವದೆಹಲಿ :ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆ ದೇಶದ 20 ಸ್ಥಳಗಳಲ್ಲಿ 30,000ಕ್ಕೂ ಹೆಚ್ಚು ನಿರ್ಗತಿಕರಿಗ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಮಂಗಳವಾರ ಊಟ ನೀಡಿದೆ.
ಹಸಿದವರ ನೆರವಿಗೆ ನಿಂತ ರೈಲ್ವೆ ಇಲಾಖೆ.. ಐಆರ್‌ಸಿಟಿಸಿಯಿಂದ 30 ಸಾವಿರ ಮಂದಿಗೆ ಉಪಹಾರ.. - ಕೊರೊನಾ ವೈರಸ್ ಸಾಂಕ್ರಾಮಿಕ
ಹೌರಾ, ಪಾಟ್ನಾ, ಗಯಾ, ರಾಂಚಿ, ಕತಿಹಾರ್, ದೀನ್ ದಯಾಳ್ ಉಪಾಧ್ಯಾಯ, ವಿಜಯವಾಡ, ಖುರ್ದಾ, ಕಾಡ್ಪಾಲಿ, ಧನ್ಬಾದ್, ಗುವಾಹಟಿ ಮತ್ತು ಸಮಸ್ತಿಪುರ ನಿಲ್ದಾಣಗಳಲ್ಲಿಯೂ ಊಟವನ್ನು ಒದಗಿಸಲಾಯಿತು.
20 ಸ್ಥಳಗಳಲ್ಲಿ ಅಗತ್ಯವಿರುವ 30,850 ಮಂದಿಗೆ ಊಟ ಪೂರೈಸಿದ್ದೇವೆ ಎಂದು ಐಆರ್‌ಸಿಟಿಸಿ ವಕ್ತಾರ ಸಿದ್ಧಾರ್ಥ್ ಸಿಂಗ್ ಹೇಳಿದ್ದಾರೆ. ಐಆರ್‌ಸಿಟಿಸಿ ದೆಹಲಿ, ನಿಜಾಮುದ್ದೀನ್‌ನಲ್ಲಿ ಆರ್‌ಪಿಎಫ್, ಜಿಆರ್‌ಪಿ, ದೆಹಲಿ ಪೊಲೀಸ್ ಮತ್ತು ದೆಹಲಿ ಆಡಳಿತದ ಸಹಾಯದಿಂದ 7,000ಕ್ಕೂ ಹೆಚ್ಚು ಉಪಹಾರದ ಪೊಟ್ಟಣ ಒದಗಿಸಿದೆ. ಬೆಂಗಳೂರಿನಲ್ಲಿ 2,450 ಜನರಿಗೆ, ಹುಬ್ಬಳ್ಳಿಯಲ್ಲಿ 700 ಮತ್ತು ಬಾಂಬೆ ಸೆಂಟ್ರಲ್ ಪ್ರದೇಶದಲ್ಲಿ 3,400 ಜನರಿಗೆ ಊಟ ಪೂರೈಸಲಾಗಿದೆ.
ಇತ್ತ ಹೌರಾ, ಪಾಟ್ನಾ, ಗಯಾ, ರಾಂಚಿ, ಕತಿಹಾರ್, ದೀನ್ ದಯಾಳ್ ಉಪಾಧ್ಯಾಯ, ವಿಜಯವಾಡ, ಖುರ್ದಾ, ಕಾಡ್ಪಾಲಿ, ಧನ್ಬಾದ್, ಗುವಾಹಟಿ ಮತ್ತು ಸಮಸ್ತಿಪುರ ನಿಲ್ದಾಣಗಳಲ್ಲಿಯೂ ಊಟವನ್ನು ಒದಗಿಸಲಾಯಿತು. ಅಗತ್ಯವಿರುವವರಿಗೆ ಆಹಾರವನ್ನು ತಯಾರಿಸಲು ಐಆರ್‌ಸಿಟಿಸಿ ದೇಶಾದ್ಯಂತ ಅಡುಗೆ ಮನೆಗಳನ್ನು ಸಿದ್ಧಪಡಿಸಿದೆ.