ETV Bharat Karnataka

ಕರ್ನಾಟಕ

karnataka

ETV Bharat / bharat

ರೈತನ ಕೈಹಿಡಿದ ಸೊಪ್ಪು... ಒಂದು ಕೊತ್ತಂಬರಿ ಕಟ್ಟಿಗೆ ಪಡೆದುಕೊಂಡಿದ್ದು 330 ರೂ ! - ತರಕಾರಿ

ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ತರಕಾರಿ - ಸೊಪ್ಪಿನ ಬೆಲೆ ಗಗನ ಮುಖಿಯಾಗಿದೆ.

ರೈತನ ಕೈಹಿಡಿದ ಸೊಪ್ಪು
author img

By

Published : Jul 17, 2019, 4:07 PM IST

Updated : Jul 17, 2019, 4:23 PM IST

ನಾಶಿಕ್​:ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರ ಮಧ್ಯೆ ತರಕಾರಿ ಹಾಗೂ ಸೊಪ್ಪಿನ ಬೆಲೆ ಗಗನಕ್ಕೇರಿದೆ.

ಪ್ರಮುಖವಾಗಿ ಕೊತ್ತಂಬರಿ ಬೆಲೆ ಸಿಕ್ಕಾಪಟ್ಟೆ ಹೆಚ್ಚಾಗಿದ್ದು, ಒಂದು ಕಟ್ಟಿನ ಬೆಲೆ 331ರೂಗೆ ಮಾರಾಟವಾಗುತ್ತಿದೆ. ಇದರ ಜತೆಗೆ ವಿವಿಧ ತರಕಾರಿಗಳ ಬೆಲೆ ಸಹ ಹೆಚ್ಚಳವಾಗಿವೆ. ಪ್ರಮುಖವಾಗಿ ನಾಸಿಕ್​, ಇಗಟಾಪುರ್​, ದಿಂಡೂರಾ ಪ್ರದೇಶಗಳಲ್ಲಿ ತರಕಾರಿ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರು ಹರಸಾಹಸ ಪಡುವಂತಾಗಿದೆ.

ನಾಸಿಕ್​ ಮಾರುಕಟ್ಟೆಗೆ ಚಿಕ್ಕ ಚಿಕ್ಕ 354 ಕೊತ್ತಂಬರಿ ಸೊಪ್ಪಿನ ಕಟ್ಟು ತೆಗೆದುಕೊಂಡು ಬಂದಿದ್ದ ರೈತನೊಬ್ಬ 100 ಕಟ್ಟು (ಬಂಡಲ್​) ಮಾರಾಟ ಮಾಡಿ 33,100 ರೂ ತೆಗೆದುಕೊಂಡು ಮನೆಗೆ ಹೋಗಿದ್ದಾಗಿ ಹೇಳಿಕೊಂಡಿದ್ದಾನೆ. ಇನ್ನು ಕಳೆದ ವಾರ ಇದರ ಬೆಲೆ 220 ರೂ. ಇತ್ತು ಎಂದು ಆತ ತಿಳಿಸಿದ್ದಾನೆ.

Last Updated : Jul 17, 2019, 4:23 PM IST

ABOUT THE AUTHOR

author-img

...view details